ಆಯುಧ ಪೂಜೆಗೆ ಕಾವೇರಿ ನೀರು ಬಳಕೆ ಮಾಡಿದರೆ ಹುಷಾರ್, ಬರೋಬ್ಬರಿ 5 ಸಾವಿರ ರೂ ದಂಡ ಎಚ್ಚರಿಕೆ

Published : Oct 19, 2026, 12:01 PM IST
Bengaluru Water Crisis BWSSB

ಸಾರಾಂಶ

ಆಯುಧ ಪೂಜೆ ಸಂಭ್ರಮದಲ್ಲಿರುವ ಜನರಿಗೆ ಸರ್ಕಾರ ಶಾಕ್ ನೀಡಿದೆ. ಆಯುಧಪೂಜೆ ದಿನ ಕಾವೇರಿ ನೀರು ಬಳಕೆ ಮಾಡುವಂತಿಲ್ಲ. ವಾಹನ ತೊಳೆಯಲು ಸೇರಿದಂತೆ ಇತರ ಕಾರಣಗಳಿಗೆ ನೀರು ಪೋಲು ಮಾಡಿದರೆ 5000 ರೂ ದಂಡದ ಎಚ್ಚರಿಕೆ ನೀಡಲಾಗಿದೆ.

ಬೆಂಗಳೂರು (ಅ.19) ಆಯುಧ ಪೂಜೆಗೆ ತಯಾರಿಗಳು ನಡೆಯುತ್ತಿದೆ. ಎಲ್ಲೆಡೆ ಸಂಭ್ರಮ ಮನೆ ಮಾಡಿದೆ. ಆದರೆ ಆಯುಧ ಪೂಜೆಗೂ ಮೊದಲೇ ಸರ್ಕಾರ ಖಡಕ್ ಎಚ್ಚರಿಕೆ ನೀಡಿದೆ. ಆಯುಧ ಪೂಜೆ ದಿನ ವಾಹನ ತೊಳೆಯಲು ಸೇರಿದಂತೆ ಕಾವೇರಿ ನೀರು ಪೋಲು ಮಾಡಿದರೆ ದುಬಾರಿ ದಂಡ ಕಟ್ಟಬೇಕಾಗುತ್ತದೆ. ಆಯುಧ ಪೂಜೆ ದಿನ ಮಾರ್ಷಲ್ ಸೇರಿದಂತೆ ಅಧಿಕಾರಿಗಳು ಗಸ್ತು ತಿರುಗಲಿದ್ದಾರೆ. ವಾಹನ ತೊಳೆಯುವುದು ಸೇರಿದಂತೆ ನೀರು ಪೋಲು ಮಾಡುವುದು ಪತ್ತೆಯಾದರೇ ಸ್ಪಾಟ್‌ನಲ್ಲೇ ದಂಡ ವಿಧಿಸಲಾಗುತ್ತದೆ ಎಂದು ಜಲಮಂಡಳಿ ಅಧ್ಯಕ್ಷೆ ಮಂಜುಳಾ ಎಚ್ಚರಿಸಿದ್ದಾರೆ.

ಕಾವೇರಿ ನೀರಲ್ಲಿ ಬೈಕ್, ಕಾರು ತೊಳೆಯುವಂತಿಲ್ಲ

ಆಯುಧ ಪೂಜೆ ಮನೆ, ಅಂಗಡಿ, ಕಾರ್ಖಾನೆ, ವಾಹನಗಳು, ಕೃಷಿ ಸಲಕರಣೆ ಸೇರಿದಂತೆ ಆಯುಧಗಳ ಪೂಜೆ ಮಾಡಲಾಗುತ್ತದೆ. ಹೀಗಾಗಿ ಮೊದಲು ಸ್ವಚ್ಚಗೊಳಿಸಿ ಬಳಿಕ ಪೂಜೆ ಮಾಡಲಾಗುತ್ತದೆ. ಈಗಾಗಲೇ ರಾಜ್ಯದಲ್ಲಿ ನೀರಿನ ಸಮಸ್ಯೆ ತೀವ್ರಗೊಂಡಿರುವ ಕಾರಣ ಆಯುಧ ಪೂಜೆ ದಿನ ಕಾವೇರಿ ನೀರಿನಲ್ಲಿ ಬೈಕ್, ಕಾರು ಸೇರಿದಂತೆ ವಾಹನ ತೊಳೆಯುವಂತಿಲ್ಲ ಎಂದು ಸರ್ಕಾರ ಖಡಕ್ ಆದೇಶ ನೀಡಿದೆ.

