ಅವರಿಗೂ-ಇವರಿಗೂ ಮೆಜೆಸ್ಟಿಕ್ ಫ್ಲೈಓವರ್ ಮೇಲೆ ಡಿಶುಂ ಡಿಶುಂ; ಕೊನೆಗೆ ಪೊಲೀಸರೇ ಬಂದ್ರು

Published : Oct 29, 2026, 11:46 AM IST
Majestic

ಸಾರಾಂಶ

ಬೆಂಗಳೂರಿನ ಮೆಜೆಸ್ಟಿಕ್ ಅಂಡರ್‌ಪಾಸ್ ಮತ್ತು ಫ್ಲೈಓವರ್ ಬಳಿ ರಾತ್ರಿ ವೇಳೆ ನಡೆಯುವ ದೇಹವ್ಯಾಪಾರ ಹಾಗೂ ವಂಚನೆ ಬಗ್ಗೆ ವ್ಲಾಗರ್ ಒಬ್ಬರು ವಿಡಿಯೋ ಮಾಡಿದ್ದಾರೆ. ಯುವಕನಿಗೆ 8 ಸಾವಿರ ರೂ. ವಂಚಿಸಿದ ಮಹಿಳೆಯರ ಜೊತೆ ನಡೆದ ಗಲಾಟೆ ಮತ್ತು ಪೊಲೀಸರ ಮಧ್ಯಪ್ರವೇಶವನ್ನು ಇದರಲ್ಲಿ ಸೆರೆಹಿಡಿಯಲಾಗಿದೆ.

ಬೆಂಗಳೂರು: ಇತ್ತೀಚೆಗೆ ವ್ಲಾಗರ್‌ಗಳು ಬೆಂಗಳೂರಿನ ಹೃದಯಭಾಗ ಮೆಜೆಸ್ಟಿಕ್ ನಿಲ್ದಾಣದ ಸುತ್ತಮುತ್ತವೇ ಓಡಾಡುತ್ತಿರುವಂತೆ ಕಾಣಿಸುತ್ತಿದೆ. ಬಿಎಂಟಿಸಿ ನಿಲ್ದಾಣದಿಂದ ರೈಲು ನಿಲ್ದಾಣ ಸಂಪರ್ಕಿಸುವ ಅಂಡರ್‌ಪಾಸ್ ಮತ್ತು ಫ್ಲೈಓವರ್ ಮೇಲಿನ ವಿಡಿಯೋಗಳು ಹೆಚ್ಚು ವೈರಲ್ ಆಗುತ್ತಿರುತ್ತವೆ. ರಾತ್ರಿಯಾಗುತ್ತಿದ್ದಂತೆ ಈ ಎರಡು ಸ್ಥಳಗಳಲ್ಲಿ ಕತ್ತಲೆಯ ಲೋಕವೊಂದು ತೆರೆದುಕೊಳ್ಳುತ್ತದೆ. ಬಹಿರಂಗವಾಗಿಯೇ ಇಲ್ಲಿ ದೇಹವ್ಯಾಪಾರ ನಡೆಯುತ್ತದೆ.

ಅಂಡರ್‌ಪಾಸ್ ಮತ್ತು ಫ್ಲೈಓವರ್

ಈ ಎರಡು ಸ್ಥಳಗಳಲ್ಲಿ ಕಾಣಿಸಿಕೊಳ್ಳುವ ಕೆಲವು ಮಹಿಳೆಯರು, ಗ್ರಾಹಕರನ್ನು ಹುಡುಕಾಡುತ್ತಿರುತ್ತಾರೆ. ಅಂಡರ್‌ಪಾಸ್ ಮತ್ತು ಫ್ಲೈಓವರ್ ಮೇಲೆ ಓಡಾಡುವ ಪುರುಷ ಪ್ರಯಾಣಿಕರನ್ನು ಸೆಳೆಯಲು ಕಸರತ್ತು ಸಹ ನಡೆಸುತ್ತಿರುತ್ತಾರೆ. ಇವರಿಂದಾಗಿ ಪುರುಷರು ರಾತ್ರಿ ಓಡಾಡಲು ಹೆದರುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹಲವರು ವಿಡಿಯೋಗಳನ್ನು ಮಾಡುತ್ತಿರುತ್ತಾರೆ. ಪೊಲೀಸರಿದ್ರೂ ಯಾವುದೇ ಪ್ರಯೋಜನವಿಲ್ಲ ಎಂಬುವುದು ಸಾರ್ವಜನಿಕರ ಆರೋಪವಾಗಿದೆ.

