ಬೈಕ್‌ ಟ್ಯಾಕ್ಸಿ ನಿಷೇಧ ಬೆನ್ನಲ್ಲೇ ಟ್ಯಾಕ್ಸಿ ಸೇವೆ ಸಂಸ್ಥೆಗಳಿಂದ ದುಪ್ಪಟ್ಟು ವಸೂಲಿ!

Published : Jun 20, 2025, 06:32 AM IST
taxi strike

ಸಾರಾಂಶ

ಹೈಕೋರ್ಟ್‌ ಆದೇಶದಂತೆ ಬೈಕ್‌ ಟ್ಯಾಕ್ಸಿ ನಿಷೇಧಿಸಿದ ನಂತರ ಆ್ಯಪ್‌ ಆಧಾರಿತ ಟ್ಯಾಕ್ಸಿ ಸೇವೆ ನೀಡುವ ಸಂಸ್ಥೆಗಳು ಪ್ರಯಾಣಿಕರಿಂದ ಕಡಿಮೆ ದೂರದ ಪ್ರಯಾಣಕ್ಕೂ ಭಾರೀ ಪ್ರಯಾಣ ದರ ವಸೂಲಿಗೆ ಮುಂದಾಗಿವೆ ಎಂದು ಸಾರ್ವಜನಿಕರು ದೂರಿದ್ದಾರೆ.

ಬೆಂಗಳೂರು : ಹೈಕೋರ್ಟ್‌ ಆದೇಶದಂತೆ ಬೈಕ್‌ ಟ್ಯಾಕ್ಸಿ ನಿಷೇಧಿಸಿದ ನಂತರ ಆ್ಯಪ್‌ ಆಧಾರಿತ ಟ್ಯಾಕ್ಸಿ ಸೇವೆ ನೀಡುವ ಸಂಸ್ಥೆಗಳು ಪ್ರಯಾಣಿಕರಿಂದ ಕಡಿಮೆ ದೂರದ ಪ್ರಯಾಣಕ್ಕೂ ಭಾರೀ ಪ್ರಯಾಣ ದರ ವಸೂಲಿಗೆ ಮುಂದಾಗಿವೆ ಎಂದು ಸಾರ್ವಜನಿಕರು ದೂರಿದ್ದಾರೆ.

ವೈಟ್‌ ಬೋರ್ಡ್‌ ವಾಹನಗಳಿಂದ ಟ್ಯಾಕ್ಸಿ ಸೇವೆ ನೀಡುವುದು ನಿಯಮ ಬಾಹಿರವೆಂದು ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಬೈಕ್‌ ಟ್ಯಾಕ್ಸಿ ಸೇವೆಯನ್ನು ನಿಷೇಧಿಸಲಾಗಿದೆ. ಇದರಿಂದಾಗಿ ಒಲಾ, ಉಬರ್‌, ರ್‍ಯಾಪಿಡೋದಂತಹ ಆ್ಯಪ್‌ ಆಧಾರಿತ ಸೇವೆ ನೀಡುವ ಸಂಸ್ಥೆಗಳು ಕಳೆದ ಸೋಮವಾರದಿಂದ ಬೈಕ್‌ ಟ್ಯಾಕ್ಸಿ ಸೇವೆ ಸ್ಥಗಿತಗೊಳಿಸಿವೆ. ಆದರೆ, ಬೈಕ್‌ ಟ್ಯಾಕ್ಸಿ ಸೇವೆಯಿಂದ ಬರುತ್ತಿದ್ದ ಆದಾಯವನ್ನು ಸರಿದೂಗಿಸಲು ಆಟೋ ಸೇರಿದಂತೆ ಇತರ ಟ್ಯಾಕ್ಸಿ ಸೇವೆಗಳಿಗೆ ದುಬಾರಿ ಪ್ರಯಾಣ ದರ ನಿಗದಿ ಮಾಡಿವೆ.

ಉದಾಹರಣೆ ಎನ್ನುವಂತೆ ಟೌನ್‌ ಹಾಲ್‌ನಿಂದ ಮೆಜೆಸ್ಟಿಕ್ ಬಸ್‌ ನಿಲ್ದಾಣಕ್ಕೆ ಸುಮಾರು 2 ಕಿಮೀ ದೂರವಿದ್ದು, ಇಷ್ಟು ದೂರ ಕ್ರಮಿಸಲು 98ರಿಂದ 110 ರು. ನಿಗದಿ ಮಾಡಲಾಗಿದೆ. ಅದೇ ರೀತಿ ಹಡ್ಸನ್‌ ವೃತ್ತದಿಂದ ಶಾಂತಿನಗರಕ್ಕೆ 1.4 ಕಿಮೀ ದೂರವಿದ್ದು, ಪ್ರಯಾಣ ದರವನ್ನು 90 ರು.ಗೆ ನಿಗದಿ ಮಾಡಲಾಗಿದೆ. ಹೀಗೆ ಪ್ರತಿ ಪ್ರಯಾಣದ ಪ್ರಯಾಣ ದರವನ್ನು ನಿಯಮಕ್ಕಿಂತ ಶೇ. 100ರಷ್ಟು ಹೆಚ್ಚಿಸಲಾಗಿದೆ.

ಸರ್ಕಾರದ ವಿರುದ್ಧ ಬೈಕ್‌ ಟ್ಯಾಕ್ಸಿ ಚಾಲಕರ ಆಕ್ರೋಶ

ಬೈಕ್‌ ಟ್ಯಾಕ್ಸಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಸೂಕ್ತ ನಿಯಮ ರೂಪಿಸದೇ ಬೈಕ್‌ ಟ್ಯಾಕ್ಸಿ ಸೇವೆ ನಿಷೇಧಿಸಿರುವ ಬಗ್ಗೆ ಬೈಕ್‌ ಟ್ಯಾಕ್ಸಿ ಚಾಲಕರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಡಳಿತದಲ್ಲಿರುವವರ ಮೌನದಿಂದಾಗಿ ಗಿಗ್‌ ಕಾರ್ಮಿಕರು ಸಂಕಷ್ಟಕ್ಕೀಡಾಗುವಂತಾಗಿದೆ. ಹೀಗಾಗಿ ಬೈಕ್‌ ಟ್ಯಾಕ್ಸಿ ಮರು ಆರಂಭಕ್ಕೆ ಸೂಕ್ತ ನಿಯಮ ರೂಪಿಸಬೇಕು ಎಂದು ನಮ್ಮ ಬೈಕ್‌ ಟ್ಯಾಕ್ಸಿ ಸಂಘದ ಪ್ರತಿನಿಧಿಗಳು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.

PREV
Read more Articles on
click me!

Recommended Stories

ರಾಜ್ಯದಲ್ಲಿ ಮಳೆ ಆರ್ಭಟ, 8 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್; ಮುಂಡರಗಿ ಟವರ್ ಢಮಾರ್, ಯಾದಗಿರಿ ಸಿಡಿಲಿಗೆ 50 ಕುರಿ ಬಲಿ!
ರಸ್ತೆಗೆ ಮೊಳೆ ಎಸೆದೇ ಲಕ್ಷ ಲಕ್ಷ ದುಡೀತಾರೆ ಇವ್ರು! Nail Trap Mafia ಜಾಲಕ್ಕೆ ಹೈರಾಣಾದ ವಾಹನ ಸವಾರರು