ಬೆಂಗಳೂರು ಬಿಟ್ಟು ವಾರಣಾಸಿಯ ಅಗ್ಗದ CA ನೇಮಿಸಿದ ಉದ್ಯಮಿಗೆ ಕಾದಿತ್ತು ಅಚ್ಚರಿ! ₹4 ಲಕ್ಷ ಉಳಿಸಲು ಹೋಗಿ ಎದುರಾದ ಕಷ್ಟ

Published : Sep 29, 2026, 04:31 PM IST
Dania Faruqui

ಸಾರಾಂಶ

ಬೆಂಗಳೂರಿನ ದುಬಾರಿ ಸಿಎ ಶುಲ್ಕ ಉಳಿಸಲು ಐಐಎಂ ಪದವೀಧರ ಉದ್ಯಮಿಯೊಬ್ಬರು ವಾರಣಾಸಿಯ ಅಗ್ಗದ ಸಿಎ ಸಂಸ್ಥೆಯನ್ನು ನೇಮಿಸಿಕೊಂಡಿದ್ದರು. ಆದರೆ ಇ-ಕಾಮರ್ಸ್ ತೆರಿಗೆ ಬಗ್ಗೆ ಜ್ಞಾನವಿಲ್ಲದ ಆ ಸಿಎ ತಂಡಕ್ಕೆ ಉದ್ಯಮಿಯೇ ತರಬೇತಿ ನೀಡಬೇಕಾದ ವಿಚಿತ್ರ ಪರಿಸ್ಥಿತಿ ಎದುರಾಯಿತು. ಈ ಕುರಿತ ಅವರ ಲಿಂಕ್ಡ್‌ಇನ್ ಪೋಸ್ಟ್ ಇದೀಗ ವೈರಲ್ ಆಗಿದೆ.

ಬೆಂಗಳೂರು: ಹೊಸದಾಗಿ ಉದ್ಯಮ ಪ್ರಾರಂಭಿಸುವಾಗ ಪ್ರತಿಯೊಂದು ರೂಪಾಯಿಯನ್ನೂ ಉಳಿಸುವುದು ಅತ್ಯಂತ ಮುಖ್ಯ. ಆದರೆ, ಕೆಲವೊಮ್ಮೆ ಅಗ್ಗದ ಸೇವೆಗಳನ್ನು ಆಯ್ಕೆ ಮಾಡಿಕೊಳ್ಳುವುದು ಅನುಕೂಲಕ್ಕಿಂತ ಹೆಚ್ಚಿನ ತಲೆನೋವನ್ನೇ ತಂದೊಡ್ಡುತ್ತದೆ ಎಂಬುದಕ್ಕೆ ಐಐಎಂ ಪದವೀಧರ ಉದ್ಯಮಿಯೊಬ್ಬರ ಅನುಭವವೇ ನಿದರ್ಶನ.

ಬೆಂಗಳೂರಿನ ದುಬಾ CA ಸಂಸ್ಥೆಗಳ ಶುಲ್ಕದಿಂದ ಬಚಾವಾಗಲು ವಾರಣಾಸಿ ಮೂಲದ ಸಿಎ ಸಂಸ್ಥೆಯನ್ನು ಮಹಿಳಾ ಉದ್ಯಮಿಯೊಬ್ಬರು ನೇಮಿಸಿಕೊಂರು. ಆದರೆ ಕೊನೆಗೆ ತಮ್ಮ ಇ-ಕಾಮರ್ಸ್ ತೆರಿಗೆ ಸಲ್ಲಿಕೆಗಾಗಿ ಸಿಎ ತಂಡಕ್ಕೇ ತರಬೇತಿ ನೀಡಬೇಕಾದ ಪರಿಸ್ಥಿತಿ ಬಂದ ವಿಚಿತ್ರ ಹಾಗೂ ರೋಚಕ ಘಟನೆಯನ್ನು ಹಂಚಿಕೊಂಡಿದ್ದಾರೆ.

