ಸ್ಟಿಂಗ್ ಆಪರೇಷನ್ ತನಿಖೆಯಲ್ಲೇ ವ್ಯವಸ್ಥಿತ ಷಡ್ಯಂತ್ರ, ಇಡೀ ಪ್ರಕರಣ ಉಲ್ಟಾ, ಜೆಡಿಎಸ್ ಸ್ಫೋಟಕ ಆರೋಪ

Published : Oct 25, 2026, 01:29 PM IST
JDS

ಸಾರಾಂಶ

ರಾಜ್ಯದ ಸ್ಟಿಂಗ್ ಆಪರೇಶನ್ ಪ್ರಕರಣವನ್ನು ತನಿಖೆ ಮೂಲಕ ಜೆಡಿಎಸ್ ತಲೆಗೆ ಕಟ್ಟುವ ಪ್ರಯತ್ನ ನಡೆದಿದೆ. ಈ ಕುರಿತು ದಾಖಲೆ ಸಮೇತ ಜೆಡಿಎಸ್ ವಕ್ತಾರ ದೇವರಾಜ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಬೆಂಗಳೂರು (ಅ.25) ರಾಜ್ಯದಲ್ಲಿ ಕಳೆದ ಹಲವು ದಿನಗಳಿಂದ ಕೋಲಾಹಲ ಸೃಷ್ಟಿಸಿರುವ ಸ್ಟಿಂಗ್ ಆಪರೇಶನ್ ಪ್ರಕರಣ ಕುರಿತು ಜೆಡಿಎಸ್ ಮತ್ತೊಂದು ಸುದ್ದಿಗೋಷ್ಠಿ ಮೂಲಕ ಸರ್ಕಾರದ ತಲೆನೋವು ಹೆಚ್ಚಿಸಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕುರಿತು ಸ್ಟಿಂಗ್ ಆಪರೇಶನ್ ಮಾಡಿರುವ ವಿಡಿಯೋ ಮುಂದಿಟ್ಟುಕೊಂಡು ಸಿಎಂ ಹಾಗೂ ಸರ್ಕಾರ ಕಾರ್ಯಸಾಧನೆ ಮುಂದಾಗಿದೆ ಎಂಬ ಗಂಭೀ ಆರೋಪಗಳ ನಡುವೆ ಇದೀಗ ತನಿಖೆಯಲ್ಲೇ ಪ್ರಕರಣ ಉಲ್ಟಾ ಮಾಡುವ ಪ್ರಯತ್ನ ನಡೆಯುತ್ತಿದೆ ಎಂದು ಜೆಡಿಎಸ್ ಆರೋಪಿಸಿದೆ. ಜೆಡಿಎಸ್ ವಕ್ತಾರ ದೇವರಾಜ್ ಮಹತ್ವದ ಸುದ್ದಿಗೋಷ್ಠಿ ನಡೆಸಿ ತನಿಖೆ ದಿಕ್ಕು ಹೇಗೆ ಬದಲಾಗುತ್ತಿದೆ ಅನ್ನೋದು ವಿವರಿಸಿದ್ದಾರೆ. ವ್ಯವಸ್ಥಿತವಾಗಿ ಸ್ಟಿಂಗ್ ಪ್ರಕರಣವನ್ನು ಜೆಡಿಎಸ್ ತಲೆಗೆ ಕಟ್ಟುವ ಪ್ರಯತ್ನ ನಡೆಯುತ್ತಿದೆ ಎಂದಿದ್ದಾರೆ.

