ಬೆಂಗಳೂರಲ್ಲಿ ಆರಂಭವಾಗುತ್ತಾ ಡ್ಯಾನ್ಸ್ ಬಾರ್

Published : Jan 18, 2019, 09:30 AM IST
ಬೆಂಗಳೂರಲ್ಲಿ ಆರಂಭವಾಗುತ್ತಾ ಡ್ಯಾನ್ಸ್ ಬಾರ್

ಸಾರಾಂಶ

ಡ್ಯಾನ್ಸ್ ಬಾರ್‌ಗಳ ಪುನಾರಂಭಕ್ಕೆ ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ. ಈ ನಿಟ್ಟಿನಲ್ಲಿ ರಾಜ್ಯದಲ್ಲಿಯೂ ಡ್ಯಾನ್ಸ್ ಬಾರ್ ಮಾಲಿಕರು ಸರ್ಕಾರದ ಮೊರೆ ಹೋಗಲು ನಿರ್ಧರಿಸಿದ್ದಾರೆ. 

ಬೆಂಗಳೂರು :   ಡ್ಯಾನ್ಸ್ ಬಾರ್‌ಗಳ ಪುನಾರಂಭಕ್ಕೆ ಸುಪ್ರೀಂ ಕೋರ್ಟ್ ಹಾದಿ ಸುಗಮ ಮಾಡಿಕೊಟ್ಟಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲೂ ಸುಪ್ರೀಂ ಕೋರ್ಟ್ ಆದೇಶ ಪಾಲನೆಗೆ ಅನುಮತಿ ನೀಡುವಂತೆ ಡ್ಯಾನ್ಸ್ ಬಾರ್ ಮಾಲಿಕರು ಸರ್ಕಾರದ ಮೊರೆ ಹೋಗಲು ನಿರ್ಧರಿಸಿದ್ದಾರೆ. 

ಕರ್ನಾಟಕದಲ್ಲಿಯೂ ಡ್ಯಾನ್ಸ್ ಬಾರ್‌ಗೆ ಅವಕಾಶ ಕೋರಿ ಸಂಬಂಧಪಟ್ಟ ಪೊಲೀಸ್ ಇಲಾಖೆಗೆ ಮನವಿ ಸಲ್ಲಿಸುವ ಸಾಧ್ಯತೆ ಇದೆ ಎಂದು ಕರ್ನಾಟಕ ಹೋಟೆಲ್ ಮತ್ತು ರೆಸ್ಟೋರೆಂಟ್ ಸಂಘದ ಗೌರವಾಧ್ಯಕ್ಷ ಮಧುಕರ್ ಶೆಟ್ಟಿ ಹೇಳಿದ್ದಾರೆ. ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್, ಮಹಾರಾಷ್ಟ್ರ ಕಾಯ್ದೆಗೆ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. 

ಆ ತೀರ್ಪಿನ ಪ್ರತಿ ನಮಗೆ ತಲುಪಿಲ್ಲ. ತೀರ್ಪುನ್ನು ನಾವು ಓದಿಕೊಂಡು, ಬಳಿಕ ಕಾನೂನು ತಜ್ಞರನ್ನು ಸಂಪರ್ಕಿಸಿ ನಿರ್ಧರ ಮಾಡುತ್ತೇವೆ ಎಂದು ಹೇಳಿದ್ದಾರೆ. ಮಹಾರಾಷ್ಟ್ರ ಸರ್ಕಾರ ಡ್ಯಾನ್ಸ್ ಬಾರ್‌ಗಳಲ್ಲಿ ಯುವತಿಯರು ನೃತ್ಯ ಮಾಡುವುದು ಅಶ್ಲೀಲ ಎಂದು ಡ್ಯಾನ್ಸ್ ಬಾರ್ ನಿಷೇಧಿಸಿತ್ತು. 

ಆದರೆ ಇದರ ವಿರುದ್ಧ ಡ್ಯಾನ್ಸ್ ಮಾಲಿಕರು ಬಾಂಬೆ ಹೈಕೋರ್ಟ್, 2006 ರಲ್ಲಿ ಸರ್ಕಾರ ಆದೇಶ ವಜಾಗೊಳಿಸಿತ್ತು. ಬಳಿಕ ಅಲ್ಲಿನ ಸರ್ಕಾರ ಕೆಲವೊಂದು ಕಠಿಣ ನಿಯಮವನ್ನು ವಿಧಿಸಿತ್ತು. ಇದೀಗ ಅರ್ಜಿಯ ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್ ಡ್ಯಾನ್ಸ್ ಬಾರ್‌ಗಳನ್ನು ನಿಷೇಧಿಸಲು ಸಾಧ್ಯವಿಲ್ಲ. 

ಕಟ್ಟು ನಿಟ್ಟಾಗಿ ನಿಯಂತ್ರಿಸಬಹುದು ಎಂದು ಹೇಳಿದೆ. ಈ ಆದೇಶದ ಬೆನ್ನಲ್ಲೇ, ರಾಜ್ಯದಲ್ಲೂ ಡ್ಯಾನ್ಸ್ ಬಾರ್‌ಗಳ ಮಾಲಿಕರು ಕೋರ್ಟ್ ಮೆಟ್ಟಿಲೇರಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ‘ಕನ್ನಡಪ್ರಭ’ಕ್ಕೆ ಪ್ರತಿಕ್ರಿಯಿಸಿದ ಡಾನ್ಸ್ ಬಾರ್ ಮಾಲಿಕರೊಬ್ಬರು ಸುಪ್ರೀಂ ಕೋರ್ಟ್ ತೀರ್ಪು ಸ್ವಾಗತರ್ಹವಾಗಿದೆ. ಡ್ಯಾನ್ಸ್ ಬಾರ್‌ಗೆ ಕೆಲವೊಂದು ನಿಯಮಗಳನ್ನು ಹಾಕಿದೆ. ಅದರಂತೆ ಸಿಸಿಟಿವಿ ಕಡ್ಡಾಯವಾಗಿ ಅಳವಡಿಸಲು ಸಾಧ್ಯವಿಲ್ಲ. ಇದು ಮಹಿಳೆಯರ ಖಾಸಗಿತನಕ್ಕೆ ಧಕ್ಕೆ ಉಂಟಾಗುತ್ತದೆ. ನಗರದಲ್ಲೂ ಡ್ಯಾನ್ಸ್ ಬಾರ್‌ಗೆ ಅನುಮತಿ ನೀಡುವಂತೆ ನಗರ ಪೊಲೀಸ್ ಆಯುಕ್ತರಿಗೂ ಮನವಿ ಮಾಡಲಾಗುವುದು ಎಂದು ತಿಳಿಸಿದರು.

PREV
click me!

Recommended Stories

Karnataka Covid-19 Cases: ಕರ್ನಾಟಕದಲ್ಲಿ Covid-19 ಮತ್ತೆ ಏರಿಕೆ; 5 ಹೊಸ ಕೇಸ್ ದಾಖಲು, ಬೆಂಗಳೂರಿನಲ್ಲಿ ಒಂದು ಸಾವು!
Marathahalli Incident: ದೇವರ ಹೆಸರಲ್ಲಿ ಹಣಕ್ಕೆ ಡಿಮ್ಯಾಂಡ್; ಕೊಡದಿದ್ದಕ್ಕೆ ಯುವಕನ ಮೇಲೆ ಹಲ್ಲೆ!