ಅನರ್ಹ ಶಾಸಕ ಸುಧಾಕರ್‌ ಮನೆ ಬಳಿ ಗಂಧದ ಮರ ಕಳವು

Published : Oct 09, 2019, 09:40 AM IST
ಅನರ್ಹ ಶಾಸಕ ಸುಧಾಕರ್‌ ಮನೆ ಬಳಿ ಗಂಧದ ಮರ ಕಳವು

ಸಾರಾಂಶ

ಅನರ್ಹ ಶಾಸಕ ಸುಧಾಕರ್ ಮನೆ ಬಳಿ ಇರುವ ಗಂಧದ ಮರವನ್ನು ದುಷ್ಕರ್ಮಿಗಳು ಕಳವು ಮಾಡಿದ್ದಾರೆ. 

ಬೆಂಗಳೂರು [ಅ.09]:  ಅನರ್ಹಗೊಂಡಿರುವ ಶಾಸಕ ಡಾ.ಕೆ.ಸುಧಾಕರ್‌ ಮನೆ ಬಳಿ ಇದ್ದ ಶ್ರೀಗಂಧ ಮರವನ್ನು ದುಷ್ಕರ್ಮಿಗಳು ಕಳ್ಳತನ ಮಾಡಿದ್ದು, ಈ ಸಂಬಂಧ ಸದಾಶಿವ ನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಸದಾಶಿವ ನಗರದ 17ನೇ ಕ್ರಾಸ್‌ನಲ್ಲಿ ಡಾ.ಕೆ.ಸುಧಾಕರ್‌ ಅವರ ಮನೆ ಹಾಗೂ ಪಾದಚಾರಿ ಮಾರ್ಗಕ್ಕೆ ಹೊಂದಿಕೊಂಡಂತೆ ರಸ್ತೆ ಬದಿ ಶ್ರೀಗಂಧ ಮರ ಇತ್ತು. ದುಷ್ಕರ್ಮಿಗಳು ರಾತ್ರಿ ವೇಳೆ ಮರವನ್ನು ಕೊಯ್ದುಕೊಂಡು ಹೋಗಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಈ ಬಗ್ಗೆ ಸ್ಥಳೀಯರು ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಸ್ಥಳೀಯ ಸಿಸಿಟಿವಿಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ. ಇದೆ ರೀತಿ ಹಲವು ಬಾರಿ ಸದಾಶಿವನಗರದಲ್ಲಿನ ಐಐಎಸ್‌ಸಿ ಆವರಣ ಹಾಗೂ ನ್ಯಾಯಾಧೀಶರೊಬ್ಬರ ಮನೆಯ ಆವರಣದಲ್ಲಿ ಶ್ರೀಗಂಧ ಮರಗಳ ಕಳ್ಳತನವಾಗಿತ್ತು. ಅದೇ ತಂಡ ಕೃತ್ಯ ಎಸಗಿರುವ ಸಾಧ್ಯತೆ ಇದೆ. ಶೀಘ್ರ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದರು.

PREV
click me!

Recommended Stories

ಬೆಂಗಳೂರಲ್ಲಿ ಹೊಟ್ಟೆಪಾಡಿಗೆ ಕಳ್ಳತನ ಮಾಡ್ತಿದ್ದ ಕಳ್ಳನನ್ನೇ ರಾಬರಿ ಮಾಡಿದ ಖತರ್ನಾಕ್ ಕಿತಾಪತಿಗಳು!
ದರ್ಶನ್ ಗ್ಯಾಂಗ್‌ನಿಂದ ಕೊಲೆಗೀಡಾದ ರೇಣುಕಾಸ್ವಾಮಿಗೆ ಸತ್ತಮೇಲೂ ನೆಮ್ಮದಿಯಿಲ್ಲ! ಸಮಾಧಿ ಧ್ವಂಸಗೈದ ಡೆವಿಲ್ ಗ್ಯಾಂಗ್‌!