Republic Day 20 ರಿಂದ 10 ದಿನ ಲಾಲ್‌ಬಾಗಲ್ಲಿ ಪುಷ್ಪ ಪ್ರದರ್ಶನ

By Kannadaprabha News  |  First Published Jan 17, 2023, 8:59 AM IST

ಸಸ್ಯಕಾಶಿಯಲ್ಲಿ 20ರಂದು ಮುಖ್ಯಮಂತ್ರಿಗಳಿಂದ ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ ನೀಡಲಿದ್ದು, ನಿತ್ಯ ಬೆಳಗ್ಗೆ 7ರಿಂದ ಸಂಜೆ 7ರವರೆಗೆ ವೀಕ್ಷಣೆಗೆ ಅವಕಾಶವಿರಲಿದೆ. ಆಕರ್ಷಕ ಹೂಗಳಲ್ಲಿ ಬೆಂಗಳೂರಿನ ಇತಿಹಾಸ, ವಿಜ್ಞಾನ-ತಂತ್ರಜ್ಞಾನ ಪರಿಕಲ್ಪನೆ ಅನಾವರಣಗೊಳ್ಳಲಿದೆ. 


 ಬೆಂಗಳೂರು: ನಗರದ ಇತಿಹಾಸ ವಿಷಯಾಧಾರಿತ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನ-2023 ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ಜ.20ರಿಂದ 30ವರವರೆಗೆ 11 ದಿನ ನÜಡೆಯಲಿದೆ.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ತೋಟಗಾರಿಕೆ ಸಚಿವ ಮುನಿರತ್ನ ಅವರು, ಜ.20ರಂದು ಬೆಳಗ್ಗೆ 10ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಫಲಪುಷ್ಪ ಪ್ರದರ್ಶನದ ಉದ್ಘಾಟನೆ ನೆರವೇರಿಸುವರು. ಶಾಸಕ ಉದಯ್‌ ಬಿ.ಗರುಡಾಚಾರ್‌ ಅಧ್ಯಕ್ಷತೆ ವಹಿಸುವರು. ಸಂಸದ ತೇಜಸ್ವಿ ಸೂರ್ಯ, ಶಾಸಕರಾದ ಟಿ.ಎ.ಶರವಣ, ಅ.ದೇವೇಗೌಡ, ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಉಪಸ್ಥಿತರಿರುವರು ಎಂದು ತಿಳಿಸಿದರು.

Tap to resize

Latest Videos

ಜ.21ರಂದು ಮಧ್ಯಾಹ್ನ 1ಕ್ಕೆ ಲಾಲ್‌ಬಾಗ್‌ನ ತೋಟಗಾರಿಕೆ ಮಾಹಿತಿ ಕೇಂದ್ರದಲ್ಲಿ ಇಕೆಬಾನ ಮತ್ತು ಪೂರಕ ಕಲೆಗಳ ಉದ್ಘಾಟನೆಯನ್ನು ಅದಮ್ಯಚೇತನ ಟ್ರಸ್ಟ್‌ ಅಧ್ಯಕ್ಷ ತೇಜಸ್ವಿನಿ ಅನಂತ್‌ಕುಮಾರ್‌ ನೆರವೇರಿಸುವರು. ಜ.28ರಂದು ಮಧ್ಯಾಹ್ನ 2.30ಕ್ಕೆ ವಿವಿಧ ಸ್ಪರ್ಧೆಗಳ ಬಹುಮಾನ ವಿತರಣೆ ನಡೆಯಲಿದ್ದು, ಜ.30ರಂದು ಸಂಜೆ 7ಕ್ಕೆ ಫಲಪುಷ್ಪ ಪ್ರದರ್ಶನ ಮುಕ್ತಾಯವಾಗಲಿದೆ. ಪ್ರತಿ ದಿನ ಬೆಳಗ್ಗೆ 7ರಿಂದ ಸಂಜೆ 7ರವರೆಗೆ ಫಲಪುಷ್ಪ ಪ್ರದರ್ಶನದ ಇರಲಿದೆ ಎಂದು ಹೇಳಿದರು.

