
ಬೆಂಗಳೂರು: ಬರದ ಹಿನ್ನೆಲೆಯಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ ಹೆಬ್ಬಾಳದ ಜಿಕೆವಿಕೆಯಲ್ಲಿ ನಾಲ್ಕು ದಿನಗಳ ಕಾಲ ಆಯೋಜಿಸುತ್ತಿದ್ದ ಕೃಷಿ ಮೇಳವನ್ನು 1 ದಿನಕ್ಕೆ ಸೀಮಿತಗೊಳಿಸಲಾಗಿದೆ.
ರಾಜ್ಯದಲ್ಲಿ ಮಳೆಯ ತೀವ್ರ ಕೊರತೆಯಿಂದಾಗಿ ಕೃಷಿ ಚಟುವಟಿಕೆಗಳಿಗೆ ಹಿನ್ನಡೆಯಾಗಿದೆ. ವಿಶೇಷವಾಗಿ ವಿವಿ ವ್ಯಾಪ್ತಿಗೆ ಬರುವ ಆರು ಜಿಲ್ಲೆಗಳ 36 ತಾಲೂಕಿನಲ್ಲಿ 34 ತಾಲೂಕನ್ನು ಬರಪೀಡಿತ ಎಂದು ಸರ್ಕಾರ ಘೋಷಿಸಿದ್ದು ಸರಿಯಾಗಿ ಬಿತ್ತನೆಯೂ ಆಗಿಲ್ಲ. ಆದ್ದರಿಂದ ನವೆಂಬರ್‌ನಲ್ಲಿ ನಾಲ್ಕು ದಿನ ಆಯೋಜಿಸಬೇಕಿದ್ದ ಕೃಷಿ ಮೇಳವನ್ನು ಒಂದು ದಿನದ ಮಟ್ಟಿಗೆ ನ.13 ರಂದು ಆಯೋಜಿಸಲು ತೀರ್ಮಾನಿಸಲಾಗಿದೆ. ನೂತನ ತಳಿಗಳ ಲೋಕಾರ್ಪಣೆ, ಆರು ಜಿಲ್ಲೆಗಳ ಪ್ರಗತಿಪರ ಕೃಷಿಕರಿಗೆ ಪ್ರಶಸ್ತಿ ಪ್ರದಾನ, ವಿಶೇಷ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ.
ಈ ಹಿಂದೆ ಆ.5 ರಂದು ಕೃಷಿ ವಿವಿಯ 61ನೇ ಸಂಸ್ಥಾಪನಾ ದಿನಾಚರಣೆಯನ್ನು ಆಯೋಜಿಸಲು ತೀರ್ಮಾನಿಸಲಾಗಿತ್ತು. ಆದರೆ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್‌ನ ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಾಗಿದೆ. ಆದ್ದರಿಂದ ಸಂಸ್ಥಾಪನಾ ದಿನಾಚರಣೆಯನ್ನು ತಾತ್ಕಾಲಿಕವಾಗಿ ಮುಂದುಡಲಾಗಿದೆ ಎಂದು ವಿವಿ ತಿಳಿಸಿದೆ.
ಕೇಂದ್ರ ಸರ್ಕಾರವು ಕೆರೆ, ಬಾವಿ ಸೇರಿದಂತೆ ಇತರ ಜಲಮೂಲಗಳ ಎರಡನೇ ಗಣತಿ ಅಂಕಿ ಅಂಶಗಳನ್ನು ಪ್ರಕಟಿಸಿದೆ. ಅದರಲ್ಲಿ ಕರ್ನಾಟಕದಲ್ಲಿ 5 ವರ್ಷದಲ್ಲಿ ಶೇ.44.2ರಷ್ಟು ನೀರಿನ ಮೂಲಗಳು ಹೆಚ್ಚಾಗಿದ್ದು ಕಂಡುಬಂದಿದೆ. ಸದ್ಯ ರಾಜ್ಯದಲ್ಲಿ 38,960 ಜಲ ಮೂಲಗಳಿವೆ.
ಈ ಹಿಂದೆ 2017-18ರಲ್ಲಿ ಜಲಮೂಲಗಳ ಗಣತಿ ನಡೆಸಲಾಗಿತ್ತು. ಇದೀಗ ಎರಡನೇ ಗಣತಿಯನ್ನುಕೇಂದ್ರ ಜಲ ಸಂಪನ್ಮೂಲ ಸಚಿವ ಸಿ. ಆರ್. ಪಾಟೀಲ್ ಅವರು ಅಂತಾರಾಷ್ಟ್ರೀಯ ಜಲ ಸಪ್ತಾಹದಲ್ಲಿ ಬಿಡುಗಡೆ ಮಾಡಿದ್ದಾರೆ. ಅದರಲ್ಲಿ ಮೊದಲ ಗಣತಿಗಿಂತ 5 ಪಟ್ಟು ಸಂಖ್ಯೆಗಳನ್ನು ಹೆಚ್ಚಿಸಿಕೊಂಡಿರುವ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದ್ದು 4.74 ಲಕ್ಷ ಜಲ ಮೂಲಗಳಿವೆ. ಉತ್ತರಪ್ರದೇಶ 2.86 ಲಕ್ಷ ಅಂಕಿ ಅಂಶಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.
ಇನ್ನು ಮೊದಲ ಗಣತಿಗಿಂತ ಎರಡನೆಯ ಗಣತಿಯಲ್ಲಿ ಕರ್ನಾಟಕದ ಸಂಖ್ಯೆಯೂ ಹೆಚ್ಚಾಗಿದೆ. ಮೊದಲು ಕರ್ನಾಟಕದಲ್ಲಿ 38,960 ಜಲಮೂಲಗಳಿತ್ತು. ಆದರೆ ಈಗ ಸಶೇ.44.2ರಷ್ಟು ಹೆಚ್ಚಳವಾಗಿ 38,960ಕ್ಕೆ ಏರಿಕೆಯಾಗಿದೆ. ಈ ಪೈಕಿ 28,075 ಬಳಕೆಯಲ್ಲಿವೆ. ಆದರೆ ಮಿಜೋರಾಂ, ಅರುಣಾಚಲ ಪ್ರದೇಶ, ಜಾರ್ಖಂಡ್, ತೆಲಂಗಾಣ, ರಾಜಸ್ಥಾನ ರಾಜ್ಯಗಳಲ್ಲಿ ಜಲಮೂಲಗಳ ಸಂಖ್ಯೆ ಕಡಿಮೆಯಾಗಿದೆ.