ಇದೀಗ ವ್ಲಾಗರ್ ಒಬ್ಬರು ಮೆಜೆಸ್ಟಿಕ್ ಫ್ಲೈಓವರ್ ಮೇಲೆ ವಿಡಿಯೋ ಮಾಡುತ್ತಿರುವಾಗಲೇ ಮಹಿಳೆಯರು ಮತ್ತು ಪುರುಷರ ನಡುವೆ ನಡೆದ ಗಲಾಟೆಯನ್ನು ರೆಕಾರ್ಡ್ ಮಾಡಿಕೊಂಡಿದ್ದಾರೆ. ಮಂಡ್ಯದವನು ಎಂದು ಹೇಳಿಕೊಂಡ ವ್ಯಕ್ತಿ, ಇಲ್ಲಿರುವ ಮಹಿಳೆಯರು ನಮಗೆ ಮೋಸ ಮಾಡಿದ್ದಾರೆ ಎಂದು ಆರೋಪಿಸಿದ್ದಾನೆ. ಆರಂಭದಲ್ಲಿ ಓರ್ವ ಮಹಿಳೆ ಜೊತೆ ಆತನ ವಾಗ್ವಾದ ನಡೆಯುತ್ತಿರುತ್ತದೆ. ಈ ವಾಕ್ಸಮರ ಮುಂದೆ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ.

8 ಸಾವಿರ ಮೋಸ ಎಂದ ಯುವಕ!

ಇದೇ ವೇಳೆ ಅಲ್ಲಿಗೆ ಬಂದ ಮತ್ತೋರ್ವ ಯುವಕ, ಈಕೆ ನನ್ನಿಂದ 8 ಸಾವಿರ ರೂಪಾಯಿ ಹಣ ಪಡೆದುಕೊಂಡಿದ್ದಾಳೆ ಎಂದು ಆರೋಪಿಸಿ ಹಲ್ಲೆಗೆ ಮುಂದಾಗಿದ್ದಾನೆ. ನಂತರ ಮಹಿಳೆಯರಿಬ್ಬರು ತಮ್ಮವರಿಗೆ ಕರೆ ಮಾಡಿ, ಯುವಕರ ಮೇಲೆ ಹಲ್ಲೆ ನಡೆಸಲು ಮುಂದಾಗಿರೋದು ವಿಡಿಯೋದಲ್ಲಿ ರೆಕಾರ್ಡ್ ಆಗಿದೆ.

ಗಲಾಟೆ ವಿಕೋಪಕ್ಕೆ ತಿರುಗುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ಎಲ್ಲರನ್ನೂ ಠಾಣೆಗೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸಿದ್ದಾರೆ. ವಿಡಿಯೋ ಮಾಡುತ್ತಿದ್ದ ವ್ಲಾಗರ್‌ನ್ನು ಸಹ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಸದ್ಯ ಈ ಹಲ್ಲೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಘಟನೆ ಬಗ್ಗೆ ವ್ಲಾಗರ್ ಹೇಳಿದ್ದೇನು?

ಈ ವಿಡಿಯೋ ಹಂಚಿಕೊಂಡಿರುವ ವ್ಲಾಗರ್, ಈ ವಿಡಿಯೋದಲ್ಲಿ ನಾವು ಬೆಂಗಳೂರು ಮೆಜೆಸ್ಟಿಕ್ ಪ್ರದೇಶದಲ್ಲಿ ನಡೆದ ಘಟನೆಯನ್ನು ಮತ್ತು ಅಲ್ಲಿ ಸಾರ್ವಜನಿಕರಿಗೆ ಎದುರಾಗುತ್ತಿರುವ ಸಮಸ್ಯೆಗಳ ಬಗ್ಗೆ ತೋರಿಸಿದ್ದೇವೆ. ನಮ್ಮ ಉದ್ದೇಶ ಯಾರಿಗೂ ತೊಂದರೆ ಕೊಡುವುದಾಗಲಿ, ಯಾರನ್ನೂ ಅವಮಾನಿಸುವುದಾಗಲಿ ಅಲ್ಲ. ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಮತ್ತು ಯಾರೂ ವಂಚನೆಗೆ ಒಳಗಾಗಿ ತಮ್ಮ ಕಷ್ಟದ ಹಣವನ್ನು ಕಳೆದುಕೊಳ್ಳಬಾರದು ಎಂಬ ಉದ್ದೇಶದಿಂದ ಈ ವಿಡಿಯೋ ಮಾಡಿದ್ದೇವೆ ಎಂದು ಬರೆದುಕೊಂಡು ಸ್ಪಷ್ಟನೆಯನ್ನು ನೀಡಿದ್ದಾರೆ.

PREV
Read more Articles on
click me!

Recommended Stories

One Ward One Drive campaign: ಉತ್ತರ ಪಾಲಿಕೆಯ ಈ 18 ಜಂಕ್ಷನ್‌ ಗಳಲ್ಲಿ ಆಗಲಿದೆ ದೊಡ್ಡ ಬದಲಾವಣೆ!
KMF ಹಾಲಿನ ದರ ಏರಿಕೆ ಬೆನ್ನಲ್ಲೇ ರಾಜ್ಯದ ಜನತೆಗೆ ಸಾರಿಗೆ ಇಲಾಖೆಯಿಂದ ಮತ್ತೊಂದು ಬಿಗ್ ಶಾಕ್!