ಮನೆಯಲ್ಲೆ ಕುಳಿತು ಕಾದಂಬರಿಕಾರ ಜೋಗಿ ಜತೆ ಮಾತಾಡಿ, ಮಿಸ್ ಮಾಡ್ಕೋಬೇಡಿ!

By Web Desk  |  First Published Oct 31, 2019, 6:46 PM IST

ನವೆಂಬರ್ 1ರಂದು ಬೆಳಿಗ್ಗೆ 8 ಗಂಟೆಗೆ ವಿವಿಧ ಭಾರತಿ ಟ್ಯೂನ್ ಮಾಡುವುದನ್ನು ಮರೆಯಬೇಡಿ/ ನಿಮ್ಮ ನೆಚ್ಚಿನ ಕಥೆಗಾರ, ಲೇಖಕ ಜೋಗಿ ಜತೆ ಮಾತುಕತೆ ಇದೆ/ Whatsapp ಸಂಖ್ಯೆ 9483091029 ಗೆ ಸಂದೇಶ ಕಳಿಸೋ ಮೂಲಕ ನೀವೂ ಕೂಡ ನಿಮ್ಮ ಅನಿಸಿಕೆ-ಅಭಿಪ್ರಾಯ ಹಂಚಿಕೊಳ್ಳಬಹುದು


ಬೆಂಗಳೂರು(ಅ. 31)  ನಾಡು ನುಡಿಯ ಪ್ರೇಮ ಜಾಗೃತಗೊಳಿಸುವ ಕನ್ನಡ ರಾಜ್ಯೋತ್ಸವ ಮತ್ತೆ ಹತ್ತಿರ ಬಂದಿದೆ. ಬೆಂಗಳೂರು ಆಕಾಶವಾಣಿಯ ವಿವಿಧಭಾರತಿ ವಾಹಿನಿಯಲ್ಲಿ(102.9FM) ಕನ್ನಡ ರಾಜ್ಯೋತ್ಸವ ಪ್ರಯುಕ್ತ ವಿಶೇಷ ಕಾರ್ಯಕ್ರಮ ಪ್ರಸಾರವಾಗಲಿದೆ.

ನವೆಂಬರ್ 1ರಂದು ಬೆಳಿಗ್ಗೆ 8 ಗಂಟೆಗೆ ವಿಶೇಷ ನಂದನದಲ್ಲಿ 'ಜೋಗಿ ಜೊತೆ ಮಾತುಕತೆ' ನೇರಪ್ರಸಾರದಲ್ಲಿ ಕವಿ, ಕತೆಗಾರ, ಕಾದಂಬರಿಕಾರ ಜೋಗಿ ಗಿರೀಶ್ ರಾವ್ ಹತ್ವಾರ್  ಇರಲಿದ್ದಾರೆ.

Latest Videos

undefined

RJ ವಿಶ್ವಾಸ್ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. Whatsapp ಸಂಖ್ಯೆ 9483091029 ಗೆ ಸಂದೇಶ ಕಳಿಸೋ ಮೂಲಕ ನೀವೂ ಕೂಡ ನಿಮ್ಮ ಅನಿಸಿಕೆ-ಅಭಿಪ್ರಾಯಗಳನ್ನು ಹಂಚಿಕೊಳ್ಳಬಹುದು. ಬೆಂಗಳೂರು ಆಕಾಶವಾಣಿಯ ಎಲ್ಲಾ ವಾಹಿನಿಗಳು ಅಂತರ್ಜಾಲದಲ್ಲಿ ಲೈವ್ ಸ್ಟ್ರೀಮ್ ಮೂಲಕ ಲಭ್ಯವಿರುವುದರಿಂದ ಈ ವೆಬ್ ವಿಳಾಸದಲ್ಲಿ ಕಾರ್ಯಕ್ರಮ ಕೇಳುವ ಸದಾಕಾಶವು ನಿಮಗಿದೆ

 ಇದನ್ನು ಓದಿ:  ಎದುರಾಳಿಗೆ ಸಾವು ಸಂಭವಿಸಿದಾಗ

ನದಿಯ ನೆನಪಿನ ಹಂಗು, ಯಾಮಿನಿ,  ಚಿಟ್ಟೆ ಹೆಜ್ಜೆ ಜಾಡು, ಹಿಟ್ ವಿಕೆಟ್, ಊರ್ಮಿಳಾ, ಮಾಯಾಕಿನ್ನರಿ, ಗುರುವಾಯನಕೆರೆ, ದೇವರ ಹುಚ್ಚು, ಚಿಕ್ಕಪ್ಪ, ಚೈತ್ರ ವೈಶಾಖ ವಸಂತ, ಎಲ್ಲಾನು ಮಾಡುವುದು ಹೊಟ್ಟೆಗಾಗಿ, ವಿರಹದ ಸಂಕ್ಷಿಪ್ತ ಪದಕೋಶ, ಬೆಂಗಳೂರು , ಬಿ ಕ್ಯಾಪಿಟಲ್ , ಸಲಾಂ ಬೆಂಗಳೂರು ಎಲ್ ಕಾದಂಬರಿಗಳ ಮೂಲಕ ಅಪಾರ ಪುಸ್ತಕ ಪ್ರೇಮಿಗಳನ್ನು ಅಭಿಮಾನಿಗಳನ್ನು ಜೋಗಿ ಹೊಂದಿದ್ದಾರೆ.

ಪ್ರಸ್ತುತ ಕನ್ನಡಪ್ರಭ ಪತ್ರಿಕೆಯ ಪುರವಣಿ ವಿಭಾಗದ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿರುವ ಜೋಗಿ ಸೋಶಿಯಲ್ ಮೀಡಿಯಾದಲ್ಲಿಯೂ ಸದಾ ಆಕ್ಟೀವ್.  ನಿಮ್ಮಿಷ್ಟದ ಲೇಖಕನಿಗೆ ಪ್ರಶ್ನೆ ಕೇಳುವ ಅಭಿಪ್ರಾಯ ಹಂಚಿಕೊಳ್ಳುವ ಅವಕಾಶ ಇದೀಗ ಬಂದಿದೆ. ಕನ್ನಡದ ನಾಡು ನುಡಿಗೆ ಮುಂಜಾನೆ ಒಂದು ವಂದನೆ ಸಲ್ಲಿಸಿ ಜೋಗಿ ಕಾರ್ಯಕ್ರಮಕ್ಕೆ ಕಿವಿಯಾಗುತ್ತೀರಿ ಅಲ್ಲವೇ?

click me!