ಬೆಂಗಳೂರಿನ ಕರಾಚಿ ಬೇಕರಿ ವಿರುದ್ಧ ಪ್ರತಿಭಟನೆ

Published : Feb 24, 2019, 08:49 AM IST
ಬೆಂಗಳೂರಿನ ಕರಾಚಿ ಬೇಕರಿ ವಿರುದ್ಧ ಪ್ರತಿಭಟನೆ

ಸಾರಾಂಶ

ಬೆಂಗಳೂರಿನ ಕರಾಚಿ ಹೆಸರಿನ ಬೇಕರಿ ಮುಂದೆ ಹಿಂದೂ ಪರ ಸಂಘಟನೆಗಳು ಪ್ರತಿಭಟನೆ ನಡೆಸಿವೆ. ಮಾಲೀಕರು, ತಮ್ಮ ಬೇಕರಿ ಹೆಸರನ್ನು ಬದಲಾಯಿಸಲು ಸಮ್ಮತಿಸಿ ದ ಬಳಿಕ ಪರಿಸ್ಥಿತಿ ಶಾಂತವಾಗಿದೆ. 

ಬೆಂಗಳೂರು: ಪಾಕಿಸ್ತಾನದ ‘ಕರಾಚಿ’ ನಗರದ ಹೆಸರಿನ ನಾಮಫಲಕ ಹೊಂದಿದ್ದ ಬೇಕರಿ ಮುಂದೆ ಹಿಂದೂ ಪರ ಸಂಘಟನೆಗಳು ಪ್ರತಿಭಟನೆ ನಡೆಸಿದ ಘಟನೆ ಇಂದಿರಾನಗರದಲ್ಲಿ ನಡೆದಿದೆ. 

ಸಂಘಟನೆಗಳ ಪ್ರತಿಭಟನೆಗೆ ಮಣಿದ ಬೇಕರಿ ಮಾಲೀಕರು, ತಮ್ಮ ಬೇಕರಿ ಹೆಸರನ್ನು ಬದಲಾಯಿಸಲು ಸಮ್ಮತಿಸಿ ದ ಬಳಿಕ ಪರಿಸ್ಥಿತಿ ಶಾಂತವಾಯಿತು.

ಹೈದರಾಬಾದ್ ಮೂಲದ ವ್ಯಕ್ತಿಯೊಬ್ಬರು, ಇಂದಿರಾನಗರದ 100 ಅಡಿ ರಸ್ತೆಯಲ್ಲಿ ‘ಕರಾಚಿ ಬೇಕರಿ’ ನಡೆಸುತ್ತಿದ್ದಾರೆ. ಇತ್ತೀಚೆಗೆ ಪುಲ್ವಾಮಾ ಉಗ್ರರ ದಾಳಿ ಬಳಿಕ ಪಾಕಿಸ್ತಾನದ ವಿರುದ್ಧ ಕೆರಳಿರುವ ನಾಗರಿಕರು, ಶತ್ರು ರಾಷ್ಟ್ರದ ನಗರದ ಹೆಸರು ಇಟ್ಟಿರುವುದನ್ನು ಗಮನಿಸಿದ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. 

PREV
click me!

Recommended Stories

Karnataka Covid-19 Cases: ಕರ್ನಾಟಕದಲ್ಲಿ Covid-19 ಮತ್ತೆ ಏರಿಕೆ; 5 ಹೊಸ ಕೇಸ್ ದಾಖಲು, ಬೆಂಗಳೂರಿನಲ್ಲಿ ಒಂದು ಸಾವು!
Marathahalli Incident: ದೇವರ ಹೆಸರಲ್ಲಿ ಹಣಕ್ಕೆ ಡಿಮ್ಯಾಂಡ್; ಕೊಡದಿದ್ದಕ್ಕೆ ಯುವಕನ ಮೇಲೆ ಹಲ್ಲೆ!