ಐಷಾರಾಮಿ ಲ್ಯಾಂಬೋರ್ಗಿನಿಯನ್ನು ಫೇಕ್‌ ನಂಬರ್‌ ಪ್ಲೇಟ್‌ ಹಾಕಿ ಓಡಿಸ್ತಿದ್ದ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ!

Published : Mar 27, 2026, 06:31 PM IST
Rickky Rai

ಸಾರಾಂಶ

ಬೆಂಗಳೂರಿನ ಅನಿಲ್ ಕುಂಬ್ಳೆ ವೃತ್ತದಲ್ಲಿ ಲ್ಯಾಂಬೋರ್ಗಿನಿ ಕಾರನ್ನು ಅಪಾಯಕಾರಿಯಾಗಿ ಡ್ರಿಫ್ಟಿಂಗ್ ಮಾಡಿದ್ದ ಮುತ್ತಪ್ಪ ರೈ ಪುತ್ರ ರಿಕಿ ರೈ ವಿರುದ್ಧ ಪ್ರಕರಣ ದಾಖಲಾಗಿದೆ. ತನಿಖೆ ವೇಳೆ, ಸಂಚಾರ ದಂಡ ತಪ್ಪಿಸಲು ಗುಜರಾತ್ ಮೂಲದ ಕಾರಿಗೆ ನಕಲಿ ನಂಬರ್ ಪ್ಲೇಟ್ ಬಳಸಿರುವುದು ಪತ್ತೆಯಾಗಿದೆ.

ಬೆಂಗಳೂರು (ಮಾ.27): ಅನಿಲ್ ಕುಂಬ್ಳೆ ವೃತ್ತದಲ್ಲಿ ಬಿಳಿ ಲ್ಯಾಂಬೋರ್ಗಿನಿ ಕಾರನ್ನು ಅಪಾಯಕಾರಿಯಾಗಿ ಡ್ರೀಫ್ಟಿಂಗ್‌ ಮಾಡಿದ್ದ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್ ಆದ ನಂತರ, ಕಬ್ಬನ್ ಪಾರ್ಕ್ ಸಂಚಾರ ಪೊಲೀಸರು ಸುಮುಟೋ ಎಫ್‌ಐಆರ್‌ ದಾಖಲು ಮಾಡಿದ್ದರು. ಈಗ ತನಿಖೆ ಸಮಯದಲ್ಲಿ ವಾಹನ ಮಾಲೀಕ ಹಾಗೂ ಮುತ್ತಪ್ಪ ರೈ ಪುತ್ರ ರಿಕಿ ರೈ ವಂಚನೆಯಲ್ಲಿ ಭಾಗಿಯಾಗಿದ್ದಾರೆಂದು ಕಂಡುಹಿಡಿದಿದ್ದಾರೆ. ಮಾರ್ಚ್ 21 ರಂದು, ಬೆಳಗಿನ ಜಾವ 2.40 ರ ಸುಮಾರಿಗೆ, ರಿಕ್ಕಿ ರೈ ತಮ್ಮ ಲ್ಯಾಂಬೋರ್ಗಿನಿ ಕಾರ್‌ ಮೂಲಕ ಎಂಜಿ ರೋಡ್‌ನ ಅನಿಲ್‌ ಕುಂಬ್ಳೆ ಸರ್ಕಲ್‌ನಲ್ಲಿ ಅಪಾಯಕಾರಿಯಾಗಿ ಡ್ರಿಫ್ಟಿಂಗ್‌ ಮಾಡಿರುವುದು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ವಿಡಿಯೋವನ್ನು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದ ವ್ಯಕ್ತಿ, ಬೆಂಗಳೂರು ಪೊಲೀಸರನ್ನು ಟ್ಯಾಗ್‌ ಮಾಡಿದ್ದ.

