ರಜೆಯಲ್ಲಿ ರ‍್ಯಾಪಿಡೋ ಓಡಿಸಿದ BBA ವಿದ್ಯಾರ್ಥಿ.. 3 ತಿಂಗಳ ಸಂಪಾದನೆ ಎಷ್ಟು ಗೊತ್ತಾ? ಇಲ್ಲೊಂದು ಪಾಠ ಇದೆ!

Published : Aug 19, 2026, 04:51 PM IST
Zomato Delivery Boy

ಸಾರಾಂಶ

ಯಾರು ಎಷ್ಟು ದುಡಿಯುತ್ತಾರೋ ಗೊತ್ತಿಲ್ಲ. ಬೆಂಗಳೂರಲ್ಲಿ ಡೆಲಿವರಿ ಬಾಯ್ಸ್ ಮಾತ್ರ ಸಖತ್ ದುಡ್ಡು ಮಾಡ್ತಾರೆ ಅನ್ನೋರಿಗೇನೂ ಕಮ್ಮಿ ಇಲ್ಲ. ಅಂತವರು ಓದಲೇಬೇಕಾದ ಸ್ಟೋರಿ ಇದು.

ಬೆಂಗಳೂರು: ಕಾಲೇಜು ರಜೆಯ ಮೋಜು-ಮಸ್ತಿಯನ್ನು ಬದಿಗಿಟ್ಟು ಬೆಂಗಳೂರಿನ ರಸ್ತೆಗಿಳಿದ ಬಿಬಿಎ ವಿದ್ಯಾರ್ಥಿಯೊಬ್ಬ ಡೆಲಿವರಿ ಬಾಯ್ಸ್ ಮತ್ತು ರೈಡರ್‌ಗಳ ಬದುಕಿನ ನೈಜ ಚಿತ್ರಣವನ್ನು ಸಮಾಜದ ಮುಂದಿಟ್ಟಿದ್ದಾನೆ. ಮೂರು ತಿಂಗಳ ಕಾಲ ರ‍್ಯಾಪಿಡೋ ಮತ್ತು ಫುಡ್ ಡೆಲಿವರಿ ಕೆಲಸ ಮಾಡಿದ ಈ ಯುವಕ ತಾನು ಗಳಿಸಿದ ಹಣಕ್ಕಿಂತ ಹೆಚ್ಚಾಗಿ ಆ ಕೆಲಸದ ಹಿಂದಿರುವ ನೋವು ಮತ್ತು ಅನಿಶ್ಚಿತತೆಯನ್ನು ಬಿಚ್ಚಿಟ್ಟಿದ್ದಾನೆ.

ಅಂಕಿ-ಅಂಶ ಮತ್ತು ಕಠಿಣ ಶ್ರಮ

ಈ ಬಿಬಿಎ ವಿದ್ಯಾರ್ಥಿ ಹಂಚಿಕೊಂಡಿರುವ ಮಾಹಿತಿಯ ಪ್ರಕಾರ.. ಆತ ಮೇ ತಿಂಗಳಲ್ಲಿ 5,650 ರೂ., ಜೂನ್‌ನಲ್ಲಿ 16,660 ರೂ. ಹಾಗೂ ಜುಲೈನಲ್ಲಿ 14,222 ರೂ. ಗಳಿಸಿದ್ದಾನೆ. ದಿನವೊಂದಕ್ಕೆ ಸುಮಾರು 1,200 ರೂಪಾಯಿ ಸಂಪಾದನೆ ಮಾಡುವುದು ಮೇಲ್ನೋಟಕ್ಕೆ ಆಕರ್ಷಕವಾಗಿ ಕಾಣಬಹುದು. ಈ 1,200 ರೂಪಾಯಿಯಲ್ಲಿ ಪೆಟ್ರೋಲ್ ಖರ್ಚು, ಬೈಕ್ ಸವಕಳಿ (Maintenance) ಮತ್ತು ಕೆಲಸದ ಅವಧಿಯ ಊಟದ ಖರ್ಚನ್ನು ಕಳೆಯಬೇಕು. ಇದೆಲ್ಲಾ ಕಳೆದ ನಂತರ ರೈಡರ್ ಕೈಗೆ ಸಿಗುವ ಲಾಭ ಅತ್ಯಲ್ಪ.

ಕಾಯುವಿಕೆ ಅತಿ ದೊಡ್ಡ ಶಾಪ

ಒಂದು ಫುಡ್ ಆರ್ಡರ್ ಬಂದರೆ ನಾವು ಹೋಟೆಲ್ ಮುಂದೆ 20 ರಿಂದ 25 ನಿಮಿಷ ಕಾಯಬೇಕು. ಟೈಮ್ ಅಂದ್ರೆ ನಮಗೆ ಮನಿ ಎಂದು ಆ ಯುವಕ ಹೇಳಿದ್ದಾನೆ. ಈ ಕಾಯುವ ಸಮಯಕ್ಕೆ ಯಾವುದೇ ಪ್ಲಾಟ್‌ಫಾರ್ಮ್ ಹಣ ನೀಡುವುದಿಲ್ಲ. ಹೋಟೆಲ್ ಮಾಲೀಕರ ಉದಾಸೀನತೆ ಮತ್ತು ಗ್ರಾಹಕರ ತರಾತುರಿಯ ನಡುವೆ ಡೆಲಿವರಿ ಬಾಯ್ಸ್ ನಲುಗುತ್ತಿದ್ದಾರೆ. ಟ್ರಾಫಿಕ್ ಕಿರಿಕಿರಿ, ಬಿಸಿಲು, ಮಳೆಯ ನಡುವೆ ನಿರಂತರವಾಗಿ ಬೈಕ್ ಓಡಿಸುವುದು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂಬ ಸತ್ಯವನ್ನು ಈ ಯುವಕನ ಅನುಭವ ಸಾರಿ ಹೇಳುತ್ತಿದೆ.

