ನಮ್ಮ ಮೆಟ್ರೋದಲ್ಲಿ ಇನ್ನುಮುಂದೆ ಟಿಕೆಟ್ ಖರೀದಿ ಮತ್ತಷ್ಟು ಸುಲಭವಾಗಲಿದೆ. ಏಕ ಪ್ರಯಾಣದ QR ಟಿಕೆಟ್ ಗಳನ್ನ ಪೆಟಿಎಂ & ಯಾತ್ರಾ ಅಪ್ಲಿಕೇಶನ್ ಮೂಲಕ ಪಡೆದು ನಮ್ಮ ಮೆಟ್ರೋದಲ್ಲಿ ಪ್ರಯಾಣಿಸಲು ಬೆಂಗಳೂರು ಮೆಟ್ರೋ ರೇಲ್ ಕಾರ್ಪರೇಷನ್ ಲಿಮಿಟೆಡ್ (BMRCL) ಅವಕಾಶ ಮಾಡಿಕೊಟ್ಟಿದೆ.
ವರದಿ- ಮಮತಾ ಮರ್ಧಾಳ ಏಷ್ಯಾನೆಟ್ ಸುವರ್ಣನ್ಯೂಸ್
ಬೆಂಗಳೂರು (ಡಿ.07): ರಾಜ್ಯ ರಾಜಧಾನಿಯಲ್ಲಿ ನಮ್ಮ ಮೆಟ್ರೋದಲ್ಲಿ ಇನ್ನುಮುಂದೆ ಟಿಕೆಟ್ ಖರೀದಿ ಮತ್ತಷ್ಟು ಸುಲಭವಾಗಲಿದೆ. ಏಕ ಪ್ರಯಾಣದ QR ಟಿಕೆಟ್ ಗಳನ್ನ ಪೆಟಿಎಂ & ಯಾತ್ರಾ ಅಪ್ಲಿಕೇಶನ್ ಮೂಲಕ ಪಡೆದು ನಮ್ಮ ಮೆಟ್ರೋದಲ್ಲಿ ಪ್ರಯಾಣಿಸಲು ಬೆಂಗಳೂರು ಮೆಟ್ರೋ ರೇಲ್ ಕಾರ್ಪರೇಷನ್ ಲಿಮಿಟೆಡ್ (BMRCL) ಅವಕಾಶ ಮಾಡಿಕೊಟ್ಟಿದೆ.
ಮೆಟ್ರೋ ಪುಯಾಣಿಕರ ಅನುಕೂಲಕ್ಕಾಗಿ ನಮ್ಮ ಮೆಟ್ರೋ ಮೊಬೈಲ್ ಅಪ್ಲಿಕೇಶನ್ ನಲ್ಲಿ ಮೊಬೈಲ್ QR ಟಿಕೆಟಿಂಗ್ ಅನ್ನು ಒದಗಿಸುತ್ತಿದೆ. ಜೊತೆಗೆ ಡಿ.8ರಿಂದಲೆ (ನಾಳೆಯಿಂದ) ಜಾರಿಗೆ ಬರುವಂತೆ ನಿಗಮವು ಪೆಟಿಎಂ (Paytm) ಮತ್ತು ಯಾತ್ರಾ (Yatra) ಮೊಬೈಲ್ ಅಪ್ಲಿಕೇಶನ್‌ಗಳ ಮೂಲಕ ಕ್ಯೂಆರ್ (QR) ಕೋಡ್ ಟಿಕೆಟ್‌ಗಳನ್ನು ಪರಿಚಯಿಸುತ್ತಿದೆ. ಪೆಟಿಎಂ (Paytm) ಅಪ್ಲಿಕೇಶನ್ ಅಥವಾ ಯಾತ್ರಾ (Yatra) ಅಪ್ಲಿಕೇಶನ್ ಮೂಲಕ ಮೊಬೈಲ್ OR ಟೆಕೆಟ್ ಖರೀದಿಸಲು ಪುಯಾಣಿಕರು, ಆಂಡ್ರಾಯ್ಡ್ (android OS/iOS) ಹೊಂದಿರುವ ಮೊಬೈಲ್ ನಿಂದ ಪ್ಲೇ ಸ್ಟೋರ್ ನಲ್ಲಿ ಈ ಯಾತ್ರಾಮತ್ತು ಪೇಟಿಎಂ ಆಪ್‌ಗಳನ್ನು ಡೌನ್‌ಲೋಡ್ ಮಾಡಿಕೊಂಡು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಪ್ರಯಾಣದ ದಿನದಂದು ಪ್ರವೇಶ ಮತ್ತು ತಮ್ಮ ನಿಲ್ದಾಣವನ್ನು ನಿರ್ದಿಷ್ಟಪಡಿಸುವ ಮೂಲಕ ಪ್ರಯಾಣಿಕರು ಮೊಬೈಲ್ ಟಿಕೆಟ್ ಪಡೆಯಬಹುದು.
