ಪೆರಿಫೆರಲ್‌ ರಿಂಗ್‌ ರೋಡ್‌-2 ಯೋಜನೆ: ಮಾಚೋಹಳ್ಳಿ ಭೂಸ್ವಾಧೀನಕ್ಕೆ ಬಿಗ್ ಟ್ವಿಸ್ಟ್!

Published : Oct 17, 2026, 07:51 AM IST
Peripheral Ring Road-II Project

ಸಾರಾಂಶ

ಬೆಂಗಳೂರಿನ ಪಿಆರ್‌ಆರ್‌-2 ಯೋಜನೆ 2006ರ ಪ್ರಾಥಮಿಕ ಅಧಿಸೂಚನೆ ಬಳಿಕ ತಡವಾಗಿ ಹೊರಡಿಸಿದ ಅಂತಿಮ ಅಧಿಸೂಚನೆಯನ್ನು ಪ್ರಶ್ನಿಸಿ ಸ್ಥಳೀಯರು ಅರ್ಜಿ ಸಲ್ಲಿಸಿದ್ದರು. ಮುಂದಿನ ವಿಚಾರಣೆವರೆಗೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ನ್ಯಾಯಾಲಯ ಬಿಡಿಎಗೆ ಸೂಚಿಸಿದೆ.

ಬೆಂಗಳೂರು: ಬೆಂಗಳೂರಿನ ಸಂಚಾರ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ರೂಪಿಸಲಾಗಿರುವ ಪೆರಿಫೆರಲ್‌ ರಿಂಗ್‌ ರೋಡ್‌-2 (ಪಿಆರ್‌ಆರ್‌-2) ಯೋಜನೆಗಾಗಿ ಮಾಚೋಹಳ್ಳಿ ಗ್ರಾಮದ ಭೂಸ್ವಾಧೀನ ಪ್ರಕ್ರಿಯೆಗೆ ಹೈಕೋರ್ಟ್‌ ಶುಕ್ರವಾರ ತಾತ್ಕಾಲಿಕ ತಡೆ ನೀಡಿದೆ.

ಅಂತಿಮ ಭೂಸ್ವಾಧೀನ ಅಧಿಸೂಚನೆಯನ್ನು ಪ್ರಶ್ನಿಸಿ ಮಾಚೋಹಳ್ಳಿಯ ವಿನೋದ್‌ ಕುಮಾರ್‌ ಯಾದವ್‌ ಸೇರಿದಂತೆ ಹಲವು ಸ್ಥಳೀಯರು ಸಲ್ಲಿಸಿದ್ದ ಅರ್ಜಿ, ನ್ಯಾಯಮೂರ್ತಿ ಆರ್‌.ನಟರಾಜ್‌ ಅವರ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು.

ಮಧ್ಯಂತರ ಆದೇಶ

ಅರ್ಜಿಯ ಮುಂದಿನ ವಿಚಾರಣೆವರೆಗೆ ಸಂಬಂಧಪಟ್ಟ ಭೂಮಿಗಳ ಕುರಿತು ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸೂಚಿಸಿ ನ್ಯಾಯಪೀಠ ಮಧ್ಯಂತರ ಆದೇಶ ನೀಡಿದೆ. ಜೊತೆಗೆ, ಅರ್ಜಿ ಸಂಬಂಧ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಹಾಗೂ ವಿಶೇಷ ಭೂಸ್ವಾಧೀನಾಧಿಕಾರಿಗೆ ನೋಟಿಸ್‌ ಜಾರಿಗೊಳಿಸಿದೆ.

ಹಲವು ವರ್ಷಗಳ ಹಿಂದೆ ಪ್ರಾಥಮಿಕ ಅಧಿಸೂಚನೆ

ಅರ್ಜಿದಾರರ ಪರ ವಕೀಲರು, 2006ರಲ್ಲಿ ಪಿಆರ್‌ಆರ್‌-2ಯೋಜನೆಗೆ ಸಂಬಂಧಿಸಿದಂತೆ ಅರ್ಜಿದಾರರ ಜಮೀನುಗಳ ಸಂಬಂಧ ಹಲವು ವರ್ಷಗಳ ಹಿಂದೆ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿತ್ತು. ಆದರೆ, ಯೋಜನೆಗೆ ಸಂಬಂಧಿಸಿದ ಅಂತಿಮ ಅಧಿಸೂಚನೆಯನ್ನು ಹಲವು ವರ್ಷಗಳ ಬಳಿಕ ಹೊರಡಿಸಲಾಗಿದೆ.

ಇಷ್ಟು ದೀರ್ಘ ಅವಧಿಯ ನಂತರವೂ ಭೂಸ್ವಾಧೀನ ಪ್ರಕ್ರಿಯೆ ಮುಂದುವರಿಸುವುದು ಕಾನೂನುಬದ್ಧವಾಗಿದೆಯೇ ಎಂಬುದರ ಕುರಿತು ನ್ಯಾಯಾಲಯ ಪರಿಶೀಲನೆ ನಡೆಸಬೇಕಿದೆ. ಹಾಗಾಗಿ, ಅಂತಿಮ ಅಧಿಸೂಚನೆಯ ಆಧಾರದ ಮೇಲೆ ತಮ್ಮ ಜಮೀನುಗಳಲ್ಲಿ ಯಾವುದೇ ಬದಲಾವಣೆ, ಸ್ವಾಧೀನ ಅಥವಾ ನಿರ್ಮಾಣ ಕಾರ್ಯ ಕೈಗೊಳ್ಳದಂತೆ ಮಧ್ಯಂತರ ರಕ್ಷಣೆ ನೀಡಬೇಕು ಎಂದು ಮನವಿ ಮಾಡಿದರು.

PREV
Read more Articles on
click me!

Recommended Stories

KHB Surya Nagar 4th Phase: ಸೂರ್ಯನಗರದಲ್ಲಿ ಸೈಟ್ ಸಿಕ್ಕರೂ ನಿವೇಶನ ಖರೀದಿಸಲು ಹಿಂದೇಟು ಹಾಕ್ತಿರೋದ್ಯಾಕೆ ಅದೃಷ್ಟಶಾಲಿಗಳು?
ಅಕ್ರಮ ಬಾಂಗ್ಲಾ ವಲಸಿಗರ ಮಾಹಿತಿ ಕೊಟ್ಟಿದ್ದ ವೈದ್ಯನ ಮೇಲಿನ ಎಫ್‌ಐಆರ್ ರದ್ದುಗೊಳಿಸಿದ ಹೈಕೋರ್ಟ್!