
ಬೆಂಗಳೂರು (ಡಿ.17) ರಾಮಯ್ಯ ಕಾಲೇಜಿನಲ್ಲಿ ಮೊದಲ ಸೆಮಿಸ್ಟರ್ ಓದುತ್ತಿರುವ 19 ವರ್ಷದ ಯುವಕನ ಕಾರು ಚಾಲನೆಯಿಂದ ಬೆಂಗಳೂರಿನಲ್ಲಿ ಸರಣಿ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ವೃದ್ಧ ಪಾದಾಚಾರಿ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.ಕಾರು, ಹಲವು ಬೈಕ್‌ಗಳು ಈ ಅಪಘಾತದಲ್ಲಿ ಜಖಂಗೊಂಡಿದೆ. ಘಟನೆಯಲ್ಲಿ ಕಾರು ಡ್ರೈವಿಂಗ್ ಮಾಡುತ್ತಿದ್ದ 19 ವರ್ಷದ ಶಿಶಿರ್ ಸುಧೀರ್ ಹಾಗೂ ಕಾರಿನಲ್ಲಿದ್ದ ಯುವತಿಗೂ ಗಂಭೀರ ಗಾಯವಾಗಿದೆ. ಬೆಂಗಳೂರಿನ ಆರ್‌ಎಂವಿ ಎಕ್ಸ್‌ಟೆನ್ಶನ್ ಬಳಿ ಈ ಅಪಘಾತ ಸಂಭವಿಸಿದೆ.
ಮಾರುತಿ ಸುಜುಕಿ ಸಿಯಾಜ್ ಕಾರಿನಲ್ಲಿ ಶಿಶಿರ್ ಸುಧೀರ್ ಹಾಗೂ ಮತ್ತೊರ್ವ ಯುವತಿ ತೆರಳಿದ್ದಾರೆ. ಆದರೆ ಯುವಕನ ನಿಯಂತ್ರಣ ತಪ್ಪಿದ ಕಾರು ಮೊದಲು ಪಾದಾಚಾರಿ ವೃದ್ಧನಿಗೆ ಡಿಕ್ಕಿ ಹೊಡೆದಿದೆ. 64 ವರ್ಷದ ಪಾದಾಚಾರಿ ರಾಮಚಂದ್ರ ರೆಡ್ಡಿಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾರು ಡಿಕ್ಕಿಯಾದ ರಭಸಕ್ಕೆ ಎತ್ತರಕ್ಕೆ ಹಾರಿ ರಸ್ತೆ ಬಿದ್ದ ವೃದ್ಧ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಷ್ಟಕ್ಕೆ ಸಿಯಾಜ್ ಕಾರಿನ ಅಪಘಾತ ನಿಲ್ಲಲಿಲ್ಲ. ಇಲ್ಲಿಂದ ಸರಣಿ ಅಪಘಾತ ನಡೆದಿದೆ.
ವೃದ್ಧನಿಗೆ ಡಿಕ್ಕಿ ಹೊಡೆದ ಸಿಯಾಜ್ ಕಾರು ಬಳಿಕ ನೇರವಾಗಿ ಆರ್‌ಎಂವಿ ಕ್ಲಬ್ ಪಾರ್ಕಿಂಗ್‌ನಲ್ಲಿ ನಿಲ್ಲಿಸಿದ್ದ ಮಾರುತಿ ಎರ್ಟಿಗಾ ಕಾರಿಗೆ ಡಿಕ್ಕಿಯಾಗಿದೆ. ಅದೃಷ್ಟವಶಾತ್ ಈ ಸ್ಥಳದಲ್ಲಿ ಹಾಗೂ ಕಾರಿನಲ್ಲಿ ಯಾರೂ ಇಲ್ಲದ ಕಾರಣ ಅಪಾಯದದ ತೀವ್ರತೆ ಕಡಿಮೆಯಾಗಿದೆ. ಇತ್ತ ಇಲ್ಲೇ ಪಕ್ಕದಲ್ಲಿ ನಿಲ್ಲಿಸಿದ್ದ ಐದಾರು ಬೈಕ್‌ಗಳ ಮೇಲೆ ಕಾರು ಹರಿದಿದೆ. ಬೈಕ್‌ಗಳು ಕಾರಿನ ಚಕ್ರಕ್ಕೆ ಸಿಲುಕಿಕೊಂಡ ಕಾರಣ ಸಿಯಾಜ್ ಕಾರು ನಿಂತಿದೆ.
ಸಿಯಾಜ್ ಕಾರು ಸರಣಿ ಅಪಘಾತವಾಗಿದೆ. ಕಾರು ಚಾಲನೆ ಮಾಡುತ್ತಿದ್ದ ಶಿಶಿರ್ ಸುಧೀರ್ ಹಾಗೂ ಕಾರಿನಲ್ಲಿದ್ದ ಯುವತಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕಾರಿನಲ್ಲಿ ಏರ್‌ಬ್ಯಾಗ್ ಸುರಕ್ಷತಾ ಫೀಚರ್ ಇದ್ದರೂ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡ ಇಬ್ಬರನ್ನೂ ಆಸ್ಪತ್ರೆ ದಾಖಲಿಸಲಾಗಿದೆ. ಸಂಜಯನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅತೀ ವೇಗದ ಚಾಲನೆಯಿಂದ ಕಾರು ನಿಯಂತ್ರಣ ಕಳೆದುಕೊಂಡು ಸರಣಿ ಅಪಘಾತವಾಗಿದೆ ಎಂದು ಹೇಳಲಾಗುತ್ತಿದೆ. ಸ್ಥಳಕ್ಕೆ ಧಾವಿಸಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ. ಇತ್ತ ಅಪಘಾತವಾಗಿರುವ ಸಿಯಾಜ್ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನೆಗೆ ಅತೀ ವೇಗ ಅಥವಾ ಇನ್ಯಾವುದೇ ಕಾರಣಗಳಿದೆಯಾ ಅನ್ನೋದು ಪರಿಶೀಲನೆ ನಡೆಸಲಾಗುತ್ತಿದೆ.