₹4 ಲಕ್ಷ ಉಳಿಸಲು ಹೋಗಿ ಎದುರಾದ ಸಮಸ್ಯೆ

ಐಐಎಂ ಹಳೆಯ ವಿದ್ಯಾರ್ಥಿನಿ ಹಾಗೂ ಉದ್ಯಮಿ ಡೇನಿಯಾ ಫಾರೂಕಿ (Dania Faruqui) ತಮ್ಮ ಲಿಂಕ್ಡ್‌ಇನ್ ಖಾತೆಯಲ್ಲಿ ಈ ಕುರಿತು ವಿಸ್ತೃತವಾಗಿ ಬರೆದುಕೊಂಡಿದ್ದಾರೆ.

ಬೆಂಗಳೂರಿನಲ್ಲಿರುವ ಪ್ರತಿಯೊಂದು ಸಿಎ ಸಂಸ್ಥೆಯೂ ಆರಂಭಿಕ ಹಂತದ ಕಂಪನಿಗೆ ತೆರಿಗೆ ಮತ್ತು ಜಿಎಸ್‌ಟಿ ಸಲ್ಲಿಸಲು ವಾರ್ಷಿಕ ಕನಿಷ್ಠ ₹4 ಲಕ್ಷ ಶುಲ್ಕ ಕೇಳುತ್ತಿತ್ತು. ಮಾರಾಟ ಶೂನ್ಯವಾಗಿದ್ದರೂ ಇಷ್ಟೊಂದು ಹಣ ಪಾವತಿಸುವುದು ಬೂಟ್‌ಸ್ಟ್ರಾಪಿಂಗ್ ಉದ್ಯಮಿಗೆ ಕಷ್ಟಕರ. ಹೀಗಾಗಿ, ವೆಚ್ಚ ಕಡಿತಗೊಳಿಸಲು ನಾನು ವಾರಣಾಸಿ ಮೂಲದ ಸಿಎ ಸಂಸ್ಥೆಯನ್ನು ಆಯ್ಕೆ ಮಾಡಿಕೊಂಡೆ. ಆದರೆ, ಹತ್ತೇ ತಿಂಗಳಲ್ಲಿ ಬೆಂಗಳೂರಿನ ಸಂಸ್ಥೆಗಳು ಏಕೆ ಅಷ್ಟೊಂದು ಹೆಚ್ಚಿನ ಶುಲ್ಕ ವಸೂಲಿ ಮಾಡುತ್ತವೆ ಎಂಬುದು ನನಗೆ ಸ್ಪಷ್ಟವಾಯಿತು ಎಂದು ಡೇನಿಯಾ ವಿವರಿಸಿದ್ದಾರೆ.

ಆ ವಾರಣಾಸಿ ಸಂಸ್ಥೆಗೆ ಅಮೆಜಾನ್‌ನಂತಹ ಪ್ರಮುಖ ಇ-ಕಾಮರ್ಸ್ ಮಾರುಕಟ್ಟೆಗಳ ಮಾರಾಟದ ಮೇಲಿನ ತೆರಿಗೆ ಸಲ್ಲಿಕೆ ಹಾಗೂ ವರದಿಗಳನ್ನು ಪಡೆಯುವ ಬಗ್ಗೆ ಯಾವುದೇ ತಾಂತ್ರಿಕ ಜ್ಞಾನವಿರಲಿಲ್ಲ.

ಸಿಎ ಸಂಸ್ಥೆಗೆ ಉದ್ಯಮಿಯೇ ನೀಡಿದರು ತರಬೇತಿ!