ಗಿಗ್ ಎಕಾನಮಿಯ ಕರಾಳ ಮುಖ

ಇದು ಕೇವಲ ಸೈಡ್ ಹಸಲ್ (Side Hustle) ಆಗಿ ಮಾಡುವವರಿಗೆ ಚೆನ್ನಾಗಿ ಕಾಣಬಹುದು. ಇದನ್ನೇ ಜೀವನೋಪಾಯವನ್ನಾಗಿ ಮಾಡಿಕೊಂಡವರ ಸ್ಥಿತಿ ದಯನೀಯ. ಇಂದು ಆರ್ಡರ್ ಸಿಕ್ಕರೆ ಹಣ, ಇಲ್ಲದಿದ್ದರೆ ಶೂನ್ಯ. ಅಪಘಾತವಾದರೆ ಅಥವಾ ಆರೋಗ್ಯ ಕೆಟ್ಟರೆ ಈ ಕಂಪನಿಗಳು ಯಾವುದೇ ಗಟ್ಟಿಯಾದ ಸಾಮಾಜಿಕ ಭದ್ರತೆ ನೀಡುವುದಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಆತ ಹೇಳಿಕೊಂಡಿರುವಂತೆ ಆಟೋ ಚಾಲಕರ ಕಣ್ಣುಗಳು ಮತ್ತು ದಾರಿಯಲ್ಲಿ ಸಿಗುವ ಜನರ ವರ್ತನೆ ಯಾವಾಗಲೂ ಇವರ ಪರವಾಗಿರುವುದಿಲ್ಲ.

ಗ್ರಾಹಕರಿಗೆ ಒಂದು ಕಿವಿಮಾತು

ಈ ಯುವಕನ ಕಥೆ ವೈರಲ್ ಆದ ಬೆನ್ನಲ್ಲೇ ಸಾರ್ವಜನಿಕ ವಲಯದಲ್ಲಿ ಒಂದು ಚರ್ಚೆ ಶುರುವಾಗಿದೆ. ಕ್ಯಾಶ್ ಆನ್ ಡೆಲಿವರಿ ಆರ್ಡರ್ ಮಾಡುವ ಗ್ರಾಹಕರು ಡೆಲಿವರಿ ಬಾಯ್ ಬಂದ ಮೇಲೆ ಚಿಲ್ಲರೆ ಹುಡುಕುವುದು ಅಥವಾ ಬಾಗಿಲು ತೆಗೆಯಲು 5-10 ನಿಮಿಷ ಕಾಯಿಸುವುದು ಅವರ ಒಂದು ದಿನದ ಸಂಪಾದನೆಯ ಮೇಲೆ ದೊಡ್ಡ ಹೊಡೆತ ಬೀಳುವಂತೆ ಮಾಡುತ್ತದೆ.

ಬೆಂಗಳೂರಿನ ಈ ಬಿಬಿಎ ವಿದ್ಯಾರ್ಥಿ ತನ್ನ ರಜೆಯನ್ನು ಕೇವಲ ಹಣ ಮಾಡಲು ಬಳಸಲಿಲ್ಲ. ಬದಲಾಗಿ ಹಸಿದ ಹೊಟ್ಟೆಗೆ ಅನ್ನ ನೀಡುವ ಜನರನ್ನು ಓಡಾಡಿಸುವ 'ಡೆಲಿವರಿ ಹೀರೊಗಳ' ಜೀವನ ಎಷ್ಟು ಸಂಕಷ್ಟದಲ್ಲಿದೆ ಎಂಬುದನ್ನು ವಿಮರ್ಶಾತ್ಮಕವಾಗಿ ಜಗತ್ತಿಗೆ ತೋರಿಸಿಕೊಟ್ಟಿದ್ದಾನೆ. 1,200 ರೂಪಾಯಿ ದಿನದ ಸಂಪಾದನೆ ಎಂಬ ಹೊಳೆಯುವ ಕವಚದೊಳಗೆ ಅಡಗಿರುವುದು ಸುಸ್ತಾದ ದೇಹ ಮತ್ತು ನಾಳೆಯ ಬದುಕಿನ ಅನಿಶ್ಚಿತತೆ ಮಾತ್ರ.

PREV
Read more Articles on
click me!

Recommended Stories

15 ಲಕ್ಷ ಗಿಡ ನೆಡುವ ಗಿನ್ನೆಸ್‌ ದಾಖಲೆ ಮಾಡಲು ಹೋಗಿ 12.5 ಕೋಟಿ ಖರ್ಚು ಮಾಡಿದ ಬಿಡಿಎ!
ಅಕ್ಕನ ಮದುವೆಯಾಗಲು ಬಂದ ಭಾವನೇ ನಾದಿನಿಯ ಬುಟ್ಟಿಗೆ ಹಾಕೊಂಡ; ನಾನು ನನ್ನ ಹೆಂಡ್ತೀರು ಕಥೆ ವೈರಲ್!