'ಈಟ್‌ ಫೈವ್‌ ಸ್ಟಾರ್‌.. ಡು ನಥಿಂಗ್‌' ಬೆಲೆ ಏರಿಕೆ ವಿರುದ್ಧ ಸೋಶಿಯಲ್‌ ಮೀಡಿಯಾದಲ್ಲಷ್ಟೇ ಟೀಕೆ ಮಾಡುವ ಬಿಜೆಪಿಗೆ 'ಅಡ್ಜಸ್ಟ್‌ಮೆಂಟ್‌' ಟ್ರೋಲ್‌!

Published : Nov 04, 2026, 08:12 PM IST
Karnataka BJP Trolled Over Social Media Protests

ಸಾರಾಂಶ

ರಾಜ್ಯ ಸರ್ಕಾರ ಹಾಲು, ಮೊಸರು ಮತ್ತು ಬಸ್ ದರಗಳನ್ನು ದಿಢೀರ್ ಏರಿಕೆ ಮಾಡಿದ್ದು, ಜನಸಾಮಾನ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಪ್ರಮುಖ ವಿರೋಧ ಪಕ್ಷವಾದ ಬಿಜೆಪಿ ಬೀದಿಗಿಳಿದು ಹೋರಾಡುವ ಬದಲು ಕೇವಲ ಸಾಮಾಜಿಕ ಜಾಲತಾಣಗಳಿಗೆ ಸೀಮಿತವಾಗಿದೆ.

ಬೆಂಗಳೂರು (ನ.4): ಹಾಲು, ಮೊಸರು ಈಗ ಬಸ್‌ ಟಿಕೆಟ್‌ ದರಗಳಲ್ಲಿ ಸಾಮಾನ್ಯರ ನಿರೀಕ್ಷೆಗೂ ಮೀರಿ ರಾಜ್ಯ ಸರ್ಕಾರ ದರ ಏರಿಕೆ ಮಾಡಿದೆ. ಜನರು ಸಿಕ್ಕ ಸಿಕ್ಕಲ್ಲಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಮಾಧ್ಯಮಗಳ ಮೈಕ್‌ ಸಿಕ್ಕರೆ ಸಾಕು ಸರ್ಕಾರದ ಸಾಲು ಸಾಲು ಬೆಲೆ ಏರಿಕೆಯನ್ನು ಬೊಟ್ಟು ಮಾಡಿ, ಹೀಗೆ ಆದಲ್ಲಿ ಬಡ ಜನರು ಬದುಕೋದು ಹೇಗೆ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಬಡ ಜನರ ಮೇಲೆ ರಾಜ್ಯ ಸರ್ಕಾರ ಸಮರ ಸಾರುತ್ತಿದ್ದರೂ ಈ ಹಂತದಲ್ಲಿ ಜನರ ಪರವಾಗಿ ನಿಂತು ಭರವಸೆ ಗಿಟ್ಟಿಸಿಕೊಳ್ಳಬೇಕಾದ ಪ್ರಮುಖ ವಿರೋಧ ಪಕ್ಷ ಬಿಜೆಪಿಯೇ ನಾಪತ್ತೆಯಾಗಿದೆ. ರಾಜ್ಯ ಸರ್ಕಾರದ ವಿರುದ್ಧ ಬೀದಿಗಿಳಿದು ಪ್ರತಿಭಟನೆ ಮಾಡೋದನ್ನು ಬಿಟ್ಟು ಸೋಶಿಯಲ್‌ ಮೀಡಿಯಾದಲ್ಲಿ ಟ್ವೀಟ್‌ ಕುಟ್ಟಿ ಆಕ್ರೋಶ ಹೊರಹಾಕುತ್ತಿದೆ.

ಹಾಲಿನ ದರ ಏರಿಕೆಯಾಯ್ತು, ಮೊಸರಿನ ದರವನ್ನು ಭಾರೀ ಪ್ರಮಾಣದಲ್ಲಿ ಏರಿಕೆ ಮಾಡಿದ್ದಾಯ್ತು, ಇಂದು ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ ದರವನ್ನು ದೊಡ್ಡ ಮಟ್ಟದಲ್ಲಿ ಏರಿಕೆ ಮಾಡಿದೆ. ಇಂದಾದರೂ ವಿರೋಧ ಪಕ್ಷದವರು ರಾಜ್ಯ ಸರ್ಕಾರದ ವಿರುದ್ಧ ದೊಡ್ಡ ಮಟ್ಟದ ಪ್ರತಿಭಟನೆ ಮಾಡಿ ಬೆಲೆ ಏರಿಕೆಯನ್ನು ರೋಲ್‌ ಬ್ಯಾಕ್‌ ಮಾಡಿಸುತ್ತಾರೆ ಎಂದು ಕಾದಿದ್ದ ಜನರಿಗೆ ನಿರಾಸೆಯಾಗಿದೆ. 2023ರ ಚುನಾವಣೆಯಲ್ಲಿ ಎದುರಾರ ಸೋಲಿನಿಂದ ಇನ್ನೂ ಕೂಡ ಬಿಜೆಪಿ ಪಕ್ಷ ಹೊರಬಂದಿಲ್ಲ ಎನ್ನುವುದಂತೂ ಜನರಿಗೆ ಗೊತ್ತಾಗಿದೆ.

