ನಮ್ಮ ಮೆಟ್ರೋ ಪ್ರಯಾಣಿಕರಿಗೆ ಕೈಕೊಟ್ಟ ವ್ಯಾಟ್ಸಾಪ್ ಟಿಕೆಟ್, ಕೌಂಟರ್‌ನಲ್ಲಿ ಪರದಾಟ

Published : Sep 27, 2025, 06:29 PM IST
Namma Metro

ಸಾರಾಂಶ

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಕೈಕೊಟ್ಟ ವ್ಯಾಟ್ಸಾಪ್ ಟಿಕೆಟ್, ಕೌಂಟರ್‌ನಲ್ಲಿ ಪರದಾಟ ಪರಿಸ್ಥಿತಿ ಎದುರಾಗಿದೆ. ವ್ಯಾಟ್ಸಾಪ್ ಮೂಲಕ ಪ್ರಯಾಣಿಕರು ಟಿಕೆಟ್ ಬುಕ್ ಮಾಡಲು ಸಾಧ್ಯವಾಗುತ್ತಿಲ್ಲ. ತಾಂತ್ರಿಕ ಸಮಸ್ಯೆ ಎದುರಾಗಿದ್ದು, ಕೌಂಟರ್‌ನಲ್ಲಿ ಭಾರಿ ಕ್ಯೂ ಎದುರಾಗಿದೆ.

ಬೆಂಗಳೂರು (ಸೆ.27) ನಮ್ಮ ಮೆಟ್ರೋದಲ್ಲಿ ಪ್ರಯಾಣಿಸುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಬೆಂಗಳೂರಿನ ಟ್ರಾಫಿಕ್ ಸಮಸ್ಯೆಯಿಂದ ಬಳಲಿ ಬೆಂಡಾಗಿರುವ ಜನ, ನಮ್ಮ ಮೆಟ್ರೋದ ಮೂಲಕ ಪ್ರಯಾಣ ಮಾಡುತ್ತಿದ್ದಾರೆ. ಆದರೆ ಕೆಲ ತಾಂತ್ರಿಕ ಸಮಸ್ಯೆಗಳಿಂದ ನಮ್ಮ ಮೆಟ್ರೋ ಪ್ರಯಾಣಿಕರು ಪರದಾಡುವಂತಾಗಿದ್ದಾರೆ. ನಮ್ಮ ಮೆಟ್ರೋ ವ್ಯಾಟ್ಸಾಪ್ ಮೂಲಕ ಟಿಕೆಟ್ ಖರೀದಿ ಸಾಧ್ಯವಾಗುತ್ತಿಲ್ಲ. ನಮ್ಮ ಮೆಟ್ರೋ ವ್ಯಾಟ್ಸಾಪ್‌ನಲ್ಲಿ ತಾಂತ್ರಿಕ ಸಮಸ್ಯೆ ಎದುರಾಗಿರುವ ಕಾರಣ ಪ್ರಯಾಣಿಕರು ಟಿಕೆಟ್ ಕೌಂಟರ್, ಟಿಕೆಟ್ ಮಶಿನ್ ಬಳಿ ಕ್ಯೂ ನಿಂತು ಟಿಕೆಟ್ ಖರೀದಿಸಬೇಕಾದ ಅನಿವಾರ್ಯತೆ ಎದುರಾಗಿದೆ.

ಮೆಟ್ರೋ ವ್ಯಾಟ್ಸಾಪ್‌ ಸೇವೆ ಅಡಚಣೆ

ಮೆಟ್ರೋ ಪ್ರಯಾಣಿಕರು ಪಾಸ್ ಅಥವಾ ಕಾರ್ಡ್ ಮೂಲಕ ರೀಚಾರ್ಜ್ ಮಾಡಿ ಪ್ರಯಾಣ ಮಾಡುವವರ ಸಂಖ್ಯೆ ಕಡಿಮೆಯಾಗುತ್ತಿದ್ದು, ಬಹುತೇಕರು ವ್ಯಾಟ್ಸಾಪ್ ಮೂಲಕ ಟಿಕೆಟ್ ಖರೀದಿಸಿ ಪ್ರಯಾಣಿಸುತ್ತಾರೆ. ಆದರೆ ನಮ್ಮ ಮೆಟ್ರೋ ವ್ಯಾಟ್ಸಾಪ್ ಸೇವೆಯಲ್ಲಿ ಅಡಚಣೆ ಎದುರಾಗಿದೆ. ತಾತ್ಕಾಲಿಕವಾಗಿ ಸೇವೆ ಸ್ಥಗಿತಗೊಂಡಿದೆ. ನಮ್ಮ ಮೆಟ್ರೋ ವ್ಯಾಟ್ಸಾಪ್ ಈ ಕುರಿತು ಸಂದೇಶ ನೀಡಿದೆ. ಟಿಕೆಟ್ ಸೇವೆಯಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದೆ ಎಂಬ ಸಂದೇಶ ನೀಡಿದೆ.