ದಸರಾ ಹಬ್ಬದ ಸಂಭ್ರಮದಲ್ಲಿ ಯಾವುದೇ ಕಾರಣಕ್ಕೂ ಕಾವೇರಿ ನೀರು ಪೋಲು ಮಾಡುವಂತಿಲ್ಲ. ಅನಗತ್ಯವಾಗಿ ಕುಡಿಯುವ ನೀರನ್ನು ಪೋಲು ಮಾಡಿದರೆ ದುಬಾರಿ ದಂಡ ವಿಧಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ. ಕಾವೇರಿ ನೀರು ಕೇವಲ ಕುಡಿಯಲು ಮಾತ್ರ ಬಳಕೆ ಮಾಡಬೇಕು. ಕಾವೇರಿ ನೀರು ಸೇವನೆಗೆ ಬಿಟ್ಟು ವಾಹನ ತೊಳೆಯಲು, ಕಟ್ಟಡ ನಿರ್ಮಾಣ ಸೇರಿದಂತೆ ಇತರ ಅವಶ್ಯಕತೆಗಳಿಗೆ ಬಳಕೆ ಮಾಡಿದರೂ ದಂಡ ಬೀಳಲಿದೆ.

ದುಬಾರಿ ದಂಡದ ಶಾಕ್

ಕಾವೇರಿ ಕುಡಿಯುವ ನೀರು ಪೋಲು ಮಾಡುವರ ವಿರುದ್ದ ಕಾಯ್ದೆ 1964ರ ಕಲಂ 109 ರಂತೆ 5000 ರೂಪಾಯಿ ದಂಡ ವಿಧಿಸುವ ಅವಕಾಶವಿದೆ. ಉಲ್ಲಂಘನೆ ಮತ್ತೆ ಮರುಕಳಿಸಿದ್ರೆ ದಂಡ ಮೊತ್ತ 5000 ರೂಪಾಯಿ ದೊತೆ ಜೊತೆಗೆ ಹೆಚ್ಚುವರಿಯಾಗಿ 500 ರೂಪಾಯಿ ದಂಡ ವಿಧಿಸಲಾಗುತ್ತದೆ.

ಆಯುಧ ಪೂಜೆ ಹಬ್ಬದ ವೇಳೆ ಹೆಚ್ಚಿನ ಜನ ಕಾವೇರಿ ನೀರಿನಿಂದ ವಾಹನಗಳ ಸ್ವಚ್ಚತೆ ಸಾಧ್ಯತೆ ಇದೆ. ಹೀಗಾಗಿ ಈ ಬಾರಿ ಹಬ್ಬದ ವೇಳೆ ಕಾವೇರಿ ನೀರಲ್ಲಿ ವಾಹನ ವಾಶ್ ಮಾಡಿದರೆ ದಂಡ ಎಚ್ಚರಿಕೆ ನೀಡಲಾಗಿದೆ. ಎಚ್ಚರಿಕೆ ಬಳಿಕವೂ ಕಾವೇರಿ ನೀರಲ್ಲಿ ವಾಹನ ವಾಶ್ ಮಾಡೋರು ಸಿಕ್ಕಿಬಿದ್ರೆ ದಂಡ ವಿಧಿಸಲಾಗುತ್ತದೆ. ಬೆಂಗಳೂರಿನಲ್ಲಿ ಬಹುತೇಕರು ವಾಹನ ತೊಳೆಯಲು ಕಾವೇರಿ ನೀರನ್ನೇ ಬಳಕೆ ಮಾಡುತ್ತಾರೆ ಅನ್ನೋ ಆರೋಪವಿದೆ. ಹೀಗಾಗಿ ಕಾವೇರಿ ನೀರು ಅನ್ಯಬಳಕೆಗೆ ಬಳಸುವರಿಗೆ ಜಲಮಂಡಳಿ ದಂಡ ಹಾಕಲಿದೆ ಎಂದು ಜಲಮಂಡಳಿ ಅಧ್ಯಕ್ಷೆ ಮಂಜುಳಾ ಮಾಹಿತಿ ನೀಡಿದ್ದಾರೆ.

PREV
Read more Articles on
click me!

Recommended Stories

ಬೆಂಗಳೂರಿನ ರಸ್ತೆಯ ಚಿತ್ರಣವೇ ಬದಲು! ಕೆನಡಾ ವ್ಯಕ್ತಿಯ ಪ್ರಯತ್ನಕ್ಕೆ ಕಿರಣ್ ಮಜುಂದಾರ್ ಶಾ ಮೆಚ್ಚುಗೆ
ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಶಾಕ್ , ಆಯುಧ ಪೂಜೆ ಹಿನ್ನೆಲೆ ಹೂವು, ಹಣ್ಣುಗಳ ಬೆಲೆ ಗಗನಕ್ಕೆ!