ವಿದ್ಯುತ್ ಬಿಲ್ ಪಾವತಿ ಸೇರಿ ಬೆಸ್ಕಾಂ, 5 ಎಸ್ಕಾಂ ಆನ್‌ಲೈನ್ ಸೇವೆ 2 ದಿನ ಬಂದ್

Published : Jul 22, 2025, 09:44 PM IST
BESCOM

ಸಾರಾಂಶ

ವಿದ್ಯುತ್ ಬಿಲ್ ಪಾವತಿ, ಹೆಸರು ಬದಲಾವಣೆ, ಜಕಾತಿ ಸೇರಿದಂತೆ ಯಾವುದೇ ರೀತಿಯ ಬೆಸ್ಕಾಂ ಹಾಗೂ 5 ಎಸ್ಕಾಂಗಳ ಆನ್‌ಲೈನ್ ಸೇವೆಗಳು ಎರಡು ದಿನ ಸಂಪೂರ್ಣ ಸ್ಥಗಿತಗೊಳ್ಳುತ್ತಿದೆ. 

ಬೆಂಗಳೂರು (ಜು. 22) ಬೆಂಗಳೂರು ನಗರ ವ್ಯಾಪ್ತಿಯ ಎಲ್ಲಾ ಉಪ ವಿಭಾಗಗಳು ಸೇರಿದಂತೆ ಬೆಸ್ಕಾಂ ಹಾಗೂ 5 ಎಸ್ಕಾಂನ ಎಲ್ಲಾ ಆನ್‌ಲೈನ್ ಸೇವೆಗಳು 2 ದಿನ ಸಂಪೂರ್ಣ ಬಂದ್ ಆಗುತ್ತಿದೆ. ಬೆಸ್ಕಾಂ, ಎಸ್ಕಾಂಗಳ ಆನ್‌ಲೈನ್ ಮೂಲಕ ವಿದ್ಯುತ್ ಬಿಲ್ ಪಾವತಿ, ಹೆಸರು ಬದಲಾವಣೆ, ಜಕಾತಿ ಬದಲಾವಣೆ, ಹೊಸ ಸಂಪರ್ಕ ಸೇರಿದಂತೆ ಯಾವುದೇ ಆನ್‌ಲೈನ್ ಸೇವೆಗಳು 2 ದಿನ ಲಭ್ಯವಿಲ್ಲ. ಮಾಹಿತಿ ತಂತ್ರಜ್ಞಾನ ವ್ಯವಸ್ಥೆಯ ಉನ್ನತೀಕರಣದ ಹಿನ್ನೆಲೆ ಆನ್‌ಲೈನ್ ಸೇವೆಗಳು ಬಂದ್ ಆಗುತ್ತಿದೆ.

ಯಾವಾಗಿನಿಂದ ಆನ್‌ಲೈನ್ ಸೇವೆ ಬಂದ್?

ಬೆಸ್ಕಾಂ ಹಾಗೂ 5 ಎಸ್ಕಾಂಗಳ ಆನ್‌ಲೈನ್ ಸೇವೆ ಜುಲೈ 25ರ ರಾತ್ರಿ 8.30 ರಿಂದ ಜುಲೈ 27ರ ರಾತ್ರಿ 10 ಗಂಟೆ ವರೆಗೆ ಬಂದ್ ಆಗಲಿದೆ. ಎರಡು ದಿನ ಸಂಪೂರ್ಣ ಬಂದ್ ಆಗಲಿದೆ. ಈ ಕುರಿತು ಬೆಸ್ಕಾಂ ಪ್ರಕಟಣೆಯಲ್ಲಿ ಹೇಳಿದೆ. ಹೀಗಾಗಿ ಸಾರ್ವಜನಿಕರು ಸಹಕರಿಸಬೇಕಾಗಿ ವಿನಂತಿಸಿದೆ.

ಬೆಸ್ಕಾಂ ವ್ಯಾಪ್ತಿಯಲ್ಲಿ ಎಲ್ಲೆಲ್ಲಿ ಆನ್‌ಲೈನ್ ಸೇವೆ ಬಂದ್?

