ಇಷ್ಟು ಹಣ ಇಲ್ಲವಾದರೆ ನಮ್ಮ ಮೆಟ್ರೋ ಗೇಟ್ ತೆರೆಯಲ್ಲ! ದಿಢೀರ್ ಪ್ರತಿಭಟನೆ

By Web DeskFirst Published Mar 27, 2019, 8:58 PM IST
Highlights

ನಮ್ಮ ಮೆಟ್ರೋದಲ್ಲಿ ಪ್ರಯಾಣಿಕರು ದಿಢೀರ್ ಪ್ರತಿಭಟನೆ ನಡೆಸಿದ್ದಾರೆ. ಕಾರ್ಡ್ ನಲ್ಲಿ ಕನಿಷ್ಠ ಹಣ ಇಲ್ಲ ಎಂಬ ಕಾರಣಕ್ಕೆ ಗೇಟ್ ಒಳಗೆ ಪ್ರವೇಶ ಸಾಧ್ಯವಾಗದಿದ್ದುದೆ ಪ್ರತಿಭಟನೆಗೆ ಕಾರಣ.

ಬೆಂಗಳೂರು[ಮಾ. 27]  ಮೆಟ್ರೊ ಕಾರ್ಡ್ ನಲ್ಲಿ ಕನಿಷ್ಠ 50 ರೂ. ಇಲ್ಲಾ ಅಂದ್ರೆ ಗೇಟ್ ಓಪನ್ ಆಗಲ್ಲ! ನಾವು ಹೋಗಬೇಕಾಗಿರುವ ಸ್ಥಳಕ್ಕೆ 25 ರೂ. ಚಾರ್ಜ್ ಇದೆ ಅಂತಂದ್ರೂ ಕನಿಷ್ಠ ಹಣ 50 ರೂ. ಡಿಪಾಸಿಟ್ ಇರಲೇಬೇಕೆಂಬ ಹೊಸ ನಿಯಮ ಗೊತ್ತಿಲ್ಲದೆ ಜಾರಿಯಾಗಿರುವುದಕ್ಕೆ ಪ್ರಯಾಣಿಕರು ಮಲ್ಲೇಶ್ವರ ಮೆಟ್ರೋ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದರು.

ದಿದ್ದಾರೆ. ಇದನ್ನು ನಾವೆಲ್ಲರೂ ವಿರೋಧಿಸಿದ್ದೇವೆ. ಇದು 50 ರೂಪಾಯಿಯ ಪ್ರಶ್ನೆ ಅಲ್ಲವೇ ಅಲ್ಲ. ನಾವು ಇಂದು ಸುಮ್ಮನಿದ್ದರೆ ಮುಂದೊಂದು ದಿನ ಇದೇ 50 ರೂಪಾಯಿಯನ್ನು ಸಾವಿರಕ್ಕೂ ಏರಿಸಬಹುದು. ಅಷ್ಟಕ್ಕೂ ಕನಿಷ್ಠ 50 ರೂ. ಇಟ್ಕೊಳ್ಳೋದು ಬಿಡೋದು ನಮ್ಮ ಇಷ್ಟ ಎಂದ ಪ್ರಯಾಣಿಕರು ಮೆಟ್ರೋದ ಅಧಿಕಾರಿಗಳ ಮೇಲೆ ಮುಗಿಬಿದ್ದರು.

ಮೆಟ್ರೋ ಹಳಿಗೆ ಜಿಗಿದಾತ ಪಾರಾಗಿದ್ದು ಹೇಗೆ? ಇಲ್ಲಿದೆ ಇಂಟೆರೆಸ್ಟಿಂಗ್ ಮಾಹಿತಿ

ಮಂಗಳವಾರ ಸಂಜೆ ವೇಳೆ ನಡೆದ ಪ್ರತಿಭಟನೆ ಪರಿಣಾಮ ಮೆಟ್ರೋ ನಿಲ್ದಾಣದಲ್ಲಿ ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ನಾವೆಲ್ಲರೂ 2 ಗಂಟೆಯಿಂದ ಸಂಬಂಧಿಸಿದ ಅಧಿಕಾರಿಗೆ ಕಾಯುತ್ತಿದ್ದೇವೆ. ಆದರೆ ಯಾರೊಬ್ಬರಿಂದಲೂ ಸರಿಯಾದ ಪ್ರತಿಕ್ರಿಯೆ ಸಿಗುತ್ತಿಲ್ಲ ಎಂದು ನೊಂದ ಪ್ರಯಾಣಿಕರೊಬ್ಬರು ಅಳಲು ತೋಡಿಕೊಂಡರು.

 

 

click me!