ಈ ವೇಳೆ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್‌ ಕಠಾರಿಯಾ, ನಿರ್ದೇಶಕ ಕೆ.ನಾಗೇಂದ್ರಪ್ರಸಾದ್‌, ಜಂಟಿ ನಿರ್ದೇಶಕ ಜಗದೀಶ್‌ ಇದ್ದರು.

ಮೆಟ್ರೋದಲ್ಲಿ ಲಾಲ್‌ಬಾಗ್‌ನಿಂದ ಯಾವುದೇ ನಿಲ್ದಾಣಕ್ಕೆ 30 ರೂ ಟಿಕೆಟ್‌

ಬೇಗೂರು ಶಾಸನ ಪ್ರತಿಕೃತಿ
ಬೆಂಗಳೂರು ಇತಿಹಾಸ ಅಧಾರಿತವಾಗಿ ನಡೆಯುವ 213ನೇ ವಿಶೇಷ ಪುಷ್ಪ ಪ್ರದರ್ಶನದಲ್ಲಿ ವಿಜ್ಞಾನ, ತಂತ್ರಜ್ಞಾನ ನಗರಿ ಬೆಂಗಳೂರನ್ನು ಸಾಂಕೇತಿಕವಾಗಿ ಪ್ರತಿಬಿಂಬಿಸುವ ಬೃಹತ್‌ ಕಲಾಕೃತಿಯು ಗಾಜಿನ ಮನೆಯ ಕೇಂದ್ರ ಸ್ಥಾನದಲ್ಲಿ ಪ್ರದರ್ಶನಗೊಳ್ಳಲಿದೆ. ಇತಿಹಾಸದ ಪ್ರತಿಬಿಂಬವಾಗಿ ದುರ್ಗ, ದುರ್ಗದ ಮೇಲ್ಭಾಗದಲ್ಲಿ ಆಧುನಿಕ ಬೆಂಗಳೂರನ್ನು ಪ್ರತಿಬಿಂಬಿಸುವ ವಿಜ್ಞಾನ-ತಂತ್ರಜ್ಞಾನದ ಪರಿಕಲ್ಪನೆಗಳು, ದುರ್ಗದ ಸುತ್ತ ಬೆಂಗಳೂರಿನ ಭೂ ಭಾಗದ ಪ್ರಾಚೀನತೆಯನ್ನು ಸಂಕೇತಿಸುವ ಸುಮಾರು 300 ಕೋಟಿ ವರ್ಷಗಳ ಹಿಂದೆ ರೂಪಗೊಂಡಿರುವ ಲಾಲ್‌ಬಾಗ್‌ ಬಂಡೆ, ವೃಷಭಾವತಿ ನದಿಯ ಮೂಲ, ಬೆಂಗಳೂರು ಪ್ರದೇಶದಲ್ಲಿ ಪ್ರಾರಂಭದ ಜನವಸತಿಯ ಸಾಂಕೇತಿಕವಾಗಿ ರೋಮನ್‌ಕಾಲದ ನಾಣ್ಯಗಳು, ಬೆಂಗಳೂರಿನ ಹೆಸರನ್ನು ಪ್ರಪ್ರಥಮವಾಗಿ ಉಲ್ಲೇಖಿಸಿದ ಬೇಗೂರು ಶಾಸನದ ಪ್ರತಿಕೃತಿ ಇರಲಿದೆ.

