
ಬೆಂಗಳೂರು : ನಗರದಲ್ಲಿ ಭಾನುವಾರವೂ [ಫೆ.11] ಮಳೆ ಮುಂದುವರಿದಿದ್ದು, ಮೇಖ್ರಿ ವೃತ್ತದ ಬಳಿ ಒಂದು ಮರ ಧರೆಗುರುಳಿದೆ. ಕಳೆದೆರಡು ದಿನಗಳಿಂದ ರಾಜ್ಯ ಸೇರಿದಂತೆ ಬೆಂಗಳೂರಿನಲ್ಲಿ ಗುಡುಗು ಸಿಡಿಲು ಸಹಿತ ಮಳೆಯಾಗುತ್ತಿದೆ.
ಭಾನುವಾರ ನಗರದ ಉತ್ತರ ಭಾಗದಲ್ಲಿ ಹೆಚ್ಚಿನ ಪ್ರಮಾಣದ ಮಳೆಯಾದ ವರದಿಯಾಗಿದೆ. ಮಳೆಗೆ ಮೇಖ್ರಿ ವೃತ್ತದಲ್ಲಿ ಒಂದು ಮರ ಧರೆಗುರುಳಿತ್ತು. ಬಿಬಿಎಂಪಿ ಅರಣ್ಯ ವಿಭಾಗದ ಸಿಬ್ಬಂದಿ ಮರವನ್ನು ತೆರವು ಮಾಡಿದ್ದಾರೆ.
ಶಿವಕೋಟೆಯಲ್ಲಿ 78 ಮಿ.ಮೀ, ಕೆಎಸ್‌ಎನ್‌ಡಿಎಂಸಿ ಕೇಂದ್ರದಲ್ಲಿ 60 ಮಿ.ಮೀ. ಅತಿ ಹೆಚ್ಚು ಮಳೆಯಾದ ವರದಿಯಾಗಿದೆ. ಇನ್ನುಳಿದಂತೆ ಸಾಧಾರಣ ಮಳೆಯಾಗಿದ್ದು, ಮೋಡ ಕವಿದ ವಾತಾವರಣ ಉಂಟಾಗಿತ್ತು.