ಮೆಟ್ರೋ ಟಿಕೆಟ್ ಖರೀದಿ ಕೇಂದ್ರದಲ್ಲಿ ಭಾರಿ ಕ್ಯೂ

ನಮ್ಮ ಮೆಟ್ರೋ ವ್ಯಾಟ್ಸಾಪ್ ಸೇವೆ ತಾತ್ಕಾಲಿಕ ಸ್ಥಗಿತಗೊಂಡಿರುವ ಕಾರಣ ಪ್ರಯಾಣಿಕರು ಮೆಟ್ರೋ ನಿಲ್ದಾಣಗಳಲ್ಲಿ ಟಿಕೆಟ್ ಖರೀದಿ ಕೇಂದ್ರದಲ್ಲಿ ಕ್ಯೂ ನಿಂತು ಟಿಕೆಟ್ ಖರೀದಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಟಿಕೆಟ್‌ಗಾಗಿ ಭಾರಿ ಕ್ಯೂ ಸಮಸ್ಯೆ ಎದುರಾಗಿದೆ. ಇನ್ನು ಟಿಕೆಟ್ ಖರೀದಿ ಮಶೀನ್ ಬಳಿಯೂ ಭಾರಿ ಕ್ಯೂ ಎದುರಾಗಿದೆ.

2022ರಲ್ಲಿ ನಮ್ಮ ಮೆಟ್ರೋ ವ್ಯಾಟ್ಸಾಪ್ ಸೇವೆ ಆರಂಭಗೊಂಡಿತ್ತು. ಪ್ರತಿ ದಿನ ಪ್ರಯಾಣಿಕರಿಗಿಂತ ಹೆಚ್ಚು ಒಕೇಶನ್ ಟ್ರಾವಲರ್ ಹೆಚ್ಚಾಗಿ ನಮ್ಮ ಮೆಟ್ರೋ ವ್ಯಾಟ್ಸಾಪ್ ಬಳಕೆ ಮಾಡುತ್ತಾರೆ. ಇತ್ತೀಚಿನ ದಿನಗಳಲ್ಲಿ ವ್ಯಾಟ್ಸಾಪ್ ಮೂಲಕ ಟಿಕೆಟ್ ಖರೀದಿಸುವವರ ಸಂಖ್ಯೆ ಹೆಚ್ಚಾಗಿತ್ತು. ಅತೀ ಸುಲಭ ಹಾಗೂ ಸರಳ ವಿಧಾನದ ಮೂಲಕ ಟಿಕೆಟ್ ಖರೀದಿ ಸಾಧ್ಯವಿದೆ.

ಹಳದಿ ಮೆಟ್ರೋದಲ್ಲಿ ಕಾಣಿಸಿಕೊಂಡಿತ್ತು ತಾಂತ್ರಿಕ ಸಮಸ್ಯೆ

ಇತ್ತೀಚೆಗೆ ಉದ್ಘಾಟನೆಯಾಗಿದ್ದ ಹಳದಿ ಮೆಟ್ರೋದಲ್ಲಿ ಕೆಲ ದಿನಗಳ ಹಿಂದೆ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿತ್ತು. ಪರಿಣಾಮ 7 ಗಂಟೆಯಿಂದ 9 ಗಂಟೆ ವರೆಗೆ ಹಳದಿ ಮೆಟ್ರೋ ಸಂಚಾರದಲ್ಲಿ ವ್ಯತ್ಯಯವಾಗಿತ್ತು.

 

PREV
Read more Articles on
click me!

Recommended Stories

Justice for Bongo: ಮಗು ಹುಟ್ಟಿದ್ದಕ್ಕೆ ಸಾಕಿ ಸಲುಹಿದ ಶ್ವಾನ ಕೊಂದ್ರಾ ಪಾಪಿಗಳು? ಸಿಲಿಕಾನ್ ಸಿಟಿಯಲ್ಲಿ 'ಬೋಂಗೋ' ಸಾವಿನ ರೋಚಕ ಕಹಾನಿ!
ಪಬ್‌ನಲ್ಲಿ ಶಾರುಖ್ ಪುತ್ರನ ದುರ್ವರ್ತನೆ ಕೇಸ್: ಆರ್ಯನ್ ಖಾನ್ ಸೇರಿ ಮೂವರ ವಿರುದ್ಧ ಹಿಂದೂ ಮುಖಂಡನಿಂದ ದೂರು