
ಬೆಂಗಳೂರಿನ ವೈಟ್ಫೀಲ್ಡ್‌ನಲ್ಲಿರುವ ಫೀನಿಕ್ಸ್ ಮಾರ್ಕೆಟ್ ಸಿಟಿ ಮಾಲ್‌ನಲ್ಲಿ ಇದೇ ನವೆಂಬರ್ 22ರಂದು ತೆಲುಗು ಹಾಡುಗಳ ಸಂಗೀತ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗುತ್ತಿದೆ. ಈ ಕುರಿತು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನವನ್ನು ಆರಂಭಿಸಿದ್ದು, ಮಹದೇವಪುರ ಸುತ್ತಲಿನ ಪ್ರದೇಶದ ಎಲ್ಲ ತೆಲುಗು ಭಾಷಿಕರು ಬಂದು ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಕರೆ ನೀಡಲಾಗಿತ್ತು. ಇದರ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಕನ್ನಡಪರ ಸಂಘಟನೆಗಳು ಫಿನಿಕ್ಸ್ ಮಾಲ್‌ಗೆ ನುಗ್ಗಿ ಸಂಬಂಧಿರ ಮಾಲ್ ಮ್ಯಾನೇಜರ್‌ಗಳಿಗೆ ಎಚ್ಚರಿಕೆ ರವಾನಿಸಲಾಗಿದೆ. ಇಲ್ಲಿ ತೆಲುಗು ಭಾಷಿಕರ ಸಂಗೀತ ಕಾರ್ಯಕ್ರಮ ಆಯೋಜನೆ ಮಾಡಿದರೆ, ಮುಂದಿನ ಪರಿಣಾಮ ಬೇರೆಯದ್ದೇ ಆಗಿರುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಮಾತನಾಡಿದ ಕನ್ನಡ ಪರ ಹೋರಾಟಗಾರರು 'ಮಹದೇವಪುರದ ಫೀನಿಕ್ಸ್ ಮಾರ್ಕೆಟ್ ಸಿಟಿ ಮಾಲ್‌ನಲ್ಲಿ ಸಂಪೂರ್ಣವಾಗಿ ತೆಲುಗು ಕಾರ್ಯಕ್ರಮ ಮಾಡುತ್ತಾರೆಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಯಾವನೋ ಬಂದು ಇಲ್ಲಿ, ಏನೋನೋ ಮಾಡಿಕೊಂಡು ಹೋಗುವುದಕ್ಕೆ ಕರ್ನಾಟಕ ಮತ್ತು ಬೆಂಗಳೂರು ತೋಟದಪ್ಪನ ಛತ್ರ ಅಲ್ಲ. ಕರ್ನಾಟಕ ಕನ್ನಡಿಗರ ಸ್ವತ್ತು. ಇಲ್ಲಿ ಕನ್ನಡದ ಕಾರ್ಯಕ್ರಮಗಳನ್ನು ಮಾತ್ರ ಮಾಡಬೇಕು. ಅದನ್ನು ಬಿಟ್ಟು ತೆಲುಗು, ತಮಿಳು, ಮಲೆಯಾಳಂ ಕಾರ್ಯಕ್ರಮವನ್ನು ಮಾಡ್ತೀವಿ ಎಂದರೆ ನಾವು ಇದಕ್ಕೆ ಅವಕಾಶ ಕೊಡುವುದಿಲ್ಲ. ಯಾವುದೇ ಕಾರಣಕ್ಕೂ ಬೆಂಗಳೂರಿನ ಈ ಮಾಲ್‌ನಲ್ಲಿ ಕನ್ನಡದ ಹೊರತಾಗಿ ಪರಭಾಷೆಯ ಕಾರ್ಯಕ್ರಮ ಮಾಡಬಾರದು' ಎಂದು ತೆಲುಗು ಸಂಗೀತ ಕಾರ್ಯಕ್ರಮ ಆಯೋಜಕರಿಗೆ ವಾರ್ನಿಂಗ್ ನೀಡಿದ್ದಾರೆ.