ಬೆಂಗಳೂರು ನಗರದ ಗಡಿ ಗುರುತಾಗಿದ್ದ ಕೆಂಪೇಗೌಡರ ಕಾಲದ ಗಡಿಗೋಪುರ, ದೊಡ್ಡಬಸವಣ್ಣ ಮತ್ತು ಮರಾಠರ ಕಾಲಾವಧಿಯ ಕಾಡುಮಲ್ಲೇಶ್ವರ ದೇವಾಲಯ, ಟಿಪ್ಪು ಕಾಲದ ಬೇಸಿಗೆ ಅರಮನೆ, ಬ್ರಿಟಿಷ್‌ ಕಮಿಷನರ್‌ ಆಡಳಿತಾವಧಿಯ ಹೈಕೋರ್ಚ್‌ ಕಟ್ಟಡ, ಮೈಸೂರು ಒಡೆಯರ್‌ ಆಡಳಿತಾವಧಿಯ ಬೆಂಗಳೂರು ಅರಮನೆ, ವಿಧಾನಸೌಧದ ಕಲಾಕೃತಿಗಳು, ಆಂಥೂರಿಯಂ, ಲಿಲ್ಲಿ, ಜೆರ್‌ಬೆರಾ, ಸೇವಂತಿಗೆ, ಆರ್ಕಿಡ್‌್ಸ, ಕಾರ್‌ನೇಷನ್ಸ್‌ ಇತ್ಯಾದಿ 30 ಸಾವಿರಕ್ಕೂ ಹೆಚ್ಚು ವಿವಿಧ ಆಕರ್ಷಕ ಹೂಗಳ ಜೋಡಣೆಯ ನಡುವೆ ಪ್ರದರ್ಶನಗೊಳ್ಳಲಿದೆ.

20 ಅಡಿ ಎತ್ತರದ ವರ್ಟಿಕಲ್‌ ಗಾರ್ಡನ್‌
14/14 ಅಡಿ ಅಗಲ ಹಾಗೂ 20 ಅಡಿ ಎತ್ತರದ ವರ್ಟಿಕಲ್‌ ಗಾರ್ಡನ್‌ನ ಕೆಂಪೇಗೌಡ ಗಡಿ ಗೋಪುರದ ಮಾದರಿಯು 35 ಸಾವಿರಕ್ಕೂ ಹೆಚ್ಚು ಸಂಖ್ಯೆಯ ಆಯ್ದ ಗಿಡಗಳಿಂದ ಮೂಡಲಿದೆ. ಗಾಜಿನ ಮನೆಯ ಕೇಂದ್ರದ ಭಾಗದ ಹಿಂಬದಿಯಲ್ಲಿ 2.5 ಲಕ್ಷಕ್ಕೂ ಹೆಚ್ಚು ಸೇವಂತಿಗೆ ಹೂಗಳಿಂದ ಅರಳುವ ಹೂಗಳು ಗಮನ ಸೆಳೆಯಲಿದೆ. 4 ವಿವಿಧ ಬಗೆಯ ಸೇವಂತಿಗೆ ಹೂಗಳ ಪಿರಮಿಡ್‌, 80 ಸಾವಿರಕ್ಕೂ ಹೆಚ್ಚು ಅಧಿಕ ಹೂ ಕುಂಡಗಳಿಂದ ಸಿಂಗಾರಗೊಂಡ 10 ಪುಷ್ಪ ಪಿರಮಿಡ್‌ಗಳು ಆಕರ್ಷಿಸಲಿವೆ. ಗಾಜಿನ ಮನೆಯ ಎಡಭಾಗದ 40/30ಅಡಿ ಪ್ರದೇಶದಲ್ಲಿ ಅನಾವರಣದಗೊಳ್ಳಲಿದೆ. ಗಾಜಿನಮನೆಯ ಪ್ರವೇಶ ದ್ವಾರದ ಬಲಭಾಗದಲ್ಲಿ 15ಕ್ಕೂ ಹೆಚ್ಚು ಆಕರ್ಷಕ ಬೋನ್ಸಾಯ್‌ ಗಿಡಗಳ ಪ್ರದರ್ಶನ ಇರಲಿದೆ. 10 ವಿವಿಧ ಬಗೆಯ ಮೆಗಾ ಜಾನೂರ್‌ ಪ್ರತಿರೂಪಗಳು ಈ ಬಾರಿಯ ಪ್ರಮುಖ ಆಕರ್ಷಣೆಯಾಗಿವೆ.