ಪೆನ್‌ಡ್ರೈವ್‌ನಲ್ಲಿ ಏನಿದೆ

ಸ್ಟಿಂಗ್ ಆಪರೇಷನ್ ಪ್ರಕರಣವನ್ನು ಜೆಡಿಎಸ್‌ ತಲೆಗೆ ಕಟ್ಟಲು ಸಿಸಿಬಿ ಹಾಗೂ ಗೃಹ ಇಲಾಖೆ ವ್ಯವಸ್ಥಿತವಾಗಿ ಪ್ಲಾನ್ ಮಾಡುತ್ತಿದೆ. ಇದಕ್ಕೆ ಬೇಕಾದ ಎಲ್ಲಾ ತಯಾರಿ ಈಗಾಗಲೇ ನಡೆಸಿದೆ ಎಂದು ದೇವರಾಜ್ ಹೇಳಿದ್ದಾರೆ. ಜೆಡಿಎಸ್‌ ಸೋಶಿಯಲ್ ಮೀಡಿಯಾದ ಮೋಹನ್ ಗೌಡ & ಚಂದನ್ ಅಬ್ ಸ್ಕಾಂಡ್ ಆಗಿದಾರೆ ಎಂದು ಸರ್ಕಾರ, ಸಂಬಂಧ ಪಟ್ಟ ಇಲಾಖೆಗಳು ಸುಳ್ಳು ಹೇಳುತ್ತಿದೆ. ಮೋಹನ್ ಗೌಡ ವಿಚಾರದಲ್ಲಿ ಅವರ ಮನೆ ಸರ್ಚ್ ಮಾಡುತ್ತಾರೆ. ಅವರ ಮನೆಯಲ್ಲಿ ಮಡದಿ, ತಾಯಿ‌ಬಳಿ ಗದ್ದಲ ಮಾಡಿದಾರೆ.. ಅವರ ಕೈ ಹಿಡಿದು ಎಳೆದಾಡಿದಾರೆ. ಪೂರ್ವ ನಿಗದಿತ ನೋಟಿಸ್ ತಗೊಂಡ್ ಹೋಗಿರುತ್ತಾರೆ... ಅಲ್ಲೇ ಡೇಟ್ ಬರೆದು ಆಗಲೇ ‌ಬೆಳಗ್ಗೆ ಬರುವಂತೆ ಹೇಳಿದ್ದಾರೆ. ಮೋಹನ್ ಗೌಡ ಮನೆಯಿಂದ ತಗೊಂಡ್ ಹೋದ ಪೆನ್ ಡ್ರೈವ್‌ನಲ್ಲಿ ಏನಿದೆ ಅಂತಾ ಯಾಕೆ ಈವರೆಗೆ ಹೇಳ್ತಿಲ್ಲ. ಸುಳ್ಳು ಯಾಕೆ ಹೇಳ್ತಿದಾರೆ? ಎಂದು ಜೆಡಿಎಸ್ ವಕ್ತಾರ ದೇವರಾಜ್ ಪ್ರಶ್ನಿಸಿದ್ದಾರೆ.

ಇಲ್ಲದ ಮನೆಗೆ ಹೋಗಿ ನೋಟಿಸ್, ಬಳಿಕ ಪರಾರಿ ಎಂದು ಸುಳ್ಳು

ಮೋಹನ್ ಗೌಡ ಅವರ ಪರ ವಕೀಲರು ಎಸಿಪಿ‌ ಭೇಟಿಗೆ ಹೋದಾಗ ಆ ಎಸಿಪಿ ಭೇಟಿಗೆ ಅವಕಾಶ ಕೊಟ್ಟಿಲ್ಲ. ಎಲ್ಲವನ್ನು ಮುಚ್ಚಿಡುತ್ತಿದ್ದಾರೆ. ಮೋಹನ್ ಗೌಡ ಅವರ ಪತ್ನಿ ‌ಖಾಸಗಿ ವಿಚಾರದಲ್ಲಿ ಗೌಪ್ಯತೆ ಕಾಪಾಡಿಲ್ಲ. ಚಂದನ್ ಅವರ ಮನೆಯನ್ನು ಸರ್ಚ್ ಮಾಡುತ್ಕಾರೆ, ಮನೆ ವಿಳಾಸ ಮನೆ ನಂ. 27 ಕೆಜಿ ಹಳ್ಳಿ. ಈ‌ಮನೆ ಸರ್ಚ್ ಮಾಡ್ತಾರೆ, ಆದರೆ ಈವರೆಗೂ ಚಂದನ್ ಅವರಿಗೆ ನೋಟಿಸ್ ಕೊಟ್ಟಿಲ್ಲ. ಚಂದನ್ ಯಾವ ಮನೆಯಲ್ಲಿ ಇರೋದಿಲ್ವೋ ಆ ಮನೆಗೆ ನೋಟಿಸ್‌ ಕೊಡ್ತಾರೆ. ಡಾಲರ್ಸ್ ಕಾಲೋನಿಯ ನಿವಾಸಕ್ಕೆ ನೋಟಿಸ್ ಕೊಡ್ತಾರೆ‌.. ಆದರೆ ‌ಚಂದನ್ ಆ ಮನೆಯಲ್ಲಿ ಇಲ್ಲ. ಉದ್ದೇಶ ಪೂರ್ವಕವಾಗಿ ನೋಟಿಸ್ ಕೊಟ್ಟಿದೇವೆ..‌ಚಂದನ್ ತಪ್ಪಿಸಿಕೊಂಡು ಹೋಗಿದಾರೆ ಅಂಥಾ ಗೃಹ ಸಚಿವರು ಹೇಳುತ್ತಿದ್ದಾರೆ.

