ಡಿಸೆಂಬರ್‌ನಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಚುನಾವಣೆ, ಮತ್ತೆ ಅವಧಿ ವಿಸ್ತರಿಸಿದ ಸುಪ್ರೀಂ ಕೋರ್ಟ್

Published : Jul 17, 2026, 01:18 PM IST
Greater Bengaluru Authority elections

ಸಾರಾಂಶ

ಜಿಬಿಎ ಚುನಾವಣೆ ನ ನಡೆಸಲು ನೀಡಿದ್ದ ಗಡುವು ಹತ್ತಿರ ಬರುತ್ತಿದ್ದಂತೆ ವಿಸ್ತರಣೆಗಾಗಿ ರಾಜ್ಯ ಸರ್ಕಾರ ನೀಡಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ಪುರಸ್ಕರಿಸಿದೆ. ಇದೀಗ ಡಿಸೆಂಬರ್ ವರೆಗೆ ಅವಧಿ ನೀಡಿದೆ.

ದೆಹಲಿ (ಜು.17) ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಹಗ್ಗ ಜಗ್ಗಾಟದಲ್ಲಿ ರಾಜ್ಯ ಸರ್ಕಾರ ನಿಟ್ಟುಸಿರು ಬಿಟ್ಟಿದೆ. ಆಗಸ್ಟ್ 31ರೊಳಗೆ ಜಿಬಿಎ ಚುನಾವಣೆ ನಡೆಸುವಂತೆ ಸುಪ್ರೀಂ ಕೋರ್ಟ್ ಈ ಮೊದಲು ಆದೇಶ ನೀಡಿತ್ತು. ಆದರೆ ಸದ್ಯ ಎಸ್ಐಆರ್ ಪ್ರಕ್ರಿಯೆ ಮುಂದಿಟ್ಟು ಚುನಾವಣೆಗೆ ಮತ್ತಷ್ಟು ಕಾಲವಕಾಶ ನೀಡಬೇಕು ಎಂದು ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿತ್ತು. ಈ ಮನವಿಯಂತೆ ಇದೀಗ ಸುಪ್ರೀಂ ಕೋರ್ಟ್ ಡಿಸೆಂಬರ್ 31, 2026ರೊಳಗೆ ಗ್ರೇಟರ್ ಬೆಂಗಳೂರು ಚುನಾವಣೆ ನಡೆಸುವಂತೆ ಆದೇಶ ನೀಡಿದೆ.

ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮತ್ತೆ ಮುಂದೂಡಿಕೆ

ಬೆಂಗಳೂರು ಮಹಾನಗರ ಪಾಲಿಕೆ ಇದೀಗ ಬದಲಾದ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಕಾಣದೆ ಮುಂದೆ ಸಾಗುತ್ತಿದೆ. ಆಯಾ ಸರ್ಕಾರಗಳು ಚುನಾವಣೆ ನಡೆಸಲು ಮೀನಾಮಿಷ ಎಣಿಸುತ್ತಿದೆ. ಸದ್ಯ ಎಸ್‌ಐಆರ್ ಪ್ರಕ್ರಿಯೆ ಮುಂದಿಟ್ಟು ಸಮಯಾವಕಾಶ ಪಡೆದುಕೊಳ್ಳುವಲ್ಲಿ ಬೆಂಗಳೂರು ಪ್ರಾಧಿಕಾರ ಯಶಸ್ವಿಯಾಗಿದೆ.

2020ರಲ್ಲಿ ಬೆಂಗಳೂರು ಸ್ಥಳೀಯ ಆಡಳಿತ ಮಂಡಳಿ (ಬಿಬಿಎಂಪಿ) ಆಡಳಿತ ಅವಧಿ ಮುಕ್ತಾಯಗೊಂಡಿದೆ. 2020ರಲ್ಲೇ ಚುನಾವಣೆ ನಡೆದು ಕಾರ್ಪೋರೇಟರ್‌ಗಳ ಆಯ್ಕೆ ನಡೆಯಬೇಕಿತ್ತು. ಆದರೆ ಕೋವಿಡ್ ಕಾರಣದಿಂದ ಚುನಾವಣೆ ಮುಂದೂಡಲಾಗಿತ್ತು. ಬಳಿಕ ಪ್ರತಿ ಬಾರಿ ಒಂದೊಂದು ಕಾರಣದಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಚುನಾವಣೆ ಮುಂದೂಡೂತ್ತಲೇ ಸಾಗಿದೆ. ಬಿಜೆಪಿ ಅಧಿಕಾರದಲ್ಲಿದ್ದ ಕಾಲದಲ್ಲಿ ಬಿಬಿಎಂಪಿ ಚುನಾವಣೆ ನಡೆಸುವಂತೆ ಕಾಂಗ್ರೆಸ್ ನಾಯಕರು ಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಕಾಂಗ್ರೆಸ್ ಆಡಳಿತಕ್ಕೆ ಬಂದಿದೆ. ಆಡಳಿತ ವಿಕೇಂದ್ರೀಕರಣ ಉದ್ದೇಶದಿಂದ ಬಿಬಿಎಂಪಿ ಯನ್ನು ಜಿಬಿಎ ರೂಪಕ್ಕೆ ತರಲಾಗಿದೆ. ಆದರೆ ಚುನಾವಣೆಯನ್ನು ಮತ್ತೆ ಮಂದೂಡಲಾಗಿದೆ.

ಸೆಪ್ಟೆಂಬರ್ 10, 2020ಕ್ಕೆ ಬೆಂಗಳೂರು ಮಹಾನಗರ ಪಾಲಿಕೆಯ (BBMP) ಚುನಾಯಿತ ಸಮಿತಿಯ ಅವಧಿ ಮುಕ್ತಾಯಗೊಂಡಿತು. ಬಳಿಕ ಕಾರ್ಪೋರೇಟರ್ ಆಡಳಿತ ಅಂತ್ಯಗೊಂಡು ಸರ್ಕಾರಿ ಆಡಳಿತಾಧಿಕಾರಿಗಳ ಆಡಳಿತ ಆರಂಭಗೊಂಡಿದೆ. ಸದ್ಯ ಚುನಾವಣೆ ನಡೆಯದ ಕಾರಣ ಆಡಳಿತಾಧಿಕಾರಿಗಳೇ ಆಡಳಿತ ನಡೆಸುತ್ತಿದ್ದಾರೆ.

PREV
Read more Articles on
click me!

Recommended Stories

Sa Re Ga Ma Pa Kannada Audition 2026: ಬೆಂಗಳೂರಿನಲ್ಲಿ ಸರೆಗಮಪ ಶೋ ಆಡಿಷನ್‌ ಯಾವಾಗ?
ಬೆಂಗಳೂರಿನಲ್ಲಿ ಹೊಸ ಕ್ರಾಂತಿಗೆ ಮುಂದಾದ Yulu, ರಾಜಧಾನಿಯಲ್ಲಿ ಫ್ಲೀಟ್ ಹೆಚ್ಚಿಸಲು ಮುಂದಾದ ಎಲೆಕ್ಟ್ರಿಕ್ ಬೈಕ್!