ಉದ್ಘಾಟನೆ ಬಳಿಕ ಮೋದಿ ಪ್ರಯಾಣಿಸುವ ನಮ್ಮ ಮೆಟ್ರೋದಲ್ಲಿ ನಾಲ್ವರಿಗೆ ಅವಕಾಶ, ಯಾರಿಗಿದೆ ಚಾನ್ಸ್?

Chethan Kumar   | ANI
Published : Nov 13, 2026, 12:29 PM IST
Who Will Travel With PM Modi on Namma Metro

ಸಾರಾಂಶ

ಕಾಳೇನಅಗ್ರಹಾರ ದಿಂದ ನಾಗವಾರ ಮೆಟ್ರೋದ ಮೊದಲ ಹಂತದ ಸೇವೆಯನ್ನು ಪ್ರಧಾನಿ ಮೋದಿ ಉದ್ಘಾಟಿಸುತ್ತಿದ್ದಾರೆ. ಉದ್ಘಾಟನೆ ಬಳಿಕ ಮೋದಿ ಜೊತೆ ಪ್ರಯಾಣಿಸಲು ನಾಲ್ವರಿಗೆ ಅವಕಾಶ ನೀಡಲಾಗಿದೆ. ಯಾರಿಗಿದೆ ಚಾನ್ಸ್

ಬೆಂಗಳೂರು (ನ.13) ಪ್ರಧಾನಿ ನರೇಂದ್ರ ಮೋದಿ ಇಂದು ಪಿಂಕ್ ಮೆಟ್ರೋಗೆ ಚಾಲನೆ ನೀಡಲಿದ್ದಾರೆ. ತಾವರೆಕೆರೆ ಮೆಟ್ರೋ ನಿಲ್ದಾಣದಲ್ಲಿ ಮೋದಿ ಉದ್ಘಾಟನೆ ನೆರವೇರಿಸಲಿದ್ದಾರೆ. ಪಿಂಕ್ ಲೈನ್ ಮೆಟ್ರೋಗೆ ಚಾಲನೆ ನೀಡಿದ ಬಳಿಕ ಮೆಟ್ರೋದಲ್ಲಿ ಮೋದಿ ಪ್ರಯಾಣಿಸಲಿದ್ದಾರೆ. ವಿಶೇಷ ಅಂದರೆ ಮೋದಿ ಜೊತೆ ಅದೇ ಬೋಗಿಯಲ್ಲಿ ಪ್ರಯಾಣಿಸಲು ನಾಲ್ವರಿಗೆ ಅವಕಾಶ ನೀಡಲಾಗಿದೆ. ಒಟ್ಟು 6 ಕೋಚ್‌ಗಳಿರುವ ಮೆಟ್ರೋದಲ್ಲಿ ಮೋದಿ ತಾವರೆಕೆರೆ ಮೆಟ್ರೋ ನಿಲ್ದಾಣದಿಂದ ಪ್ರಯಾಣಿಸಲಿದ್ದಾರೆ.

ಮೋದಿ ಜೊತೆ ಪ್ರಯಾಣಿಸುವ ನಾಲ್ವರು ಯಾರು?

ತಾವರೆಗೆ ಮೆಟ್ರೋ ನಿಲ್ದಾಣದಲ್ಲಿ ಪಿಂಕ್ ಲೈನ್ ಮೆಟ್ರೋಗೆ ಚಾಲನೆ ನೀಡಿದ ಬಳಿಕ ಮೋದಿ ಜೊತೆ ರಾಜ್ಯಪಾಲರಾದ ಡಾ. ಸುಧಾ ಯಾದವ್, ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಸಂಸದ ತೇಜಸ್ವಿ ಸೂರ್ಯ ಮತ್ತು ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣಭೈರೇಗೌಡ ಪ್ರಯಾಣ ಮಾಡಲಿದ್ದಾರೆ.

ಒಟ್ಟು 6 ಕೋಚ್‌ಗಳ ಮೆಟ್ರೋದಲ್ಲಿ ಮೂರನೇ ಕೋಚ್‌ನಲ್ಲಿ ಪ್ರಧಾನಿ ಮೋದಿ ಸಂಚರಿಸಲಿದ್ದಾರೆ. ಮೋದಿ ಜೊತೆ ಮುಖ್ಯಮಂತ್ರಿ ಹಾಗೂ ಇತರ ಮೂವರು ಪ್ರಯಾಣ ಮಾಡಲಿದ್ದಾರೆ. ಇನ್ನುಳಿದ ಐದು ಕೋಚ್‌ಗಳಲ್ಲಿ ಬಿಎಂಆರ್ಸಿಎಲ್ ಅಧಿಕಾರಿಗಳು, ಸಿಬ್ಬಂದಿಗಳು, ಸಂಸದರು,ಶಾಸಕರು ಒಂದಷ್ಟು ಗಣ್ಯರಿಗೆ ಅವಕಾಶ ನೀಡಲಾಗಿದೆ.

6 ಕೋಚ್ ಗಳಿರುವ ನಮ್ಮ ಮೆಟ್ರೋ ರೈಲು.