ಗೃಹ ಸಚಿವರು ಕ್ಷಮೆ ಕೇಳಬೇಕು

ಮೊದಲು ಗೃಹ ಸಚಿವರು ಚಂದನ್‌ಅವರ ಕ್ಷಮೆ ಕೇಳಬೇಕು. ಮಾಧ್ಯಮಗಳಲ್ಲಿ ಚಂದನ್ ತಪ್ಪಿಸಿಕೊಂಡಿದಾನೆ ಅಂತಾ ವ್ಯವಸ್ಥಿತವಾಗಿ ಸುಳ್ಳು ಸುದ್ದಿ ಭಿತ್ತರಿಸ್ತಿದಾರೆ. ಸ್ಟಿಂಗ್ ಮಾಡಿದ ಪ್ರಮುಖ ವ್ಯಕ್ತಿಗೆ ರಾಜಾತಿಥ್ಯ...‌ಏನೂ ಮಾಡದವರಿಗೆ‌ ನೋಟಿಸ್. ಈ ಮೂಲಕ ಇಡೀ ಸ್ಟಿಂಗ್ ಪ್ರಕರಣವನ್ನು ಜೆಡಿಎಸ್ ತಲೆಗೆ ಕಟ್ಟಲು ಸರ್ಕಾರದ ಗೃಹ ಇಲಾಖೆ ಪ್ಲಾನ್ ಮಾಡಿದೆ ಎಂದು ದೇವರಾಜ್ ಗಂಭೀರ ಆರೋಪ ಮಾಡಿದ್ದಾರೆ.

ಸಿಎಂ ಮೊಬೈಲ್ ಸೀಜ್ ಮಾಡಿ

ಸರ್ಕಾರ ಸ್ಟಿಂಗ್ ಆಪರೇಶನ್ ಮಾಡಿದವರ ಮುಂದೆ ಶರಣಾಗಿದೆ. ಮಾಜಿ ಸಿಎಂ ಅವರ ಮರ್ಯಾದೆ ಉಳಿಸಿ. ತಾಕತ್ ಧಮ್ ಇದ್ರೆ ಮುಖ್ಯಮಂತ್ರಿ ಅವರ ಮೊಬೈಲ್ ಸೀಜ್ ಮಾಡಿ ಎಫ್ ಎಸ್ ಎಲ್ ಗೆ ಕಳಿಸಿ. ಈ ತಾಖತ್ತು ನಿಮಗೆ ಇದೆಯಾ ಎಂದು ಜೆಡಿಎಸ್ ವಕ್ತಾರ ದೇವರಾಜ್ ಪ್ರಶ್ನಿಸಿದ್ದಾರೆ.

PREV
Read more Articles on
click me!

Recommended Stories

₹3 ಲಕ್ಷ ಕೊಟ್ಟು ಹಳೆಯ ಕಾರು ಖರೀದಿಸಿದ ಬೆಂಗಳೂರಿನ ಟೆಕ್ಕಿ; ಮನೆಯಲ್ಲಿ ಹೊಸ ಸ್ಕೋಡಾ ಇದ್ದರೂ ಈ ನಿರ್ಧಾರವೇಕೆ?
ವಾಹನಗಳ ಕಿರಿಕಿರಿ ನಡುವೆ ಜನಸ್ನೇಹಿ ಬೆಂಗಳೂರು: ಫ್ಲೈಓವರ್‌ ಕೆಳಗಿನ ಖಾಲಿ ಜಾಗ ಈಗ 'ಪಾಸ್‌ ಪಾರ್ಕ್'!