'ಹಾಗೇನಾದರೂ ಬಿಜೆಪಿ ಅಧಿಕಾರದಲ್ಲಿದ್ದು, ಈ ರೀತಿಯಲ್ಲಿ ಹಾಲು ಅಥವಾ ಬಸ್‌ ಟಿಕೆಟ್‌ ದರ ಏರಿಕೆ ಮಾಡಿದ್ದಲ್ಲಿ, ಕಾಂಗ್ರೆಸ್‌ ಪಕ್ಷ ತಕ್ಷಣವೇ ಬೀದಿಗಿಳಿದು, ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ಮಾಡಿ. ಇಡೀ ಬೆಲೆ ಏರಿಕೆಯನ್ನು ವಾಪಾಸ್‌ ತೆಗೆದುಕೊಳ್ಳುವವರೆಗೂ ಸುಮ್ಮನೆ ಬಿಡುತ್ತಿರಲಿಲ್ಲ. ಆದರೆ, ಈಗಲ ವಿರೋಧ ಪಕ್ಷ ಏನು ಮಾಡ್ತಿದೆ? ಇಡೀ ಬೆಲೆ ಏರಿಕೆ ವಿರುದ್ಧ ಬಿಜೆಪಿಯ ಪ್ರತಿಭಟನೆ ಕೆಲವು ಟ್ವೀಟ್‌ಗಳನ್ನು ಹಾಗೂ ರೀಲ್ಸ್‌ಗಳನ್ನು ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡುವದಕಷ್ಟೇ ಸೀಮಿತವಾಗಿದೆ. ಇನ್ನು ರಾಜಕೀಯ ನಾಯಕರು ಬೆಲೆ ಏರಿಕೆ ವಿರುದ್ಧ ಹೇಳುವ ಆಕ್ರೋಶದ ಮಾತುಗಳು ಅವರ ಸೋಶಿಯಲ್‌ ಮೀಡಿಯಾ ಅಕೌಂಟ್‌ನಲ್ಲಿ ಕಾಣುತ್ತಿದೆಯೇ ಹೊರತು, ಆನ್‌ಗ್ರೌಂಡ್‌ನಲ್ಲಿ ಎಲ್ಲೂ ಕಾಣುತ್ತಿಲ್ಲ. ಒಟ್ಟಾರೆಯಾಗಿ ಬಿಜೆಪಿ ನಾಯಕ ಪ್ರತಿಭಟನೆ ಮೈದಾನದಲ್ಲಿ ನಯಾಪೈಸೆ ಲಾಭ ತರುತ್ತಿಲ್ಲ ಅನ್ನೋದಂತೂ ಸ್ಪಷ್ಟವಾಗಿದೆ.

'ರಾಜ್ಯದ ಪ್ರಬಲ ವಿರೋಧ ಪಕ್ಷ ಕೇವಲ ಸೋಶಿಯಲ್ ಮೀಡಿಯಾಗೆ ಮಾತ್ರ ಸೀಮಿತವಾಗಬಾರದು. ಗಾಢ ನಿದ್ರೆಯಿಂದ ಹೊರಬನ್ನಿ' ಎಂದು ವರುಣ್‌ ಎನ್ನುವವರು ಟ್ವೀಟ್‌ ಮಾಡಿದ್ದಾರೆ. ಬಿಜೆಪಿಯ ಈಗಿನ ಕೆಲಸ ಹೇಗಿದೆ ಎಂದರೆ ಫೈವ್‌ ಸ್ಟಾರ್‌ ಜಾಹೀರಾತಿನ ರೀತಿ ಆಗಿದೆ. ಈಟ್‌ ಫೈವ್‌ ಸ್ಟಾರ್‌..ಡು ನಥಿಂಗ್‌' ಎಂದು ಟ್ರೋಲ್‌ ಮಾಡಿದ್ದಾರೆ.

ಬಹುಶಃ ರಾಜ್ಯದಲ್ಲಿ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷ ಅನ್ನೋದೇ ಇಲ್ಲ. ಎರಡೂ ಪಕ್ಷಗಳೂ ಸೇರಿ ಬೆಂಗಳೂರಿನಲ್ಲಿ ರಿಯಲ್‌ ಎಸ್ಟೇಟ್‌ ದಂಧೆ ಮಾಡಲು ತೊಡಗಿವೆ. ಸ್ಕ್ರೀನ್‌ ಎದುರುಗಡೆ ಮಾತ್ರವೇ ಇವರ ಆಕ್ರೋಶ. ಅದರ ಹಿಂದೆ ಇಬ್ಬರೂ ಸ್ನೇಹಿತರು ಎಂದು ಮತ್ತೊಬ್ಬರು ಬರೆದಿದ್ದಾರೆ.

