ಬೆಂಗಳೂರು ರ‍್ಯಾಪಿಡ್ ಚಾಲಕನ ಕಿರುಕುಳ ವಿಡಿಯೋ ಶೇರ್ ಮಾಡಿ ನೋವು ತೋಡಿಕೊಂಡ ಯುವತಿ

Published : Nov 08, 2025, 03:22 PM IST
Rapido Ride

ಸಾರಾಂಶ

ಬೆಂಗಳೂರು ರ‍್ಯಾಪಿಡ್ ಚಾಲಕನ ಕಿರುಕುಳ ವಿಡಿಯೋ ಶೇರ್ ಮಾಡಿ ನೋವು ತೋಡಿಕೊಂಡ ಯುವತಿ, ಬೈಕ್ ಟ್ಯಾಕ್ಸಿ ಬುಕ್ ಮಾಡಿದ ಯುವತಿ ಇಡೀ ಪ್ರಯಾಣದಲ್ಲಿ ಕಿರುಕುಳ ಅನುಭವಿಸಿದ್ದಾಳೆ. ಚಾಲಕನ ಅಸಭ್ಯ ವರ್ತನೆ, ಅಣ್ಣಾ ಏನು ಮಾಡುತ್ತಿದ್ದಿಯಾ ಎಂದು ಕೇಳಿದರೂ ತನ್ನ ಕಿರುಕುಳ ಮುಂದುವರಿಸಿದ್ದಾನೆ.

ಬೆಂಗಳೂರು (ನ.08) ಆ್ಯಪ್ ಆಧಾರಿತ ಟ್ಯಾಕ್ಸಿ, ಕ್ಯಾಬ್‌ ಪ್ರಯಾಣದಲ್ಲಿನ ಅಹಿತಕರ ಘಟನೆಗಳ ಕುರಿತು ಭಾರಿ ಚರ್ಚೆಯಾಗಿದೆ. ಸುರಕ್ಷತೆ ಕುರಿತು ಹಲವು ಕ್ರಮಗಳನ್ನು ಕೈಗೊಂಡಿದ್ದರೂ, ಕೆಲ ಘಟನೆಗಳು ವರದಿಯಾಗುತ್ತಲೇ ಇದೆ. ಈ ಪೈಕಿ ಬೈಕ್ ಟ್ಯಾಕ್ಸಿ ಕುರಿತು ಸಾಕಷ್ಟ ಆರೋಪಿಗಳು, ಅಹಿತಕರ ಘಟನೆಗಳಿವೆ. ಇದೀಗ ಬೆಂಗಳೂರಿನ ಯುವತಿಯೊಬ್ಬಳು ತನಗಾದ ಕಿರುಕುಳದ ವಿಡಿಯೋವನ್ನು ಹಂಚಿಕೊಂಡಿದ್ದಾಳೆ. ರ‍್ಯಾಪಿಡೊ ಚಾಲಕನ ಪ್ರಯಾಣದ ವೇಳೆ ಯುವತಿಯನ್ನು ಬಳಸಿಕೊಳ್ಳಲು ಯತ್ನಿಸಿದ ವಿಡಿಯೋ ಹಂಚಿಕೊಂಡು ನೋವು ತೋಡಿಕೊಂಡಿದ್ದಾಳೆ. ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಜೊತೆ ಘಟನೆ ಹಂಚಿಕೊಂಡು ತನಗಾದ ಕಹಿ ಘಟೆಯನ್ನು ವಿವರಿಸಿದ್ದಾಳೆ.

ತೊಡೆ ಮೇಲೆ ಕೈಯಿಟ್ಟು ಬೈಕ್ ರೈಡ್

ಯುವತಿ ಪೋಸ್ಟ್ ಪ್ರಕಾರ, ಬೆಂಗಳೂರಿನ ಈ ಯುವತಿ ಚರ್ಚ್ ಸ್ಟ್ರೀಟ್ ಬಳಿ ಇರು ಪಿಜಿಯಲ್ಲಿ ವಾಸವಿದ್ದಾಳೆ. ಕೆಲಸದ ನಿಮಿತ್ತ ತೆರಳಲು ರ‍್ಯಾಪಿಡೊ ಬೈಕ್ ಟ್ಯಾಕ್ಸಿ ಬುಕ್ ಮಾಡಿದ್ದಾಳೆ. ಕೆಲ ಹೊತ್ತಲ್ಲಿ ರ‍್ಯಾಪಿಡೊ ಟ್ಯಾಕ್ಸಿ ಆಗಮಿಸಿದೆ. ಬೈಕ್ ಹತ್ತಿದ ಯುವತಿಗೆ ಆರಂಭದಿಂದ ಡ್ರಾಪ್ ಲೋಕೇಶನ್ ವರಗೆ ರ‍್ಯಾಪಿಡೊ ಚಾಲಕ ಕಿರುಕುಳ ನೀಡಿದ್ದಾನೆ. ಬೈಕ್ ರೈಡಿಂಗ್ ಮಾಡುತ್ತಾ ಒಂದು ಕೈಯನ್ನು ಚಾಲಕ, ಯುವತಿಯ ತೊಡೆ ಮೇಲೆ ಇಟ್ಟಿದ್ದಾನೆ. ಚಾಲಕನ ಉದ್ದೇಶ ಗಮನಿಸಿದ ಯುವತಿ, ಅಣ್ಣಾ ಏನು ಮಾಡುತ್ತಿದ್ದೀಯಾ, ಹೀಗೆ ಮಾಡಬೇಡಿ ಎಂದು ಮನವಿ ಮಾಡಿದ್ದಾಳೆ.

