ನಿಖಿಲ್ ಕಾಮತ್ ಪಾಡ್‌ಕಾಸ್ಟ್‌ನಲ್ಲಿ ಬ್ರಿಟನ್ ಮಾಜಿ ಪ್ರಧಾನಿ ರಿಷಿ ಸುನಕ್, ಅಕ್ಷತಾ ಮೂರ್ತಿ ಕನ್ನಡದಲ್ಲಿ ಮಸ್ತಿ

Published : Mar 24, 2026, 01:53 PM IST
Nikhil kamath Podcast

ಸಾರಾಂಶ

ನಿಖಿಲ್ ಕಾಮತ್ ಪಾಡ್‌ಕಾಸ್ಟ್‌ನಲ್ಲಿ ಬ್ರಿಟನ್ ಮಾಜಿ ಪ್ರಧಾನಿ ರಿಷಿ ಸುನಕ್, ಅಕ್ಷತಾ ಮೂರ್ತಿ ಕನ್ನಡದಲ್ಲಿ ಮಸ್ತಿ ಮಾಡಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದ ಪಾಡ್‌ಕಾಸ್ಟ್‌ನಲ್ಲಿ ಕನ್ನಡ ಮಾತುಕತೆ ಭಾರಿ ವೈರಲ್ ಆಗಿದೆ. 

ಬೆಂಗಳೂರು (ಮಾ.24) ಉದ್ಯಮಿ ನಿಖಿಲ್ ಕಾಮತ್ ದೇಶ ವಿದೇಶಗಳ ಗಣ್ಯರು, ಉದ್ಯಮಿಗಳು, ಸಾಧಕರು ಸೇರಿದಂತೆ ಹಲವರ ಜೊತೆ ಪಾಡ್‌ಕಾಸ್ಟ್ ಮೂಲಕ ಮಾತುಕತೆ ನಡೆಸುತ್ತಾರೆ. ವಿಶ್ವದ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಸೇರಿದಂತೆ ಹಲವರ ಜೊತೆ ನಿಖಿಲ್ ಕಾಮತ್ ಪಾಡ್‌ಕಾಸ್ಟ್ ನಡೆಸಿ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಇದೀಗ ಇದೇ ಜಾಗತಿಕ ಮಟ್ಟದ ಪಾಡ್‌ಕಾಸ್ಟ್‌ನಲ್ಲಿ ಜಾತಿಕ ಸೆಲೆಬ್ರೆಟಿಗಳ ಮಾತುಕಚೆಯಲ್ಲಿ ಕನ್ನಡ ಮಾತುಕತೆ ಭಾರಿ ಸದ್ದು ಮಾಡುತ್ತಿದೆ. ಬ್ರಿಟನ್ ಮಾಜಿ ಪ್ರಧಾನಿ ರಿಷಿ ಸುನಕ್ ಹಾಗೂ ಪತ್ನಿ, ಇನ್ಫೋಸಿಸ್ ನಾರಾಯಣಮೂರ್ತಿ ಮಗಳು ಅಕ್ಷತಾ ಮೂರ್ತಿ ಜೊತೆ ನಿಖಿಲ್ ಕಾಮತ್ ಪಾಡ್‌ಕಾಸ್ಟ್ ನಡೆಸಿದ್ದಾರೆ. ಈ ಪಾಡ್‌ಕಾಸ್ಟ್‌ನಲ್ಲಿ ಕನ್ನಡದಲ್ಲಿ ಮಾತುಕತೆ ಭಾರಿ ವೈರಲ್ ಆಗಿದೆ.

ಕನ್ನಡದಲ್ಲೇ ಮಾತುಕತೆ

ಬ್ರಿಟನ್ ಮಾಜಿ ಪ್ರಧಾನಿ ರಿಷಿ ಸುನಕ್ ಹಾಗೂ ಅಕ್ಷತಾ ಮೂರ್ತಿ ಜೊತೆಗೆನ ಪಾಡ್‌ಕಾಸ್ಟ್ ಪ್ರೋಮೋ ರಿಲೀಸ್ ಮಾಡಲಾಗಿದೆ. ಇದೀಗ ಭಾರಿ ಕುತೂಹಲಕ್ಕೆ ಕಾರಣವಾಗಿದೆ. ಒಂದೆಡೆ ಈ ಮಾತುಕತೆಗೆ ಜಾಗತಿಕ ಮಟ್ಟದ ಅಭಿಮಾನಿಗಳು ಕಾಯುತ್ತಿದ್ದಾರೆ. ಇತ್ತ ಕನ್ನಡಿಗರು ಕಾಯುತ್ತಿದ್ದಾರೆ. ರಿಷಿ ಸುನಕ್ ಪತ್ನಿ ಅಕ್ಷತಾ ಬೆಂಗಳೂರಿನ ಶ್ರೀಮಂತ ಉದ್ಯಮಿ ನಾರಾಯಣಮೂರ್ತಿ ಹಾಗೂ ಸುಧಾಮೂರ್ತಿ ಪುತ್ರಿ. ಹೀಗಾಗಿ ಅಕ್ಷತಾ ಹಾಗೂ ನಿಖಿಲ್ ಮಾತುಕತೆ ನಡುವೆ ಹಲವು ಬಾರಿ ಕನ್ನಡದಲ್ಲೇ ಮಾತನಾಡಿದ್ದಾರೆ.

