Bengaluru: ಮಾರೇನಹಳ್ಳಿ ಜಂಕ್ಷನ್‌ನಲ್ಲಾಗ್ತಿರೋ ಟ್ರಾಫಿಕ್ ನಿಯಂತ್ರಣಕ್ಕೆ ಮೆಗಾ ಪ್ಲಾನ್?

Published : Oct 01, 2026, 07:41 AM IST
Underpass

ಸಾರಾಂಶ

ಮಾರೇನಹಳ್ಳಿ ಜಂಕ್ಷನ್ ಬಳಿ ಅಂಡರ್‌ಪಾಸ್ ನಿರ್ಮಾಣ ಮತ್ತು ಮಡಿವಾಳ ಕೆರೆ ಅಭಿವೃದ್ಧಿ ಕುರಿತು ಚರ್ಚಿಸಲಾಗಿದೆ. ಅಲ್ಲದೆ, ಪಾಲಿಕೆ ವ್ಯಾಪ್ತಿಯ 300ಕ್ಕೂ ಅಧಿಕ ಪ್ರಮುಖ ಸ್ವತ್ತುಗಳನ್ನು ಜಿಪಿಎಸ್ ಆಧಾರಿತ ಜಿಯೋ-ಲೊಕೇಶನ್ ಮೂಲಕ ಮ್ಯಾಪಿಂಗ್ ಮಾಡಲು ನಿರ್ಧರಿಸಲಾಗಿದೆ.

ಬೆಂಗಳೂರು: ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯ ಮಾರೇನಹಳ್ಳಿ ಜಂಕ್ಷನ್ ನಲ್ಲಿ ಅಂಡರ್ ಪಾಸ್ ನಿರ್ಮಾಣ, ಮಡಿವಾಳ ಕೆರೆ ಅಭಿವೃದ್ಧಿ, ಜಂಕ್ಷನ್ ಗಳ ಅಭಿವೃದ್ಧಿ, ಪಾಲಿಕೆ ಹಾಗೂ ಸಾರ್ವಜನಿಕ ಆಸ್ತಿಗಳ ನಿರ್ವಹಣೆ ಕುರಿತಂತೆ ಚರ್ಚಿಸಲು ಪಾಲಿಕೆ ತಾಂತ್ರಿಕ ಸಲಹಾ ಸಮಿತಿ ಸಭೆ ಬುಧವಾರ ನಡೆಯಿತು.

ಮಾರೇನಹಳ್ಳಿ ಜಂಕ್ಷನ್ 11ನೇ ಮುಖ್ಯ ರಸ್ತೆಯಲ್ಲಿ ಹೆಚ್ಚುತ್ತಿರುವ ವಾಹನ ಸಂಚಾರ ದಟ್ಟಣೆ

ಬಿಬಿಎಂಪಿ ನಿವೃತ್ತ ಮುಖ್ಯ ಎಂಜಿನಿಯರ್ ಎಸ್. ಸೋಮಶೇಖರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾರೇನಹಳ್ಳಿ ಜಂಕ್ಷನ್ 11ನೇ ಮುಖ್ಯ ರಸ್ತೆಯಲ್ಲಿ ಹೆಚ್ಚುತ್ತಿರುವ ವಾಹನ ಸಂಚಾರ ದಟ್ಟಣೆ ಸುಗಮಗೊಳಿಸುವ ನಿಟ್ಟಿನಲ್ಲಿ ಮಾರೇನಹಳ್ಳಿ ಜಂಕ್ಷನ್ ನಲ್ಲಿ ಅಂಡರ್ ಪಾಸ್ ನಿರ್ಮಾಣದಿಂದ ಸಿಲ್ಕ್ ಬೋರ್ಡ್ ನಿಂದ ಡಬಲ್ ಡೆಕ್ಕರ್ ಮೂಲಕ ಬರುವ ವಾಹನಗಳಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಸಮಿತಿ ಅಭಿಪ್ರಾಯಪಟ್ಟಿತು.

ಜಿಪಿಎಸ್ ಆಧಾರಿತ ಜಿಯೋ-ಲೊಕೇಶನ್ ಮೂಲಕ ಮ್ಯಾಪಿಂಗ್

ಪಾಲಿಕೆ ವ್ಯಾಪ್ತಿಯ ಶಾಲೆಗಳು, ಆಸ್ಪತ್ರೆಗಳು, ಕ್ರೀಡಾಂಗಣಗಳು, ವಾಣಿಜ್ಯ ಮಳಿಗೆಗಳು, ಸಮುದಾಯ ಭವನಗಳು ಸೇರಿದಂತೆ 300ಕ್ಕೂ ಅಧಿಕ ಪ್ರಮುಖ ಸ್ಥಳಗಳು ಮತ್ತು ಸ್ವತ್ತುಗಳನ್ನು ಜಿಪಿಎಸ್ ಆಧಾರಿತ ಜಿಯೋ-ಲೊಕೇಶನ್ ಮೂಲಕ ಮ್ಯಾಪಿಂಗ್ ಮಾಡಲಾಗುತ್ತಿದೆ. ಪ್ರತಿಯೊಂದು ಆಸ್ತಿಯನ್ನು ವಾರ್ಡ್, ವಿಭಾಗ ಹಾಗೂ ಜೋನ್ ಮಟ್ಟದಲ್ಲಿ ಡಿಜಿಟಲ್ ನಕ್ಷೆಯೊಂದಿಗೆ ದಾಖಲಿಸಲಾಗುತ್ತಿದ್ದು, ಆಯಾ ಆಸ್ತಿಯ ವಿಸ್ತೀರ್ಣ, ಕಟ್ಟಡದ ಅಳತೆ, ಗಡಿ ಗುರುತುಗಳು ಮತ್ತು ಛಾಯಾಚಿತ್ರಗಳು ತಂತ್ರಾಂಶದಲ್ಲಿ ಲಭ್ಯವಾಗಲಿವೆ ಎಂದು ಸಮಿತಿ ತಿಳಿಸಿದೆ.

ಈ ವೇಳೆ ತಾಂತ್ರಿಕ ಸಲಹಾ ಸಮಿತಿಯ ಸದ್ಯಸರಾದ ಆರ್‌ವಿ ಶಿಕ್ಷಣ ಸಂಸ್ಥೆಯ ಪ್ರೊ.ಆಂಜನೇಯಪ್ಪ, ದಯಾನಂದ ಸಾಗ‌ರ್ ಶಿಕ್ಷಣ ಸಂಸ್ಥೆಯ ಡಾ. ಶಿವಕುಮಾರ್ ಜಿ., ಮುಖ್ಯ ಎಂಜಿನಿಯರ್ ಬಸವರಾಜ್ ಕಬಾಡೆ, ಮಾಲತಿ ಉಪಸ್ಥಿತರಿದ್ದರು.

PREV
Read more Articles on
click me!

Recommended Stories

Goa Mangaluru Vande Bharat Express ಬೆಂಗಳೂರು ಯಶವಂತಪುರಕ್ಕೂ ವಿಸ್ತರಣೆ! ಸಮಯ, ನಿಲುಗಡೆ ಸಂಪೂರ್ಣ ವಿವರ ಇಲ್ಲಿದೆ
ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ಉರ್ದು ಹಬ್ಬ ಆಯೋಜನೆ; ಕರ್ನಾಟಕ ಸರ್ಕಾರ ಘೋಷಣೆ