ಮೇಡಂ ನಾನು ಗೇ, ಮಹಿಳೆಯರ ಪಿಂಕ್ ರ‍್ಯಾಪಿಡೋ ರೈಡ್ ಬುಕ್ ಮಾಡಿದ ಯುವತಿಗೆ ಬಿಗ್ ಶಾಕ್

Published : Oct 01, 2026, 03:00 PM IST
Pink Rapido Ride Leaves Woman in Shock

ಸಾರಾಂಶ

ಮೇಡಂ ನಾನು ಗೇ, ಹತ್ತಿ ಬೈಕ್ ನನಗೆ ಪರ್ವಾಗಿಲ್ಲ ಎಂದು ಯುವತಿಯನ್ನು ಪಿಕ್ ಮಾಡಲು ಬಂದ ಪುರುಷ ರ‍್ಯಾಪಿಡೋ ರೈಡರ್ ಹೇಳಿದ್ದಾನೆ. ಇದೀಗ ಈ ಘಟನೆ ಭಾರಿ ಕೋಲಾಹಲಕ್ಕೆ ಕಾರಣಾಗಿದೆ. ಪಿಂಕ್ ರೈಡ್ ಹೆಸರಲ್ಲಿ ನಡೆಯುತ್ತಿದೆಯಾ ಮೋಸ?

ಕ್ಯಾಬ್, ಬೈಕ್ ಟ್ಯಾಕ್ಸಿಗಳಲ್ಲಿ ಮಹಿಳೆಯರ ಸುರಕ್ಷತೆಗೆ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಆದರೂ ಹಲವು ಕಡೆ ಅಹಿತಕರ ಘಟನೆಗಳು ನಡೆದಿರುವುದು ವರದಿಯಾಗಿದೆ. ಇದೀಗ ಮತ್ತೊಂದು ಪ್ರಕರಣ ದಾಖಲಾಗಿದೆ. ಯುವತಿ ಪ್ರಯಾಣಕ್ಕೆ ಮಹಿಳೆಯರೇ ರೈಡರ್ ಆಗಿರುವ ರ‍್ಯಾಪಿಡೋ ಪಿಂಕ್ ರೈಡ್ ಬುಕ್ ಮಾಡಿದ್ದಾಳೆ. ಇದು ಮಹಿಳೆಯರ ಸುರಕ್ಷಿತ ಪ್ರಯಾಣಕ್ಕಾಗಿ ರ‍್ಯಾಪಿಡೋ ಆರಂಭಿಸಿದ ಸೇವೆಯಾಗಿದೆ. ಯುವತಿ ಮಹಿಳಾ ರ‍್ಯಾಪಿಡೋ ರೈಡರ್‌ನ ನಿರೀಕ್ಷೆಯಲ್ಲಿ ನಿಂತಿದ್ದ ವೇಳೆ ಪುರುಷ ರೈಡರ್ ಆಗಮಿಸಿದ್ದಾನೆ. ಪಿಂಕ್ ರೈಡ್ ಬುಕ್ ಮಾಡಿದ್ದೇನೆ ಎಂದಾಗ, ಹತ್ತಿ ಮೇಡಂ ನಾನು ಗೇ ಎಂದಿದ್ದಾನೆ. ಈ ಘಟನೆ ಕುರಿತು ಯುವತಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾಳೆ. ಇದೀಗ ಭಾರಿ ಕೋಲಾಹಲ ಸೃಷ್ಟಿಯಾಗಿದೆ.

ಅಚ್ಚರಿ ಜೊತೆ ಆತಂಕ ಎದುರಿಸಿದ ಯುವತಿ

ಶಾಲಿನಿ ಚತುರ್ವೇದಿ ಪ್ರಯಾಣಕ್ಕಾಗಿ ಪಿಂಕ್ ರ‍್ಯಾಪಿಡೋ ರೈಡ್ ಬುಕ್ ಮಾಡಿದ್ದಾರೆ. ಪಿಂಕ್ ರೈಡ್ ಕಾರಣ ಮಹಿಳಾ ರೈಡರ್ ಆಗಮಿಸಬೇಕು. ಮಹಿಳಾ ರ‍್ಯಾಪಿಡೋ ರೈಡರ್‌ಗೆ ಕಾಯುತ್ತಿದ್ದ ಶಾಲಿನಿಗೆ ಕೆಲ ಹೊತ್ತಲ್ಲೇ ಕರೆಯೊಂದು ಬಂದಿದೆ. ರ‍್ಯಾಪಿಡೋ ರೈಡರ್ ಎಂದು ಮಾತು ಆರಂಭಿಸಿದಾಗ ಶಾಲಿನಿಗೆ ಅಚ್ಚರಿಯಾಗಿದೆ. ಕಾರಣ ತಾನು ಬುಕ್ ಮಾಡಿದ್ದು ಪಿಂಕ್ ರೈಡರ್ ಆದರೆ ಪುರುಷನ ಧ್ವನಿ ಕೇಳಿಸುತ್ತಿದೆ. ನಾನು ಪಿಕಪ್ ಲೋಕೇಶನ್‌ನಲ್ಲಿದ್ದೇನೆ ಎಂದಿದ್ದಾನೆ.

