ದೀಪಾವಳಿಗೆ ತರಕಾರಿ, ಹೂವು, ಹಣ್ಣಿನ ಬೆಲೆ ಇಳಿ​ಕೆ

By Web DeskFirst Published Oct 26, 2019, 9:14 AM IST
Highlights

ದೀಪಾವಳಿ ಹಬ್ಬದ ಸಂಭ್ರಮ ಎಲ್ಲೆಡೆ ಮನೆ ಮಾಡಿದ್ದು ಇದೇ ವೇಳೆ ತರಕಾರಿ ಹಾಗೂ ಹೂವು ಹಣ್ಣುಗಳ ಬೆಲೆ ಇಳಿಕೆಯಾಗಿದೆ. 

ಬೆಂಗಳೂರು [ಅ.26]:  ಸತತವಾಗಿ ಸುರಿಯುತ್ತಿರುವ ಮಳೆಗೆ ತರಕಾರಿ, ಹೂವು ಹಾಗೂ ಹಣ್ಣಿನ ಬೆಲೆ ಇಳಿಕೆಯಾಗಿದೆ. ದಸರಾ ಹಬ್ಬಕ್ಕೆ ಹೋಲಿ​ಸಿ​ದರೆ ದೀಪಾ​ವಳಿ ಹಬ್ಬಕ್ಕೆ ಹೂವು​ಗಳ ಬೆಲೆ ಶೇ.40ರಷ್ಟುಕಡಿ​ಮೆ​ಯಾ​ಗಿದೆ.

ಮಳೆಯಿಂದಾಗಿ ಸೇವಂತಿ ಹೂವಿನ ದರದಲ್ಲಿ ಭಾರಿ ಕುಸಿತ ಕಂಡಿದೆ. ಏ​ಲಕ್ಕಿ ಬಾ​ಳೆ, ತ​ರ​ಕಾರಿ ಮ​ತ್ತಿ​ತರ ಪ​ದಾ​ರ್ಥ​ಗಳೂ ಕಡಿಮೆ ಬೆಲೆಗೆ ದೊರಕುತ್ತಿವೆ.

ದೀಪಾವಳಿ ಹಬ್ಬಕ್ಕೂ ಮುನ್ನ ಬರುವ ವರಮಹಾಲಕ್ಷ್ಮೇ, ಗೌರಿ-ಗಣೇಶ ಹಾಗೂ ವಿಜಯದಶಮಿಗೆ ಹೂವಿನ ಬೆಲೆ ದುಬಾರಿಯಾಗಿತ್ತು. ದೀಪಾವಳಿಯಲ್ಲಿ ಹೂವಿನ ಬಳಕೆ ಕಡಿಮೆ ಇರುವುರಿಂದ ಬೆಲೆ ಇಳಿಕೆಯಾಗಿದೆ. ಸಾಮಾನ್ಯವಾಗಿ ದೀಪಾವಳಿ ಹಬ್ಬಕ್ಕೆ ಕಾಕಡ, ಸೇವಂತಿಗೆ ಹೂವು ತಮಿಳುನಾಡಿಗೆ ಸರಬರಾಜಾಗುತ್ತಿತ್ತು. ಈ ಬಾರಿ ಮಳೆಯಿಂದಾಗಿ ಅಲ್ಲಿಗೆ ಹೋಗುತ್ತಿಲ್ಲ. ಜತೆಗೆ ರಾಜ್ಯದ ಹುಬ್ಬಳ್ಳಿ, ಧಾರವಾಡ ಭಾಗಗಳಿಗೂ ಹೂವು ಕಳಿಸಲಾಗಿಲ್ಲ. ಮಳೆಗೆ ಹೂವು ಗಿಡದಲ್ಲೇ ಕೊಳೆಯುತ್ತದೆ. ಹೀಗಾಗಿ ಖರೀದಿ ಪ್ರಮಾಣ ಕಡಿಮೆಯಾಗಿದೆ. ಒಟ್ಟಾರೆ ಹೂವಿನ ದರಗಳಲ್ಲಿ ಶೇ.40ರಷ್ಟುಇಳಿಕೆಯಾಗಿದೆ ಎಂದು ಸಗಟು ಮಾರಾಟಗಾರ ಕೆ.ಮಂಜುನಾಥ್‌ ಹೇಳಿದರು.

ಹ​ಬ್ಬದ ಸಾ​ಮ​ಗ್ರಿ​ಗ​ಳ ಖ​ರೀ​ದಿ:

ಮಾರುಕಟ್ಟೆಯಲ್ಲಿ ಎಲ್ಲೆಡೆ ಪೂಜಾ ಸಾಮಗ್ರಿಗಳದ್ದೇ ಕಾರುಬಾರು. ಕೆಲ ವ್ಯಾಪಾರಿಗಳು ಕೂಡ ಹಬ್ಬಕ್ಕೆಂದು ರಸ್ತೆಗಳ ಬದಿಯಲ್ಲಿ, ಗಾಡಿಗಳಲ್ಲಿ ಪೂಜಾ ಸಾಮಗ್ರಿಗಳನ್ನು ಮಾರುತ್ತಿದ್ದಾರೆ. ಹೂವು, ಹಣ್ಣು, ಬಾಳೆಕಂದು, ಮಾವಿನ ತಳಿರು, ತೆಂಗಿ​ನ​ಕಾ​ಯಿ​ಗಳ ಮಾರಾಟ ಒಂದೆ​ಡೆಯಾದರೆ, ವೀಳ್ಯ​ದೆಲೆ, ಬಟ್ಟಲಡಿಕೆ, ಅರಿ​ಶಿನ ಕೊಂಬು, ನೋಮು​ದಾ​ರ​, ಅರಿ​ಶಿ​ಣ- ಕುಂಕುಮ ಇತ್ಯಾ​ದಿ​ಗಳ ಮಾರಾಟ ಭರ​ದಿಂದ ನಡೆ​ದಿ​ದೆ. ಇನ್ನೊಂದು ಬದಿಯಲ್ಲಿ ಹಣ್ಣು-ಹೂವು ಮಾರಾಟಗಾರರ ಕೂಗು, ಮಾರುಕಟ್ಟೆಯಲ್ಲಿ ಗ್ರಾಹಕರು ತಮ್ಮಗೆ ಇಷ್ಟವಾದ ವಸ್ತುಗಳ ಖರೀದಿಯ ಧಾವಂತದಲ್ಲಿ ಕೈಗೆಟುಕುವ ದರಕ್ಕಾಗಿ ಅಂಗಡಿಗಳತ್ತ ಒಮ್ಮೆ ನೋಡಿ ವಿಚಾರಿಸಿಕೊಂಡು ಮುನ್ನೆಡೆಯುತ್ತಿದ್ದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ದೀಪಾವಳಿ ಹಬ್ಬ ಮೂರು ದಿನಗಳ ಆಚರಣೆಯಾದರೂ ಕೆಲವರು ಅಮಾವಾಸ್ಯೆ ದಿನ, ಮತ್ತೆ ಕೆಲವರು ಬಲಿಪಾಡ್ಯಮಿ ದಿನ ವಿಶೇಷವಾಗಿ ಹಬ್ಬ ಆಚರಿಸುತ್ತಾರೆ. ಹೀಗಾಗಿ ನಗರದಾದ್ಯಂತ ಬಾಳೆಕಂಬ, ಬೂದುಕುಂಬಳಕಾಯಿ ಮಾರಾಟವೂ ಭರದಿಂದ ಸಾಗಿದೆ. ಬೂದುಕುಂಬಳ ಕೆ.ಜಿ. .20, ಬಾಳೆಕಂದು ಚಿಕ್ಕದು 30-50 ರು., ದೊಡ್ಡ ಬಾಳೆ ಕಂದು ಜೋಡಿಗೆ 50ರಿಂದ 200 ರು., ನಿಂಬೆ ಹಣ್ಣು ಒಂದಕ್ಕೆ 2ರಿಂದ 5 ರು., ಸೇಬು ಕೆ.ಜಿ. 80ರಿಂದ 120 ರು., ಪಪ್ಪಾಯ ಕೆ.ಜಿ. 26 ರು., ಕಲ್ಲಂಗಡಿಹಣ್ಣು ಕೆ.ಜಿ. 13 ರು., ಕಿತ್ತಳೆ 32-50 ರು., ಅನಾನಸ್‌ ಕೆ.ಜಿ. 35 ರು., ಏಲಕ್ಕಿ ಬಾಳೆಹಣ್ಣು ಕೆ.ಜಿ. 50 ರು., ಪಚ್ಚಬಾಳೆ ಕೆ.ಜಿ. 28 ರು., ಸಪೋಟ 40ರಿಂದ 60 ರು. ರವರೆಗೆ ಖರೀದಿಯಾಗುತ್ತಿದೆ.

ಕೆ.ಆರ್‌. ಮಾರುಕಟ್ಟೆ

ಹೂವು (ಸಗಟು ದರ ಕೆ.ಜಿ.ಗಳಲ್ಲಿ)

ಸೇ​ವಂತಿಗೆ 10-50 ರು.

ಕನಕಾಂಬರ 1,200-1,600 ರು.

ಮಲ್ಲಿಗೆ 250-500 ರು.

ಕಾಕಡ 400-500 ರು.

ಸು​ಗಂಧ 60-80 ರು.

ಗು​ಲಾಬಿ 50-100 ರು.

ಸುಗಂಧರಾಜ 60-100 ರು.

ಬಟನ್‌ ರೋಸ್‌ 60-80 ರು.

ಮೊಳ್ಳೆ ಹೂವು 300 ರು.

ತರಕಾರಿ ಸಗಟು ದರ (ಕೆ.ಜಿ.ಗಳಲ್ಲಿ)

ಈರುಳ್ಳಿ 32-40 ರು.

ಟೊಮೆಟೋ 22-24 ರು.

ಬದನೆಕಾಯಿ 20 ರು.

ಮೆಣಸಿನಕಾಯಿ 28 ರು.

ಬೀನ್ಸ್‌ (ಸಾಧಾರಣ) 24 ರು.

ಗ್ರೀನ್‌ ಬೀನ್ಸ್‌ 34 ರು.

ಆಲೂಗಡ್ಡೆ 14 ರು.

ಬೀಟ್‌ರೂಟ್‌ 28 ರು.

ಹಾಗಲಕಾಯಿ 24 ರು.

ಕ್ಯಾರೆಟ್‌ 46 ರು.

ಬಟಾಣೆ 80 ರು.

ಎಲೆಕೋಸು 18 ರು.

ಹೂಕೋಸು1ಕ್ಕೆ 24 ರು.

ಸೊಪ್ಪುಗಳು ದರ

ಕೊತ್ತಂಬರಿ 14-13 ರು.

ಪುದೀನ ಕಟ್ಟು  10 ರು.

ಪಾಲಕ್‌ಸೊಪ್ಪು ಕಟ್ಟು  10-12 ರು.

ದಂಟಿನ ಸೊಪ್ಪು ಕಟ್ಟು 8 ರು.

ಸಬ್ಬಕ್ಕಿ ಸೊಪ್ಪು 10-18 ರು.

ಮೆಂತ್ಯೆ ಸೊಪ್ಪು ಕಟ್ಟು 30 ರು.

ಈರುಳ್ಳಿ ಹೂವು ಕಟ್ಟು 10 ರು.

click me!