11 ದೇಶಗಳ ಹೂವು ಪ್ರದರ್ಶನ
ಕ್ಯಾಲಾಲಿಲ್ಲಿ- ಬಿಳಿ, ಹಳದಿ, ಪಿಂಕ್‌, ಪೀಚ್‌(ಹಾಲೆಂಡ್‌), ಹೈಡ್ರಾಂಜಿಯಾ- ಐದು ವಿವಿಧ ವರ್ಣಗಳು(ಕೊಲಂಬಿಯಾ), ಸ್ವೀಟ್‌ ವಿಲಿಯಂ, ಕೀನಿಯಾ, ಆಸ್‌ಪರಾಗಸ್‌-ಬಿಳಿ ಮತ್ತು ನೀಲಿ, ಲೈಯಾಟ್ರಿಸ್‌-ನೇರಳೆ(ಇಸ್ರೇಲ್‌), ಆನಿಯನ್‌ ಫ್ಲವರ್‌(ಚಿಲಿ), ಹೈಪರಿಕಂ-4 ವರ್ಣಗಳು(ಯಥೋಪಿಯಾ), ಸ್ನಾ್ಯಪ್‌ಡ್ರಾಗನ್‌-4 ಬಗೆ (ನೆದರ್‌ ಲ್ಯಾಂಡ್‌), ಟೂಲಿಫ್‌-4 ಬಣ್ಣಗಳು(ಬೆಲ್ಜಿಯಂ), ಕ್ಯಾಸ್‌ ಪೀಡಿಯಾ- ಹಳದಿ, ಯರಿಂಜಿಯಾ-ಹಸಿರು ಮತ್ತು ನೇರಳೆ(ಕೀನ್ಯಾ), ಪಿಂಕ್‌ಕುಷನ್‌-ಕಿತ್ತಳೆ, ಹಳದಿಮ ಸ್ಪಾಕ್ಸ್‌-ಹಸಿರು ಮತ್ತು ಬಿಳಿ, ವ್ಯಾಕ್ಸ್‌ಪ್ಲಾವರ್‌(ಆಸ್ಪ್ರೇಲಿಯಾ), ವೈಟ್‌, ಪಿಂಕ್‌, ನೇರಳೆ(ಬೆಲ್ಜಿಯಂ) ಹೂವುಗಳು ಪ್ರದರ್ಶನಗೊಳ್ಳಲಿವೆ.

ಲಾಲ್ ಬಾಗ್‌ ಪುಷ್ಪ ಪ್ರದರ್ಶನದಲ್ಲಿ ಎದ್ದು ನಿಂತ ವಿವೇಕಾನಂದ

ವಿಶೇಷ ರಕ್ಷಣೆ
ಲಾಲ್‌ಬಾಗ್‌ ಎಲ್ಲಾ ನಾಲ್ಕು ಪ್ರವೇಶ ದ್ವಾರಗಳು ಮತ್ತು ಗಾಜಿನ ಮನೆಯ ಪ್ರವೇಶ ದ್ವಾರಗಳಲ್ಲಿ ಡೋರ್‌ಫ್ರೇಮ್‌ ಮೆಟಲ್‌ ಡಿಟೆಕ್ಟ​ರ್‍ಸ್ಗಳನ್ನು ಅಳವಡಿಲಾಗುತ್ತದೆ. ಎಲ್ಲ ಪ್ರಮುಖ ಪ್ರದೇಶಗಳಲ್ಲಿ ಒಟ್ಟಾರೆ 104 ಸಿಸಿ ಟಿವಿಗಳ ಅಳವಡಿಸಲಾಗುತ್ತದೆ. 10 ಸ್ಥಳಗಳಲ್ಲಿ ಎತ್ತರದ ಟವರ್‌ ವೇದಿಕೆಯಿಂದ ಪೊಲೀಸ್‌ ಕಣ್ಗಾವಲು, ಪೊಲೀಸ್‌, ಗೃಹರಕ್ಷಕ ಸಿಬ್ಬಂದಿಯಿಂದ ಬಂದೋಬಸ್‌್ತ ನಡೆಯಲಿದೆ.