ವಾರಣಾಸಿಯ ಸಿಎ ತಂಡಕ್ಕೆ ಇ-ಕಾಮರ್ಸ್ ಕ್ಷೇತ್ರದಲ್ಲಿ ಅನುಭವವಿಲ್ಲದ ಕಾರಣ, ಉದ್ಯಮಿ ಫಾರೂಕಿ ಅವರೇ ಅಖಾಡಕ್ಕೆ ಇಳಿಯಬೇಕಾಯ್ತ. "ಕಳೆದ ಒಂದು ವರ್ಷದಲ್ಲಿ ಅಮೆಜಾನ್ ಸೆಲ್ಲರ್ ಸೆಂಟ್ರಲ್‌ನಿಂದ ತೆರಿಗೆ ಸಂಬಂಧಿತ ದಾಖಲೆಗಳನ್ನು ಹೇಗೆ ಡೌನ್‌ಲೋಡ್ ಮಾಡಬೇಕು ಎಂಬುದನ್ನು ನಾನೇ ಕಂಠಪಾಠ ಮಾಡಿಕೊಂಡೆ. ನನ್ನ ಸಿಎ ಸಂಸ್ಥೆಗೆ ಮಾರ್ಗದರ್ಶನ ನೀಡುವುದಷ್ಟೇ ಅಲ್ಲದೆ, ಡೈರೆಕ್ಟ್-ಟು-ಕನ್ಸ್ಯೂಮರ್ (D2C) ರಂಗದ ಇತರ ಸಂಸ್ಥಾಪಕರ ಸಂದೇಹಗಳನ್ನು ಪರಿಹರಿಸುವಷ್ಟರ ಮಟ್ಟಿಗೆ ನಾನು ಈ ವಿಷಯದಲ್ಲಿ ಪರಿಣತಿ ಪಡೆದುಕೊಂಡೆ."

'5 ಜಿಎಸ್‌ಟಿ ಲಾಗಿನ್' ಬಾಂಬ್ ಮತ್ತು ಸಿಎ ಆಘಾತ!

ಕಥೆ ಇಲ್ಲಿಗೇ ಮುಗಿಯಲಿಲ್ಲ. ತಮ್ಮ ಉದ್ಯಮದ ವ್ಯಾಪ್ತಿಗೆ ಅನುಗುಣವಾಗಿ 5 ವಿಭಿನ್ನ ರಾಜ್ಯಗಳ ಜಿಎಸ್‌ಟಿ ರಿಟರ್ನ್ಸ್ ಸಲ್ಲಿಸಬೇಕು ಎಂದು ಹೇಳಿದಾಗ ವಾರಣಾಸಿಯ ಸಿಎ ತಂಡ ತೀವ್ರ ಆಘಾತಕ್ಕೊಳಗಾಯಿತು.

"ನನ್ನ ಸಿಎ ಸಂಪೂರ್ಣವಾಗಿ ದಿಗಿಲುಗೊಂಡರು! 'ನಾವು ನಮ್ಮ ಸೇವಾ ಶುಲ್ಕವನ್ನು ಹೆಚ್ಚಿಸಬೇಕಾಗುತ್ತದೆ' ಎಂದು ಅವರು ಹೇಳಿದರು. ಅದಕ್ಕೆ ನಾನು, 'ಖಂಡಿತ ಹೆಚ್ಚಿಸಿ, ಆದರೆ ನಿಮ್ಮ ತಂಡಕ್ಕೆ ನಾನು ನೀಡಿದ ತರಬೇತಿಯ ಶುಲ್ಕವನ್ನು ಅದರಲ್ಲಿ ಕಳೆದು ಬಾಕಿ ನೀಡಿ' ಎಂದು ತಮಾಷೆಯಾಗಿ ಹೇಳಿದೆ. ಕೊನೆಗೆ ಇಬ್ಬರೂ ಅದನ್ನು ನಕ್ಕು ಹಗುರಗೊಳಿಸಿದೆವು. ಉದ್ಯಮ ಕಟ್ಟುವ ಹಾದಿ ಎಂದಿಗೂ ಮೃದುವಾದದ್ದಲ್ಲಬಎಂದು ಫಾರೂಕಿ ಪೋಸ್ಟ್ ಮುಕ್ತಾಯಗೊಳಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆ

ಡೇನಿಯಾ ಫಾರೂಕಿ ಅವರ ಈ ಲಿಂಕ್ಡ್‌ಇನ್ ಪೋಸ್ಟ್ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಉದ್ಯಮಿಗಳು ಹಾಗೂ ಸಾರ್ವಜನಿಕರಿಂದ ವೈವಿಧ್ಯಮಯ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.