ನಿಖಿಲ್ ಕಾಮತ್ ಜೊತೆಗಿನ ಪಾಡ್‌ಕಾಸ್ಟ್ ಮಾತುಕತೆಯಲ್ಲಿ ಮದುವೆ, ಬ್ರಿಟನ್ ಪ್ರಧಾನಿ ಸ್ಥಾನ, ಸೋಲು, ಜೀವನ ಸೇರಿದಂತೆ ಹಲವು ವಿಚಾರಗಳ ಕುರಿತು ಮಾತನಾಡಿದ್ದಾರೆ. ಅಕ್ಷತಾ ಮೂರ್ತಿಯನ್ನು ಮದುವೆಯಾಗಿದ್ದರೆ ನಾನು ಈ ಸ್ಥಾನದಲ್ಲಿ ಇರಲು ಸಾಧ್ಯವಾಗುತ್ತಿರಲಿಲ್ಲ ಎಂದು ರಿಷಿ ಹೇಳಿದ್ದಾರೆ. ಇದರ ನಡುವೆ ಅಕ್ಷತಾ ಮೂರ್ತಿ, ನಿಖಿಲ್ ಕಾಮತ್ ಜೊತೆ ಕನ್ನಡದಲ್ಲಿ ಮಾತನಾಡಿದ್ದಾರೆ.ಇಷ್ಟೇ ಏನಾದರು ಅರ್ಥವಾಯಿತಾ ಎಂದು ಸುನಕ್‌ಗೆ ಪ್ರಶ್ನಿಸಿದ್ದಾರೆ.

ನಿಮಗೂ ಕನ್ನಡ ಬರುತ್ತೆ, ನನಗೂ ಕನ್ನಡ ಬರುತ್ತೆ

ಮಾತುಕತೆ ನಡುವೆ ಅಕ್ಷತಾ ಮೂರ್ತಿ, ನಿಮಗೂ ಕನ್ನಡ ಬರುತ್ತೆ, ನನಗೂ ಕನ್ನಡ ಬರುತ್ತೆ ಎಂದು ನಿಖಿಲ್ ಕಾಮತ್‌ಗೆ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ನಿಖಿಲ್ ಕಾಮತ್, ಇವರ ಬಗ್ಗೆ ಏನಾದರು ಹೇಳಬಹುದಾ ಎಂದು ಪ್ರಶ್ನಿಸಿದ್ದಾರೆ. ತಕ್ಷಣ ಪ್ರತಿಕ್ರಿಯಿಸಿದ ಅಕ್ಷತಾ ಮೂರ್ತಿ, ಹೇಳಬಹುದು, ಏನು ಬೇಕಾದರು ಹೇಳಬಹುದು. ಗೊತ್ತಾಗಲ್ಲ ಅವರಿಗೆ ಎಂದಿದ್ದಾರೆ. ಹೀಗೆ ಕನ್ನಡದ ಮಾತುಕತೆಗಳು ಮುಂದುವರಿದಿದೆ.ಈ ಪ್ರೋಮೋ ವಿಡಿಯೋ ಇದೀಗ ಭಾರಿ ಸದ್ದು ಮಾಡುತ್ತಿದೆ. ಕನ್ನಡದ ಮಾತುಕತೆ ವಿಡಿಯೋಗಳು ಎಲ್ಲೆಡೆ ಹರಿದಾಡುತ್ತಿದೆ.

PREV
Read more Articles on
click me!

Recommended Stories

ಡ್ರೈವರ್‌ಲೆಸ್ ನಮ್ಮ ಮೆಟ್ರೋ ಗುಲಾಬಿ ಮಾರ್ಗ ಒಂದೂವರೆ ತಿಂಗಳಲ್ಲಿ ಸಾರ್ವಜನಿಕ ಸೇವೆಗೆ ಮುಕ್ತ ಬಹುತೇಕ ಖಚಿತ
ಬೆಂಗಳೂರು: ಮಧ್ಯರಾತ್ರಿ ಮಾಜಿ ಡಾನ್ ಮಗನಿಂದ ಐಷಾರಾಮಿ ಕಾರು ಡ್ರಿಫ್ಟಿಂಗ್, ನಾನವನಲ್ಲ ನಾನವನಲ್ಲ ಅಂತಿರೋ ರಿಕ್ಕಿ ರೈ!