ಕೇಳಿದರೂ ಕೇಳಿಸಿಕೊಳ್ಳದೇ ಕಿರುಕುಳ

ಯುವತಿ ಮನವಿ ಮಾಡಿದರೂ ರ‍್ಯಾಪಿಡೊ ಚಾಲಕ ಮಾತ್ರ ಕೇಳಿಲ್ಲ ಎಂದು ಯುವತಿ ಹೇಳಿಕೊಂಡಿದ್ದಾಳೆ. ಚಾಲಕನ ವಿರುದ್ಧ ಆಕ್ರೋಶ ಹೊರಹಾಕಲು, ಟ್ಯಾಕ್ಸಿ ನಿಲ್ಲಿಸಿ ಇಳಿಯಲು ಯುವತಿಗೆ ಭಯವಾಗಿತ್ತು. ಆಕ್ರೋಶ ಹೊರಹಾಕಿದರೆ ತನ್ನ ಮೇಲೆ ದಾಳಿ ನಡೆಯುವ ಸಾಧ್ಯತೆ ಇದೆ. ಅಥಾವ ಕಿರಕುಳ ಹೆಚ್ಚಿಸಿದರೆ ಅನ್ನೋ ಭಯವೂ ಯುವತಿಗೆ ಕಾಡಿತ್ತು ಎಂದಿದ್ದಾಳೆ. ಅಳುತ್ತಲೇ, ಅಂಜುತಲ್ಲೇ ಬೇರೆ ದಾರಿಯಿಲ್ಲದೆ ಯುವತಿ ಬೈಕ್ ಟ್ಯಾಕ್ಸಿಯಲ್ಲಿ ಪ್ರಯಾಣ ಮುಂದುವರಿಸಿದ್ದಾಳೆ.

ಚಾಲಕನ ಕಿರುಕುಳ ರೆಕಾರ್ಡ್ ಮಾಡಿದ ಯುವತಿ

ರ‍್ಯಾಪಿಡೊ ಚಾಲಕನಿಗೆ ಹೇಳಿದರೂ ಆತ ತನ್ನ ಕಿರುಕುಳ ಮುಂದುವರಿಸಿದ್ದಾರೆ. ಹೀಗಾಗಿ ಯುವತಿ ತನಗಾಗುತ್ತಿರುವ ಮಾನಸಿಕ ಹಿಂಸೆ, ನೋವನ್ನು ನುಂಗಿಕೊಂಡು ಕಣ್ಣೀರಿಟ್ಟಿದ್ದಾಳೆ. ಇದೇ ವೇಳೆ ತನ್ನ ಮೊಬೈಲ್ ಮೂಲಕ ರ‍್ಯಾಪಿಡೊ ಚಾಲಕನ ವರ್ತನೆ ರೆಕಾರ್ಡ್ ಮಾಡಿದ್ದಾಳೆ. ಆತನ ಯಾವ ರೀತಿ ಕಿರುಕುಳ ನೀಡುತ್ತಿದ್ದಾಳೆ ಅನ್ನೋ ವಿಡಿಯೋವನ್ನು ಯುವತಿ ಹಂಚಿಕೊಂಡಿದ್ದಾಳೆ.

ಕೈ ತೋರಿಸಿ ನೋಡಿಕೊಳ್ಳುತ್ತೇನೆ ಎಂದ ರ‍್ಯಾಪಿಡೊ ಚಾಲಕ

ಯುವಕಿ ಡ್ರಾಪ್ ಲೋಕೇಶನ್ ಬಂದಾಗ ಕಣ್ಣೀರಿಡುತ್ತಾ ಯುವತಿ ಇಳಿದು ಪಾವತಿ ಮಾಡಿದ್ದಳೆ. ಈ ವೇಳೆ ಅಲ್ಲೇ ಇಲ್ಲದ ವ್ಯಕ್ತಿಯೊಬ್ಬರು ಯುವತಿ ಬಳಿ ಏನಾಗಿದೆ ಎಂದು ವಿಚಾರಿಸಿದ್ದಾರೆ. ಈ ವೇಳೆ ಚಾಲಕನ ಕಿರುಕುಳ ಕುರಿತು ವಿವರಿಸಿದ್ದಾಳೆ. ವ್ಯಕ್ತಿ ಚಾಲಕನಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ತಕ್ಷಣವೇ ತಪ್ಪಾಯಿತು ಎಂದು ಹೇಳಿ ರ‍್ಯಾಪಿಡೊ ಚಾಲಕ ಹೊರಟಿದ್ದಾನೆ. ಆದರೆ ಹೊರಡುವಾಗ ಕೈ ತೋರಿಸಿ, ನೋಡಿಕೊಳ್ಳುತ್ತೇನೆ ಎಂದು ಸನ್ನೆ ಮಾಡಿ ಹೊರಟಿದ್ದಾನೆ. ಇದು ತನ್ನನ್ನು ಮತ್ತಷ್ಟು ಭಯಭೀತಳನ್ನಾಗಿ ಮಾಡಿದೆ ಎಂದು ಯುವತಿ ಹೇಳಿಕೊಂಡಿದ್ದಾಳೆ.

 

 

 

PREV
Read more Articles on
click me!

Recommended Stories

ಬೆಂಗಳೂರಿನ ಬಾಡಿಗೆ ಮನೆಯಲ್ಲಿ ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆ
ಬೆಂಗಳೂರು ಅಪಾರ್ಟ್‌ಮೆಂಟ್‌ನ 16 ಕುಟುಂಬಗಳಿಗೆ ರೌಡಿಸಂ ದರ್ಶನ; ಮಾಟ-ಮಂತ್ರ ಮಾಡಿಸಿ ಕಿರುಕುಳ!