ನೆಟ್ಟಿಗರೊಬ್ಬರು: ನಮ್ಮ ಕೆಲಸವನ್ನು ಸರಳಗೊಳಿಸಲು ಜನರನ್ನು ನೇಮಿಸಿಕೊಳ್ಳುತ್ತೇವೆ. ಆದರೆ, ನಾವೇ ಅವರಿಗೆ ಕೆಲಸ ಕಲಿಸಬೇಕಾದಾಗ ನಾವೇ ಅವರ ಅಡಿಯಲ್ಲಿ ಕೆಲಸ ಮಾಡುತ್ತಿದ್ದೇವೆಯೇನೋ ಎನಿಸುತ್ತದೆ ಎಂದು ಕಮೆಂಟ್ ಮಾಡಿದ್ದಾರೆ.

ಮತ್ತೊಬ್ಬ ಬಳಕೆದಾರ: "ಬೆಂಗಳೂರಿಗಿಂತ ಚೆನ್ನೈನಲ್ಲಿ ತಾಂತ್ರಿಕವಾಗಿ ಸಮರ್ಥ ಹಾಗೂ ಅಗ್ಗದ ದರದ ಸಿಎ ಸಂಸ್ಥೆಗಳು ಸಿಗುತ್ತವೆ, ಅಲ್ಲಿ ಪ್ರಯತ್ನಿಸಿ" ಎಂದು ಸಲಹೆ ನೀಡಿದ್ದಾರೆ.

ಮೂರನೆಯವರ ಅಭಿಪ್ರಾಯ: ಬೂಟ್‌ಸ್ಟ್ರಾಪಿಂಗ್ ಪ್ರತಿಯೊಂದು ರೂಪಾಯಿಯ ಮೌಲ್ಯವನ್ನು ಬೇಗನೇ ಕಲಿಸಿಕೊಡುತ್ತದೆ. ಒಂದು ದಿನ ಉನ್ನತ ಮಟ್ಟದ ಕ್ಲೈಂಟ್‌ಗಳ ಜೊತೆ ಸಭೆ ನಡೆಸುವ ಉದ್ಯಮಿ, ಮರುದಿನ ನೆಲಮಟ್ಟದಲ್ಲಿ ನಿಂತು ಸಣ್ಣ ಸಮಸ್ಯೆಗಳನ್ನು ಪರಿಹರಿಸಬೇಕಾಗುತ್ತದೆ. ಒಂದೇ ಸಮಯದಲ್ಲಿ ಅನೇಕ ಜವಾಬ್ದಾರಿಗಳನ್ನು ನಿರ್ವಹಿಸುವುದು ಉದ್ಯಮಶೀಲತೆಯ ನಿಜವಾದ ಸವಾಲು ಎಂದು ಬರೆದುಕೊಂಡಿದ್ದಾರೆ.

PREV
Read more Articles on
click me!

Recommended Stories

ಪ್ರಚಾರವಿಲ್ಲ, ಪ್ರತಿಫಲದ ನಿರೀಕ್ಷೆಯಿಲ್ಲ… 10 ವರ್ಷಗಳಿಂದ 250 ಮಂದಿಗೆ ಅನ್ನ ನೀಡುತ್ತಿರುವ ಬೆಂಗಳೂರಿನ ಅನ್ನದಾತ
ಕರ್ನಾಟಕದಲ್ಲಿ ಕಿಡ್ನಿ, ಮೂತ್ರಕೋಶ ಕಾಯಿಲೆ ಸಾವು 3 ಪಟ್ಟು ಹೆಚ್ಚಳ: 10 ವರ್ಷಗಳ ಎಂಸಿಸಿಡಿ ವರದಿಯಲ್ಲಿ ಆತಂಕಕಾರಿ ಸತ್ಯ ಬಹಿರಂಗ!