
ಬೆಂಗಳೂರು(ಜೂ.07) ಆರ್‌ಸಿಬಿ ವಿಜಯೋತ್ಸವದಲ್ಲಿ ನಡೆದ ದುರಂತ ಘಟನೆಯ ನೋವು ಎಂದು ಮಾಸುವುದಿಲ್ಲ. ಬಾಲಕ, ವಿದ್ಯಾರ್ಥಿಗಳು ಸೇರಿದಂತೆ ಯುವ ಸಮೂಹದ 11 ಮಂದಿ ಈ ದುರಂತದಲ್ಲಿ ಬಲಿಯಾಗಿದ್ದಾರೆ. 56ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಕುಟುಂಬಗಳು ಕಣ್ಮೀರಿನಲ್ಲಿ ಕೈತೊಳೆಯುತ್ತಿದೆ. ಪ್ರತಿ ದಿನ ನೋವು ತಡೆದುಕೊಳ್ಳಲು ಸಾಧ್ಯವಾಗದೇ ಗೋಳಾಡುತ್ತಿದ್ದಾರೆ. ಇತ್ತ ಸರ್ಕಾರ, ಆರ್‌ಸಿಬಿ ಮ್ಯಾನೇಜ್ಮೆಂಟ್, ಕೆಎಸ್‌ಸಿಎ ಸೇರಿದಂತೆ ಹಲವರು ಈ ಘಟನೆಗೆ ಹೊಣೆ ಎಂದು ಆಕ್ರೋಶಗಳು ವ್ಯಕ್ತವಾಗುತ್ತಿದೆ. ಇದರ ನಡುವೆ ಪೊಲೀಸರ ಹೊಣೆಯಾಗಿಸಿ ಅಮಾತುಗಳು ನಡೆದಿದೆ. ಆದರೆ ಈ ಕಾಲ್ತಳಿತದ ವೇಳೆ ಪೊಲೀಸರು ಜನರನ್ನು ರಕ್ಷಿಸಲು ನಡೆಸಿದ ಪ್ರಯತ್ನಕ್ಕೆ ಭಾರಿ ಮೆಚ್ಚುಗೆ ವ್ಯತ್ತವಾಗುತ್ತಿದೆ. ಬಾಲಕನೊಬ್ಬನ್ನು ಕಾಲ್ತುಳಿತದಿಂದ ಎತ್ತಿಕೊಂಡು ಆಸ್ಪತ್ರೆ ಸಾಗಿಸಲು ಯತ್ನಿಸಿದ ಪೊಲೀಸ್ ವಿಡಿಯೋ ಹಾಗೂ ಫೋಟೋಗೆ ಹಲವರು ಸಲ್ಯೂಟ್ ಎಂದಿದ್ದಾರೆ.
ವಿಧಾನಸೌಧದಲ್ಲಿ ಆರ್‌ಸಿಬಿ ಆಟಗಾರರಿಗೆ ಸರ್ಕಾರ ಸನ್ಮಾನ ಮಾಡಿತ್ತು. ಬಳಿಕ ಮೆರವಣಿಗೆ ಮೂಲಕ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಆಗಮಿಸಿದ ಆರ್‌ಸಿಬಿ ತಂಡಕ್ಕೆ ವಿಶೇಶ ಕಾರ್ಯಕ್ರಮ ಆಯೋಜಿಸಲಾಗಿತ್ತು. ವಿಧಾನ ಸೌಧದಿಂದ ಚಿನ್ನಸ್ವಾಮಿ ಕ್ರೀಡಾಂಣ ಹಾಗೂ ಸುತ್ತ ಮುತ್ತ ಲಕ್ಷ ಲಕ್ಷ ಅಭಿಮಾನಿಗಳು ಸೇರಿದ್ದರು. 32 ಸಾವಿರ ಸಾಮರ್ಥ್ಯದ ಚಿನ್ನಸ್ವಾಮಿ ಕ್ರೀಡಾಂಗಣದೊಳಗೆ 3 ಲಕ್ಷಕ್ಕೂ ಅಧಿಕ ಅಭಿಮಾನಿಗಳು ಸೇರಿದ್ದರು. ಇನ್ನು ಕ್ರೀಡಾಂಗಣ ಒಳ ಪ್ರವೇಶಿಸಲು 2 ಲಕ್ಷಕ್ಕೂ ಅಧಿಕ ಅಭಿಮಾನಿಗಳು ಕಾಯುತ್ತದ್ದರು. ಈ ವೇಳೆ ನೂಕು ನುಗ್ಗಲು ಸಂಭವಿಸಿದೆ. ಇದರೊಂದಿಗೆ ಕಾಲ್ತುಳಿತ ನಡೆದಿದೆ.