Bengaluru: ಅಪಾರ್ಟ್ಮೆಂಟ್ಗಳ ಗೇಟ್‌ನಿಂದಲೇ ಮೆಟ್ರೋ ಫೀಡರ್ ಬಸ್ ಸೇವೆ ಆರಂಭ
ಒಂದು ದಿನದಲ್ಲಿ ಬಳಸಬಹುದು: ಇನ್ನು ಮೆಟ್ರೋ ನಿಲ್ದಾಣಗಳಲ್ಲಿನ ಸ್ವಯಂಚಾಲಿತ ಗೇಟ್‌ಗಳಲ್ಲಿ ಅಳವಡಿಸಿರುವ ಕ್ಯೂಆರ್ ಕೋಡ‌್ಗಳಿಗೆ ಮೊಬೈಲ್ ಫೋನ್‌ನಲ್ಲಿರುವ QR ಟಿಕೆಟ್‌ಗಳನ್ನು ಪುವೇಶ ಮತ್ತು ನಿರ್ಗಮಿಸುವಾಗ ತೋರಿಸಲು ಅವಕಾಶ ಮಾಡಲಾಗಿದೆ. ಮೊಬೈಲ್ QR ಟಿಕೆಟ್‌ಗಳು ಒಂದಿ ದಿನದ ರೈಲು ಸೇವೆಯ ಕೊನೆಯವರೆಗೂ ಮಾನ್ಯವಾಗಿರುತ್ತವೆ. ಪ್ರಯಾಣಿಕರು ಪ್ರಯಾಣ ಮಾಡದಿದ್ದಲ್ಲಿ ಅದೇ ದಿನದಂದು ಟಿಕೆಟ್ ರದ್ದು ಮಾಡಿ, ಮೊತ್ತವನ್ನು ವಾಪಾಸ್ ಪಡೆಯಬಹುದು.
ಶೇ.5 ರಿಯಾಯಿತಿ ದರ: ಪ್ರಯಾಣಿಕರು ಬಳಸುವ ಈ ಕ್ಯೂರ್ ಕೋಡ್ ಟಿಕೆಟ್‌ಗಳು ಸಾಮಾನ್ಯವಾಗಿ ನಿಲ್ದಾಣದಲ್ಲಿ ನೀಡುವ ಟೋಕನ್ ದರಕ್ಕಿಂತ ಶೇ. 5 ರಿಯಾಯಿತಿಯಲ್ಲಿ ನೀಡಲಾಗುತ್ತಿದೆ. ಪ್ರಯಾಣಿಕರು ಮೊಬೈಲ್ ಕ್ಯೂಆರ್ ಟಿಕೆಟ್‌ಗಳ ಸೌಲಭ್ಯವನ್ನು ಬಳಸಿಕೊಳ್ಳಲು ಬಿಎಂಆರ್‌ಸಿಎಲ್ ಮನವಿ ಮಾಡಿದೆ.