ನಾನು ಗೇ ಮೇಡಂ

ಪುರುಷನೊಬ್ಬ ಶಬ್ದ ಕೇಳಿಸಿದಾಗಲೆ ಯುವತಿಗೆ ಅನುಮಾನದ ಜೊತೆಗೆ ಅಚ್ಚರಿಯಾಗಿದೆ. ಕೆಲ ಹೊತ್ತಲ್ಲೇ ರ‍್ಯಾಪಿಡೋ ರೈಡರ್ ಯುವತಿ ಮುಂದೆ ಬಂದಿದ್ದಾನೆ. ಬಳಿಕ ಒಟಿಪಿ ಕೇಳಿದ್ದಾನೆ. ಅಷ್ಟರಲ್ಲಿ ತಾನು ಪಿಂಕ್ ರ‍್ಯಾಪಿಡೋ ರೈಡ್ ಬುಕ್ ಮಾಡಿದ್ದೇನೆ. ಮಹಿಳಾ ಕ್ಯಾಪ್ಟನ್ ಇರಬೇಕಿತ್ತು. ಪುರುಷ ರೈಡರ್ ಹೇಗೆ ಎಂದು ಅನುಮಾನದಿಂದ ಶಾಲಿನಿ ಪ್ರಶ್ನಿಸಿದ್ದಾರೆ. ತಕ್ಷಣವೇ ಹತ್ತಿ ಮೇಡಂ, ನಾನು ಗೇ ಎಂದಿದ್ದಾನೆ.

ದಿಟ್ಟಿಸಿ ನೋಡುತ್ತಿದ್ದ ರೈಡರ್

ಪುರುಷ ರ‍್ಯಾಪಿಡೋ ರೈಡರ್ ಮಾತು ಕೇಳಿ ಯುವತಿ ಆತಂಕ ಹೆಚ್ಚಾಗಿದೆ. ಆ್ಯಪ್‌ನಲ್ಲಿ ನೋಡಿದರೆ ರೈಡರ್ ಪ್ರೋಫೈಲ್‌ನಲ್ಲಿ ಮಹಿಳೆಯ ಫೋಟೋ ಹಾಕಲಾಗಿದೆ. ಆದರೆ ಬಂದಿದ್ದು ಪುರುಷ. ಹೀಗಾಗಿ ತಾನು ಹತ್ತುವುದಿಲ್ಲ, ರೈಡ್ ಕ್ಯಾನ್ಸಲ್ ಮಾಡುವುದಾಗಿ ಹೇಳಿದ್ದಾಳೆ. ಕ್ಯಾನ್ಸಲೇಶನ್‌ಗೆ 15 ರೂಪಾಯಿ ಚಾರ್ಜ್ ತೋರಿಸಿದೆ. ಇತ್ತ ಪುರುಷ ರೈಡರ್ ಸ್ಥಳದಿಂದ ತೆರಳಲೇ ಇಲ್ಲ. ನನ್ನನ್ನೇ ದಿಟ್ಟಿಸಿ ನೋಡಲು ಆರಂಭಿಸಿದ. ನಾನು ಯಾವ ಕಟ್ಟಡದಲ್ಲಿ ವಾಸವಿದ್ದೇನೆ ಅನ್ನೋದು ಆತನಿಗೆ ಸ್ಪಷ್ಟವಾಗಿತ್ತು. ನನ್ನ ಆತಂಕ ಹೆಚ್ಚಾಯಿತು. ಕಾರಣ ನಾನು ಏನು ಮಾಡುವ ಪರಿಸ್ಥಿತಿಯಲ್ಲಿ ಇರಲಿಲ್ಲ ಎಂದು ಯುವತಿ ಹೇಳಿಕೊಂಡಿದ್ದಾಳೆ.

ಪಿಂಕ್ ರೈಡ್‌ಗಾಗಿ ಹೆಚ್ಚುವರಿ ಪಾವತಿ ಮಾಡುತ್ತಿದ್ದೇವೆ, ಆದರೆ ಮಹಿಳೆಯರಿಗೆ ಸುರಕ್ಷತೆ ಮಾತ್ರ ಇಲ್ಲದಾಗಿದೆ. ಇದು ಯಾವ ರೀತಿಯ ಸೇವೆ ಎಂದು ಶಾಲಿನಿ ಪ್ರಶ್ನಿಸಿದ್ದಾಳೆ. ಈ ಘಟನೆ ವೈರಲ್ ಆಗುತ್ತಿದ್ದಂತೆ ರ‍್ಯಾಪಿಡೋ ಪ್ರತಿಕ್ರಿಯೆ ನೀಡಿದೆ. ಘಟನೆಗೆ ವಿಷಾದ ವ್ಯಕ್ತಪಡಿಸಿ ಕ್ರಮ ಕೈಗೊಳ್ಳುವುದಾಗಿ ಹೇಳಿದೆ. ಮುಂದಿನ ದಿನಗಳಲ್ಲಿ ಮಹಿಳೆಯರ ಸುರಕ್ಷತೆಗೆ ಮುನ್ನಚ್ಚರಿಕೆ ವಹಿಸುವುದಾಗಿ ಹೇಳಿದೆ.

PREV
Read more Articles on
click me!

Recommended Stories

Bengaluru: 'ಕೈಮುಗಿದು ಕೇಳ್ತೇನೆ ರಸ್ತೆ ನಿರ್ಮಿಸಿ', ಅಧಿಕಾರಿಗಳಿಗೆ ಸಚಿವ ಕೃಷ್ಣ ಬೈರೇಗೌಡ ಮನವಿ
ನಿಮ್ಮ ಸಂಬಳ ₹1 ಲಕ್ಷಕ್ಕಿಂತ ಕಡಿಮೆಯಿದ್ದರೆ ದಯವಿಟ್ಟು ಬೆಂಗಳೂರಿಗೆ ಬರಬೇಡಿ! ಉದ್ಯೋಗಿಯ ಅನುಭವದ ಮಾತು ವೈರಲ್