ಕಾಲ್ತುಳಿತದಿಂದ ಬಾಲಕ ಎತ್ತಿಕೊಂಡ ಓಡಿದ ಪೊಲೀಸ್
ಕಾಲ್ತುಳಿತ ಘಟನೆ ಭೀಕರತೆಯ ವಿಡಿಯೋಗಳು ಎಲ್ಲೆಡೆ ಹರಿದಾಡುತ್ತಿದೆ. ಇದರ ನಡುವೆ ಕಾಲ್ತುಳಿತದಲ್ಲಿ ಸಿಲುಕಿದ್ದ ಬಾಲಕನೊಬ್ಬನ್ನು ಪೊಲೀಸ್ ರಕ್ಷಿಸಿದ್ದಾರೆ. ತೀವ್ರ ಅಸ್ವಸ್ಥಗೊಂಡಿದ್ದ ಬಾಲಕನ ಎತ್ತಿಕೊಂಡ ಪೊಲೀಸ್ ನೇರವಾಗಿ ಆಸ್ಪತ್ರೆ ಸಾಗಿಸಲು ವಾಹನದತ್ತ ಓಡಿದ್ದಾರೆ. ಮಗುವನ್ನು ರಕ್ಷಿಸಲು ಎಲ್ಲಾ ಪ್ರಯತ್ನ ಮಾಡಿದ್ದಾರೆ. ಈ ಪೊಲೀಸ್ ಬಾಲಕನ ಎತ್ತಿಕೊಂಡು ಓಡುತ್ತಿರುವ ಫೋಟೋ ಹಾಗೂ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಬೆಂಗಳೂರು ಪೊಲೀಸರ ಬೆಂಬಲಕ್ಕೆ ನಿಂತ ಜನ
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ಘಟನೆಗೆ ಹೊಣೆ ಯಾರು? ಈ ಕುರಿತು ಕಾಂಗ್ರೆಸ್ ಸರ್ಕಾರ, ಪೊಲೀಸರ ಹೊಣೆಯಾಗಿಸಿ ಅಮಾನತು ಮಾಡಿದೆ. ಕರ್ತವ್ಯ ಲೋಪದಡಿ ಪೊಲೀಸ್ ಕಮಿಷನರ್ ಸೇರಿದಂತೆ ಹಲವು ಅಧಿಕಾರಿಗಳನ್ನು ಅಮಾನತು ಮಾಡಿದೆ. ಆದರೆ ಪೊಲೀಸರ ಬೆಂಬಲಕ್ಕೆ ಜನ ನಿಂತಿದ್ದಾರೆ. ಐ ಸ್ಟಾಂಡ್ ವಿಥ್ ಪೊಲೀಸ್ ಎಂದು ಸೋಶಿಯಲ್ ಮೀಡಿಯಾದಲ್ಲಿ ಅಭಿಯಾನ ನಡೆಸುತ್ತಿದ್ದಾರೆ. ಕಾಲ್ತುಳಿತದ ವೇಳೆ ಜನರ ಪ್ರಾಣ ಉಳಿಸಲು ಪೊಲೀಸರು ಅವರಿತ ಪ್ರಯತ್ನ ಮಾಡಿರುವ ಫೋಟೋ ವಿಡಿಯೋಗಳು ಹರಿದಾಡುತ್ತಿದೆ. ಇದೀಗ ಜನರು ಪೊಲೀಸರಿಗೆ ಸಲ್ಯೂಟ್ ಎನ್ನುತ್ತಿದ್ದಾರೆ. ಪೊಲೀಸರು ಬೇಡ ಎಂದರೂ ಕಾರ್ಯಕ್ರಮ ನಡೆಸಲಾಗಿದೆ ಅನ್ನೋ ಆರೋಪಗಳು ಕೇಳಿಬರುತ್ತಿದೆ. ಇದರ ನಡುವೆ ಪೊಲೀಸರನ್ನು ಬೆಂಬಲಿಸಿ ಹಲವು ಪೋಸ್ಟ್‌ಗಳು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.
ಆರ್‌ಸಿಬಿ ಮ್ಯಾನೇಜ್ಮೆಂಟ್‌ನ ಕೆವರು ಅರೆಸ್ಟ್
ಘಟನೆ ಸಂಬಂಧ ಆರ್‌ಸಿಬಿ ತಂಡ ಮ್ಯಾನೇಜ್ಮೆಂಟ್‌ನ ಕೆಲವರು, ಡಿಎನ್ಎ ಕಾರ್ಯಕ್ರಮ ಆಯೋಜಕ ಕೆಲ ಸಿಬ್ಬಂಧಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಇದೇ ವೇಳೆ ಹಲವರು ನಾಪತ್ತೆಯಾಗಿದ್ದಾರೆ. ಇತ್ತ ಕೆಎಸ್‌ಸಿ ಅಧಿಕಾರಿಗಳು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ್ದಾರೆ. ಇತ್ತ ಪ್ರಕರಣದ ತನಿಖೆ ನಡೆಯುತ್ತಿದೆ. ಪ್ರತಿ ಪಕ್ಷಗಳು ಸರ್ಕಾರದ ನಿರ್ಲಕ್ಷ್ಯವನ್ನು ಬೊಟ್ಟು ಮಾಡಿದೆ. ಪ್ರಚಾರದ ತೆವಲಿಗೆ ತರಾತುರಿಯಲ್ಲಿ ಕಾರ್ಯಕ್ರಮ ಆಯೋಜಿಸಿ 11 ಮಂದಿಯನ್ನು ಸರ್ಕಾರ ಬಲಿಪಡೆದಿದೆ ಎಂದು ಆರೋಪಿಸಿದೆ.