ಬೆಂಗಳೂರು ನಗರ ವ್ಯಾಪ್ತಿಯ ಎಲ್ಲಾ ಉಪ ವಿಭಾಗಗಳು, ಶಿಢ್ಲಘಟ್ಟ, ಚಿಕ್ಕಬಳ್ಳಾಪುರ, ಕೋಲಾರ, ಚಿಂತಾಮಣಿ, ಕನಕಪುರ, ರಾಮನಗರ, ದಾವಣಗೆರೆ-1, ದಾವಣಗೆರೆ-2, ಚಿತ್ರದುರ್ಗ, ತುಮಕೂರು-1, ತುಮಕೂರು-2, ಸಿರಾ, ಚೆನ್ನಪಟ್ಟಣ, ಆನೇಕಲ್‌, ಮುಳುಬಾಗಿಲು, ಬಂಗಾರಪೇಟೆ, ಗೌರಿಬಿದನೂರು, ಹೊಸಕೋಟೆ, ದೊಡ್ಡಬಳ್ಳಾಪುರ, ಕೆ.ಜಿ.ಎಫ್‌, ಚಳ್ಳಕೆರೆ, ಕುಣಿಗಲ್‌ , ಹರಪ್ಪನಹಳ್ಳಿ, ಹರಿಹರ, ಹಿರಿಯೂರು ಮತ್ತು ತಿಪಟೂರು ನಗರ ಉಪ ವಿಭಾಗಗಳ ವ್ಯಾಪ್ತಿಗಳಲ್ಲಿ ಆನ್ ಲೈನ್ ಸೇವೆ ಬಂದ್ ಆಗಲಿದೆ.

ಯೂಸರ್ ಫ್ರೆಂಡ್ಲಿ ಇಂಟರ್‌ಪೇಸ್

ಸದ್ಯ ಸಾರ್ವಜನಿಕರು ಬಳಕೆ ಮಾಡುತ್ತಿರುವ ಆನ್‌ಲೈನ್ ಸೇವೆಗಳನ್ನು ಉನ್ನತೀಕರಣ ಮಾಡಲಾಗುತ್ತಿದೆ. ಈ ಮೂಲಕ ಸಾರ್ವಜನಿಕರ ಬಿಲ್ ಪಾವತಿ, ದೂರು ದುಮ್ಮಾನ, ಹೊಸ ಸಂಪರ್ಕ ಸೇರಿದಂತೆ ಎಲ್ಲಾ ಸೇವೆಗಳು ಅತೀ ಸುಲಭವಾಗಿ ಲಭ್ಯವಾಗುವಂತೆ ಹಾಗೂ ಸರಳ ಪ್ರಕ್ರಿಯೆಗಳನ್ನು ಒಳಗೊಂಡಿರುವಂತೆ ಮಾಡಲಾಗುತ್ತಿದೆ. ಬ್ಯಾಕೆಂಡ್ ಟೀಂ ಈ ಕುರಿತು 2 ದಿನ ಕಾರ್ಯನಿರ್ವಹಸಲಿದೆ. ಹೊಸ ಇಂಟರ್‌ಪೇಸ್ ಜುಲೈ 27ರ ರಾತ್ರಿ 10 ಗಂಟೆ ಬಳಿಕ ಲಭ್ಯವಾಗಲಿದೆ.

 

PREV
Read more Articles on
click me!

Recommended Stories

ಯೋಜನೆಯ ಗುತ್ತಿಗೆ ಅಂತಿಮಗೊಳ್ಳುವ ಮುನ್ನವೇ ಸರ್ವೇ ಕಾರ್ಯ ಆರಂಭಿಸಿದ ಅದಾನಿ ಸಂಸ್ಥೆ
ಬಿಬಿಎಂಪಿಯಲ್ಲಿ 40 ಸಾವಿರ ಕೋಟಿ ಹಗರಣ ಆರೋಪ, 9,700 ಪುಟಗಳ ದಾಖಲೆ ಸಹಿತ ದೂರು ಕೊಟ್ಟ ರಮೇಶ್‌ !