ಬೆಂಗಳೂರಿಗೆ ತೆಲುಗು, ತಮಿಳು, ಮಲೆಯಾಳಿ, ಹಿಂದಿ ಸೇರಿದಂತೆ ಎಲ್ಲೆಲ್ಲಿಂದಲೋ ಬರುತ್ತಾರೆ. ಅವರವರೇ ಇಲ್ಲಿ ಬಂದು ಮಿನಿ ಆಂಧ್ರ, ಮಿನಿ ಕೇರಳ, ಮಿನಿ ತಮಿಳುನಾಡು, ಮಿನಿ ಒಡಿಶ, ಮಿನಿ ಬಿಹಾರ ಎಂದೆಲ್ಲಾ ಮಾಡಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ನವೆಂಬರ್ 22ರಂದು ತೆಲುಗು ಕಾರ್ಯಕ್ರಮ ಮಾಡ್ತೇವೆ. ಕರ್ನಾಟಕ ತೋಟದಪ್ಪನ ಛತ್ರವಲ್ಲ, ಏನೋನೋ ಮಾಡುವುದಕ್ಕೆ ಇಲ್ಲಿ ಅವಕಾಶವಿಲ್ಲ. ಇಲ್ಲಿ ಕನ್ನಡ ಬಿಟ್ಟು ಬೇರಾವ ಕಾರ್ಯಕ್ರಮ ಮಾಡುವುದಕ್ಕೆ ನಾವು ಬಿಡಲ್ಲ. ಒಂದು ವೇಳೆ ನ.22ರಂದು ಕಾರ್ಯಕ್ರಮ ಮಾಡುವುದಕ್ಕೆ ಮುಂದಾದರೆ ಎಲ್ಲ ಕನ್ನಡಪರ ಸಂಘಟನೆಗಳು ಬಂದು ಅದನ್ನು ಹೇಗೆ ತಡೆಯಬೇಕೋ ತಡೆಯುತ್ತೇವೆ ಎಂದು ಕನ್ನಡಪರ ಹೋರಾಟಗಾರರು ತಿಳಿಸಿದ್ದಾರೆ.
ಲೇ ಆಂಧ್ರ ಬಿಡ್ದ, ನಿಮ್ಮ ಆಂಧ್ರದಲ್ಲಿ ಮಾಡಕೊಳ್ರೋ ಹೋಗಿ ನಮ್ಮೂರಲ್ಲಿ ಯಾಕೆ. https://t.co/FkMJepHNgR
— ₘₒₜᵢᵥₐₜₑd!ₗᵢₗ!Dₑₘₒₙ (@AryakavyaA) November 2, 2026
ಇಂದು ನಾವು ಸಂಬಂಧಪಟ್ಟ ಮಾಲ್‌ನ ಸಿಬ್ಬಂದಿಗೆ ತೆಲುಗು ಕಾರ್ಯಕ್ರಮ ನಡೆಯಲು ಅವಕಾಶ ನೀಡದಂತೆ ಮನವಿ ಕೊಡಲು ಬಂದಿದ್ದೇವೆ. ಇದನ್ನು ಮನವಿ ಅಥವಾ ಎಚ್ಚರಿಕೆ ಎಂದಾದರೂ ತಿಳಿದುಕೊಳ್ಳಲಿ. ಈ ಮಾಲ್ ಕಟ್ಟಿಸಿರುವುದು ತೆಲುಗು ಕಾರ್ಯಕ್ರಮ ಮಾಡುವುದಕ್ಕೆ ಅಲ್ಲ. ತೆಲುಗು ಕಾರ್ಯಕ್ರಮ ಮಾಡಬೇಕು ಎಂದರೆ ನೀವು ನಿಮ್ಮ ರಾಜ್ಯಕ್ಕೆ ಹೋಗಿಮಾಡಿಕೊಳ್ಳಿ ಎಂದು ಎಚ್ಚರಿಕೆಯನ್ನು ರವಾನಿಸಿದ್ದಾರೆ.