ಸಂಚಾರ ಪೊಲೀಸ್ ಸಿಬ್ಬಂದಿ ತ್ವರಿತವಾಗಿ ಕಾರ್ಯನಿರ್ವಹಿಸಿ ವಿವರಗಳನ್ನು ಪರಿಶೀಲಿಸಿ, ಕಾನ್‌ಸ್ಟೆಬಲ್ ಷಣ್ಮುಖ (ಪಿಸಿ 22318) ಅವರ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದರು. ಬಳಿಕ ಕಾರನ್ನು ವಶಪಡಿಸಿಕೊಂಡು, ಭಾರತೀಯ ಮೋಟಾರು ವಾಹನ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ತನಿಖೆ ಆರಂಭಿಸಿದ್ದರು. ತನಿಖೆಯ ಸಮಯದಲ್ಲಿ, ಕರ್ನಾಟಕದಲ್ಲಿ ಯಾವುದೇ ವಾಹನವನ್ನು KA-05 NR 0009 ಅಡಿಯಲ್ಲಿ ನೋಂದಾಯಿಸಲಾಗಿಲ್ಲ ಅನ್ನೋದು ಗೊತ್ತಾಗಿದೆ. ಅದರೊಂದಿಗೆ ಲ್ಯಾಂಬೋರ್ಗಿನಿಯನ್ನು ಪ್ರದರ್ಶನ ಮಾಡಲಾಗಿರುವುದು ಫೇಕ್‌ ನಂಬರ್ ಪ್ಲೇಟ್‌ ಅನ್ನೋದು ಕೂಡ ಗೊತ್ತಾಗಿದೆ.

ಗುಜರಾತ್‌ ಮೂಲದ ಕಾರು

ಇನ್ನಷ್ಟು ತನಿಖೆ ಮಾಡಿದಾಗ, ವಾಹನದ ಮೂಲ ನೋಂದಣಿ DL 1 CT 1515 ಆಗಿದ್ದು, ಗುಜರಾತ್ ಮೂಲದ ರಬಾರ ಭಾವನಾಬೆನ್ ವಿನೋದ್‌ಕುಮಾರ್ ಎಂಬ ವ್ಯಕ್ತಿಗೆ ಸಂಬಂಧಿಸಿದೆ ಎಂದು ಪೊಲೀಸರು ಕಂಡುಕೊಂಡಿದ್ದಾರೆ.

ಆರೋಪಿ ರಿಕಿ ರೈ ಕಾರನ್ನು ಖರೀದಿಸಿದ್ದಾನೆ ಆದರೆ ಅದರ ನೋಂದಣಿಯನ್ನು ಕರ್ನಾಟಕಕ್ಕೆ ಅಧಿಕೃತವಾಗಿ ವರ್ಗಾಯಿಸಲು ವಿಫಲನಾಗಿದ್ದಾನೆ ಎಂದು ಆರೋಪಿಸಲಾಗಿದೆ. ಬದಲಾಗಿ, ಸಂಚಾರ ದಂಡ ಮತ್ತು ಪತ್ತೆಹಚ್ಚುವಿಕೆಯನ್ನು ತಪ್ಪಿಸಲು ವಾಹನಕ್ಕೆ ನಕಲಿ "ಫ್ಯಾನ್ಸಿ" ನಂಬರ್ ಪ್ಲೇಟ್ ಅಳವಡಿಸಿದ್ದಾನೆ ಎಂದು ಆರೋಪಿಸಲಾಗಿದೆ. ಕಬ್ಬನ್ ಪಾರ್ಕ್ ಪೊಲೀಸರು ಈಗ ರೈ ವಿರುದ್ಧ ಹೆಚ್ಚಿನ ತನಿಖೆಗಾಗಿ ಪ್ರಕರಣ ದಾಖಲಿಸಿಕೊಂಡಿದ್ದು, ಐಷಾರಾಮಿ ಕಾರು ಸಂಚಾರ ಪೊಲೀಸ್ ಠಾಣೆ ಆವರಣದಲ್ಲಿಯೇ ಇದೆ.

 

PREV
Read more Articles on
click me!

Recommended Stories

GBA New logo: ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಹೊಸ ಲೋಗೊ ರೆಡಿ, ವಿಶೇಷತೆಗಳೇನು?
ಬೆಂಗಳೂರು:ಗೂಗಲ್ ಮ್ಯಾಪ್ ಅವಾಂತರ, ನಿಂತಿದ್ದ ಕಾರಿಗೆ ಲೋಡ್‌ ತುಂಬಿದ ಲಾರಿ ಗುದ್ದಿ ನಿದ್ದೆಯಲ್ಲಿದ್ದ ಯುವಕ ಸಜೀವ ದಹನ!