  • ಕೋಚ್ 1 : ಬಿಎಂಆರ್ಸಿಎಲ್ ಎಮರ್ಜೆನ್ಸಿ ಸ್ಟಾಫ್ ಗಳು.
  • ಕೋಚ್ 2 : ಪಿಎಂಓ ಆಫೀಸ್ ಅಧಿಕಾರಿಗಳು.
  • ಕೋಚ್ 3 : ಪಿಎಂ ಮತ್ತು ಗಣ್ಯರು.
  • ಕೋಚ್ 4 : ಮಿನಿಸ್ಟರ್ ಗಳು ಮತ್ತು ಸ್ಥಳೀಯ ಎಂಎಲ್ಎ ಗಳು.
  • ಕೋಚ್ 5 : ಬಿಎಂಆರ್ಸಿಎಲ್ ಹಿರಿಯ ಅಧಿಕಾರಿಗಳು.
  • ಕೋಚ್ 6 :ಬಿಎಂಆರ್ಸಿಎಲ್ ಸಿಬ್ಬಂದಿಗಳು

ಬೆಂಗಳೂರಿನಲ್ಲಿ ಮೆಟ್ರೋ ಶತಕ

ಬೆಂಗಳೂರು ಮೆಟ್ರೋ ಶತಕ ಪೂರೈಸಿದೆ. ಪ್ರಧಾನಿ ನರೇಂದ್ರ ಮೋದಿಯಿಂದ ಕ್ಷಿಪ್ರಗತಿಯಲ್ಲಿ ಭಾರತ ಅಭಿವೃದ್ಧಿ ಕಾಣುತ್ತಿದೆ. ಕ್ರಾಂತಿಕಾರಿ ನಿರ್ಧಾರಗಳು,ಮೂಲಭೂತ ಸೌಕರ್ಯಗಳನ್ನು ಮೇಲ್ದರ್ಜೆಗೆ ಏರಿಸುವಲ್ಲಿ ಮೋದಿ ಯಶಸ್ವಿಯಾಗಿದ್ದಾರೆ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಹರೀಶ್ ದ್ವಿವೇದಿ ಹೇಳಿದ್ದಾರೆ. ದೇಶದ ವಿಕಾಸಕ್ಕೆ ರಾಜ್ಯದ ವಿಕಾಸವೂ ಆಗಬೇಕು. ಅದುವೇ ಮೋದಿಯವರ ಉದ್ದೇಶವಾಗಿದೆ. ಇಂದು ಪಿಂಕ್‌ಲೇನ್ ಮೆಟ್ರೊ 7km ಉದ್ಘಾಟನೆ ಆಗುತ್ತಿದೆ. ಇದರೊಂದಿಗೆ ಬೆಂಗಳೂರಿನಲ್ಲಿ 100km ಮೆಟ್ರೋ ತಲುಪಿದೆ. ಮೈಸೂರಿನಲ್ಲಿ ಶಿಲನ್ಯಾಸ ಕಾರ್ಯಕ್ರಮ ಇದೆ. ಪೂರ್ವ, ಪಶ್ಚಿಮ, ಉತ್ತರ , ಧಕ್ಷಿಣ ಎಲ್ಲ ದಿಕ್ಕಿನಲ್ಲೂ ವಿಕಾಸ (ಅಭಿವೃದ್ಧಿ ) ಆಗಬೇಕು. ಆ ದಿಕ್ಕಿನಲ್ಲಿ ಮೋದಿ ಕೆಲಸ ಮಾಡ್ತಿದಾರೆ. ಕಾಂಗ್ರೆಸ್ ಇಷ್ಟು ಕಾಲ ಆಡಳಿತ ಮಾಡಿ ಏನೂ ಅಭಿವೃದ್ಧಿ ಮಾಡಿಲ್ಲ . ಮೋದಿ ಕೇವಲ 12 ವರ್ಷದಲ್ಲಿ ವಿಶ್ವದ ನಾಲ್ಕನೇ ಸ್ಥಾನಕ್ಕೆ ಭಾರತವನ್ನ ಒಯ್ದಿದ್ದಾರೆ ಎಂದು ಹರೀಶ್ ದ್ವಿವೇದಿ ಹೇಳಿದ್ದಾರೆ.

PREV
Read more Articles on
click me!

Recommended Stories

ಪ್ರಧಾನಿ ಮೋದಿ ಆಗಮನ ಹಿನ್ನಲೆಯಲ್ಲಿ ಜೆಪಿ ನಗರ, ವೆಗಾ ಸಿಟಿ ಸೇರಿ ಕೆಲ ರಸ್ತೆ ಸಂಪೂರ್ಣ ಬಂದ್
ಬೆಂಗಳೂರಿನಲ್ಲಿ ಪ್ರಧಾನಿ ಮೋದಿ ಮಿಂಚಿನ ಸಂಚಾರ; ಯೋಗ ಜಗತ್ತಿಗೆ ಭಾರತದ ಪ್ರವೇಶದ್ವಾರ! ಪ್ರಶಾಂತ ಕುಟೀರದಲ್ಲಿ ಪಿಎಂ ಮಾತು!