ಮಕ್ಕಳನ್ನು ಶಾಲೆಗೆ ಕಳಿಸುವ ಪೋಷಕರು ಓದಲೇಬೇಕಾದ ಸುದ್ದಿ ಇದು..!

By Web DeskFirst Published Jul 16, 2018, 8:55 PM IST
Highlights

ಜಂಜಾಟದ ಬದುಕಿನ ನಡುವೆ ಮಕ್ಕಳನ್ನು ಶಾಲೆಗೆ ಕಳುಹಿಸುವುದೇ ಒಂದು ದೊಡ್ಡ ಸಾಹಸ. ಅದೆಷ್ಟೋ ಮೊತ್ತದ ಡೊನೇಶನ್ ತೆತ್ತು ಮಕ್ಕಳನ್ನು ಪ್ರತಿಷ್ಠಿತ ಶಾಲೆಯಲ್ಲಿ ಓದಿಸಬೇಕು ಎಂದು ಪಾಲಕರು ಕಳುಹಿಸಿಕೊಡುತ್ತಾರೆ. ಶಾಲಾ ಆಡಳಿತ ಮಂಡಳಿ ಸಹ ಬಸ್  ವ್ಯವಸ್ಥೆ ಮಾಡಿರುತ್ತದೆ. ಈ ಪ್ರಶ್ನೆ ಈಗ ಯಾಕೆ ಕೇಳ್ತಿದ್ದೀರಾ ಅಂದ್ರಾ.. ಈ ಸುದ್ದಿ ಓದಿ

ಬೆಂಗಳೂರು[ಜು.16] ಪೋಷಕರೇ ಶಾಲಾ ವಾಹನಗಳಲ್ಲಿ ನಿಮ್ಮ ಮಕ್ಕಳನ್ನು ಕಳುಹಿಸುತ್ತಿದ್ದೀರಾ? ಹುಷಾರ್...! ಹುಷಾರ್...! ಈ ಸುದ್ದಿಯನ್ನು ಗಮನವಿಟ್ಟು ಓದಿ, ಸಂಚಾರಿ ನಿಯಮಗಳನ್ನ ಉಲ್ಲಂಘನೆ ಮಾಡುತ್ತಿದ್ದ ಶಾಲಾ ವಾಹನಗಳಿಗೆ ಪೊಲೀಸರು ದಂಡ ವಿಧಿಸಿ ಎಚ್ಚರಿಕೆ ನೀಡಿದ್ದಾರೆ.

ದಂಡ ವಿಧಿಸಿದ್ದರೆ ದೊಡ್ಡ ಸುದ್ದಿ ಎಂದು ಹೇಳಲಾಗುತ್ತಿರಲಿಲ್ಲ. ಆದರೆ ಬರೋಬ್ಬರಿ ಒಂದೆ ದಿನ ಅಂದರೆ ಇಂದು 3,264 ಕೇಸ್ ದಾಖಲು ಮಾಡಿ, ಬರೋಬ್ಬರಿ 4,33,200 ರೂ. ದಂಡ ವಸೂಲಿ ಮಾಡಿದ್ದಾರೆ.  ಅಂದರೆ ಶಾಲಾ ವಾಹನಗಳ ನಿಯಮ ಪಾಲನೆಯನ್ನು ನೀವೇ ಅರ್ಥ ಮಾಡಿಕೊಳ್ಳಿ.

ಸುರಕ್ಷತೆ ಕ್ರಮಗಳಿಲ್ಲದೆ ವಾಹನಗಳಲ್ಲಿ ಮಕ್ಕಳನ್ನು ಕರೆದೊಯ್ಯುತ್ತಿದ್ದ ಶಾಲಾ ಬಸ್ ಗಳು, ಸಂಚಾರಿ ನಿಯಮಗಳನ್ವಯ ಕೆಲ ದಾಖಲಾತಿಗಳನ್ನು ಹೊಂದಿರದ ಶಾಲಾ ವಾಹನಗಳು, ಸಾಮಾರ್ಥ್ಯಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನ ಕರೆದೊಯ್ಯುತ್ತಿದ್ದ ವಾಹನ ಸೇರಿದಂತೆ ಒಂದೇ ದಿನ ವಿವಿಧ ನಿಯಮಗಳನ್ನು ಪರಿಶೀಲನೆ ಮಾಡಿದಾಗ ಸಾಕು ಸಾಕಾಪ್ಪಾ ಎನ್ನುವಷ್ಟು ಪ್ರಕರಣಗಳು ದಾಖಲಾಗಿದೆ.

click me!