ಕರ್ನಾಟಕ ಬಿಜೆಪಿ ಸೋಶಿಯಲ್‌ ಮೀಡಿಯಾದಲ್ಲಷ್ಟೇ ಆಕ್ಟೀವ್‌. ಇವರು ಮಾಡುವ ಪ್ರತಿಭಟನೆಗೆ ಪುಡಿಗಾಸಿನ ಜನ ಕೂಡ ಬರೋದಿಲ್ಲ. ಮನೆಯಲ್ಲಿ ರಿಲಾಕ್ಸ್‌ ಮೂಡ್‌ನಲ್ಲಿದ್ದಾರೆ. ಚುನಾವಣೆ ಟೈಮ್‌ನಲ್ಲಿ ಎದ್ದು ಬರ್ತಾರೆ. ಈಗ ಏನಿದ್ದರು ರಾಷ್ಟ್ರ ಬಿಜೆಪಿಯೇ ಮಾಡಬೇಕು ಎಂದು ಮತ್ತೊಬ್ಬರು ಬರೆದಿದ್ದಾರೆ.

ಬಹುಶಃ ಹಾಲು ಮಾರಾಟದಲ್ಲಿ ಸರ್ಕಾರಕ್ಕೆ 1 ರೂಪಾಯಿ ಬರುತ್ತೆ. ಅದರಲ್ಲಿ ಬಿಜೆಪಿ ಪಕ್ಷಕ್ಕೆ 50 ಪೈಸೆ ಕೊಡುವ ಡೀಲ್‌ ಆಗಿರಬೇಕು. ಅದಕ್ಕೆ ಸುಮ್ಮನೆ ಕುಳಿತಿದ್ದಾರೆ ಎಂದು ಮತ್ತೊಬ್ಬರು ಬರೆದಿದ್ದಾರೆ.

ಎಲ್ಲವೂ ಕೂಡ ಅಡ್ಜಸ್ಟ್‌ಮೆಂಟ್‌. ರಾಜ್ಯದ ಬಿಜೆಪಿ ಪಕ್ಷಕ್ಕಿಂತ ಕೇಂದ್ರದ ಕಾಂಗ್ರೆಸ್‌ ಪಕ್ಷವೇ ಚೆನ್ನಾಗಿರುವ ರೀತಿ ಕಾಣುತ್ತಿದೆ ಎಂದು ಮತ್ತೊಬ್ಬರು ಬಿಜೆಪಿಯ ಅಡ್ಜಸ್ಟ್‌ಮೆಂಟ್‌ ರಾಜಕೀಯಕ್ಕೆ ಉಪ್ಪುಖಾರ ಹಾಕಿ ಆಕ್ರೋಶ ಹೊರಹಾಕಿದ್ದಾರೆ.

ಈ ವಿಚಾರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರನ್ನು ಪ್ರಶ್ನೆ ಮಾಡಿದರೆ, ಕೆಲವು ಜಾತಿವಾದಿಗಳು ನಮ್ಮನ್ನು ಲಿಂಗಾಯತ ವಿರೋಧಿ ಎಂದು ಕರೆಯುತ್ತಾರೆ. ಆರ್‌.ಅಶೋಕ್‌ ಬಿಜೆಪಿಯಲ್ಲಿಮ ಲೆಕ್ಕಕ್ಕೇ ಇಲ್ಲ. ಇಡೀ ಕರ್ನಾಟಕ ಬಿಜೆಪಿ, ಬಿಎಸ್‌ವೈ ಕುಟುಂಬದ ಅಡಿಯಲ್ಲಿದೆ. ಅದೇ ಕಾರಣಕ್ಕೆ ವಿರೋಧ ಪಕ್ಷದ ಸ್ಥಿತಿ ಹೀಗಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

PREV
Read more Articles on
click me!

Recommended Stories

ಹಾಲು, ಬಸ್‌ ಟಿಕೆಟ್‌ ರೇಟ್‌ ಜಾಸ್ತಿ ಮಾಡಿ, ಮಹಿಳೆಯರಿಗೆ ದೀಪಾವಳಿ 'ಗೃಹಲಕ್ಷ್ಮಿ' ಕಳಿಸಿದ ಸರ್ಕಾರ! 3 ಕಂತಿನ ಹಣ ರಿಲೀಸ್‌
ಕೆಜಿ ಹಳ್ಳಿ ಮೆಟ್ರೋ ಸ್ಟೇಷನ್‌ಗೆ ಅರೇಬಿಕ್ ಕಾಲೇಜು ಮೆಟ್ರೋ ನಿಲ್ದಾಣ ಎಂದು ಮರುನಾಮಕರಣ? ಸಿಎಂಗೆ ಜಮೀರ್‌ ಅಹ್ಮದ್‌ ಪತ್ರ