ನಮ್ಮ ಕ್ಲಿನಿಕ್‌ ಸ್ಥಾಪನೆ
ಲಾಲ್‌ಬಾಗ್‌ಗೆ ವಾಯು ವಿಹಾರಕ್ಕೆ ಬರುತ್ತಿರುವ ಕೆಲವರಿಗೆ ದಿಢೀರ್‌ ಅಸ್ಪಸ್ಥತೆಗೊಳಗಾಗುತ್ತಿರುವ ಮಾಹಿತಿ ಬಂದಿದೆ. ಈ ಹಿನ್ನೆಲೆಯಲ್ಲಿ ಉದ್ಯಾನದ ನಾಲ್ಕು ಗೇಟ್‌ಗಳಲ್ಲಿ ಪ್ರಥಮ ಚಿಕಿತ್ಸೆ ಬಾಕ್ಸ್‌ ಅಳವಡಿಸಲಾಗುವುದು. ಹಾಗೆಯೇ ಉದ್ಯಾನದಲ್ಲಿ ಶಾಶ್ವತವಾಗಿ ಇರುವಂತೆ ನಮ್ಮ ಕ್ಲಿನಿಕ್‌ ತೆಗೆಯಲು ನಿರ್ಧರಿಸಲಾಗಿದ್ದು, ಖಾಸಗಿ ವ್ಯಕ್ತಿಗಳು ಕೂಡ ಇದರಲ್ಲಿ ಕೈಜೋಡಿಸಲು ಮುಂದಾಗಿದ್ದಾರೆ. ಇದರಿಂದ ಅನಾರೋಗ್ಯಕ್ಕೆ ತುತ್ತಾಗುವ ಹಿರಿಯ ನಾಗರಿಕರು ಸ್ಥಳದಲ್ಲೇ ಚಿಕಿತ್ಸೆ ಪಡೆಯಲು ಅನುಕೂಲ ಲಭ್ಯವಾಗಲಿದೆ ಎಂದು ಸಚಿವ ಮುನಿರತ್ನ ತಿಳಿಸಿದರು.

ಟಿಕೆಟ್‌ ದರ ಇಂತಿದೆ
ಫಲಪುಷ್ಪ ಪ್ರದರ್ಶನ ವೀಕ್ಷಣೆಗೆ ಕಳೆದ ವರ್ಷದಂತೆ ಈ ಬಾರಿಯೂ ಟಿಕೆಟ್‌ ದರವನ್ನು .70 ಮತ್ತು ರಜಾ ದಿನಗಳಲ್ಲಿ .75 ನಿಗದಿಪಡಿಸಲಾಗಿದೆ. 12 ವರ್ಷದೊಳಗಿನ ಮಕ್ಕಳಿಗೆ .30 ಇದೆ. ಶಾಲಾ ಸಮವಸ್ತ್ರ ಮತ್ತು ಗುರುತಿನ ಚೀಟಿ ಧರಿಸಿ ಬರುವ 1ರಿಂದ 10ನೇ ತರಗತಿವರೆಗಿನ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರದರ್ಶನದ ಪೂರ್ಣ ಅವಧಿಯಲ್ಲಿ ಉಚಿತ ಪ್ರವೇಶ ಕಲ್ಪಿಸಲಾಗಿದೆ. ಅದಕ್ಕಾಗಿ ಶಿಕ್ಷಕರೊಂದಿಗೆ ವಿದ್ಯಾರ್ಥಿಗಳು ಶಾಲೆಯ ಗುರುತಿನ ಚೀಟಿ(ಐಡಿ ಕಾರ್ಡ್‌), ಶಾಲಾ ಆಡಳಿತ ಮಂಡಳಿ ಅನುಮತಿ ಪತ್ರದೊಂದಿಗೆ ಆಗಮಿಸಬೇಕಿದೆ.

 

click me!