
ಚಿಕ್ಕೋಡಿ (ನ.22) ಕರ್ನಾಟಕದಲ್ಲಿ ರೈತ ಹೋರಾಟಗಳು ತೀವ್ರಗೊಳ್ಳುತ್ತಿದೆ. ಈಗಾಗಲೇ ಕಬ್ಬು ಬೆಳೆಗಾರರ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಇದೇ ವೇಳೆ ಹಲವು ರೈತ ಸಂಘಟನೆಗಳು ರೈತರ ಬೇಡಿಕೆಗೆ ಆಗ್ರಹಿಸಿ ಬೃಹತ್ ಪ್ರತಿಭಟನೆಗೆ ಮುಂದಾಗಿದೆ. ಹೀಗೆ ರೈತ ಪ್ರತಿಭಟನೆಗಳಿಗೆ ಬೆಂಬಲ ಕೋರಲು ಹಲವು ರೈತ ಮುಖಂಡರ ಭೇಟಿ ಮಾಡಲು ತೆರಳುತ್ತಿದ್ದ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಚುನ್ನಪ್ಪ ಪೂಜಾರಿ ಸಂಚರಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ನಾಗರಮುನ್ನೂಳಿ ಹೊರವಲಯದಲ್ಲಿ ಕಾರು ಅಪಘಾತ ಸಂಭವಸಿದೆ.
ನಿಯಂತ್ರಣ ತಪ್ಪಿದ ಕಾರು ವೇಗವಾಗಿ ವಿದ್ಯುತ್ ಕಂಬ ಸೇರಿ ಮರಕ್ಕೆ ಡಿಕ್ಕಿಯಾಗಿದೆ. ಕಾರು ರಸ್ತೆಯಿಂದ ಪಕ್ಕಕ್ಕೆ ಚಲಿಸಿ ಮರಕ್ಕೆ ಡಿಕ್ಕಿಯಾಗಿ ನಿಂತಿದೆ. ಅದೃಷ್ಠವಶಾತ್ ರೈತ ಮುಖಂಡ ಚುನ್ನಪ್ಪ ಪೂಜಾರಿ ಪ್ರಣಾಪಾಯದಿಂದ ಪಾರಾಗಿದ್ದಾರೆ. ಚುನ್ನಪ್ಪ ಪೂಜಾರಿ ಜೊತೆ ಇತರ ಕೆಲ ರೈತ ಮುಖಂಡರು ಪ್ರಯಾಣಿಸುತ್ತಿದ್ದರು. ಯಾರಿಗೂ ಹೆಚ್ಚಿನ ಗಾಯವಾಗಿಲ್ಲ. ಸದ್ಯಕ್ಕೆ ಕಾರಿನಲ್ಲಿದ್ದವರಿಗೆ ಯಾವುದೇ ಹಾನಿ ಆಗಿಲ್ಲ ಎಂದು ಚುನ್ನಪ್ಪ ಪೂಜಾರಿ ಮಾಹಿತಿ ನೀಡಿದ್ದಾರ.
ಹಂಚಿನಾಳದಿಂದ ನಾಗರಮುನ್ನೊಳ್ಳಿ ಮಾರ್ಗವಾಗಿ ಕಬ್ಬೂರ ಕಡೆಗೆ ಹೊರಟಿದ್ದ ವೇಳೆಯಲ್ಲಿ ಕಾರು ಅಪಘಾತಕ್ಕೀಡಾಗಿದೆ. ಅಪಘಾತದ ಬೆನ್ನಲ್ಲೇ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಆದರೆ ಎಲ್ಲರೂ ಪ್ರಾಣಾಪಾಯದಿಂದ ಪಾರಾದ ಬೆನ್ನಲ್ಲೇ ಪರಿಸ್ಥಿತಿ ತಿಳಿಗೊಂಡಿದೆ.
ರೈತರ ವಿವಿದೆ ಬೇಡಿಕೆಗಳಿಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಸೇರಿದಂತೆ ಹಲವು ರೈತ ಸಂಘಟನೆಗಳು ಭಾರಿ ಪ್ರತಿಭಟನೆಗೆ ಮುಂದಾಗಿದೆ. ಡಿಸೆಂಬರ್ 11ರಂದು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ. ಈ ಪ್ರತಿಭಟನೆಗೆ ಈಗಾಗಲೇ ಕೆಲ ರೈತ ಸಂಘಟನೆಗಳು ಬೆಂಬಲ ಸೂಚಿಸದೆ. ಈ ಪ್ರತಿಭಟನೆ ಭಾಗವಾಗಿ ಚುನ್ನಪ್ಪ ಪೂಜಾರಿ ಹಲವ ರೈತ ಸಂಘಟನೆ ನಾಯಕರ ಭೇಟಿಯಾಗಿ ಬೆಂಬಲ ಕೋರಿದ್ದಾರೆ. ಡಿಸೆಂಬರ್ 8 ರಿಂದ ಬೆಳಗಾವಿ ಸುವರ್ಣ ಸೌಧದಲ್ಲಿ ಚಳಿಗಾಲದ ಅಧಿವೇಶನ ಆರಂಭಗೊಳ್ಳಲಿದೆ. ಹೀಗಾಗಿ ಡಿಸೆಂಬರ್ 11ರಂದು ಸರ್ಕಾರಕ್ಕೆ ಬಿಸಿ ಮುಟ್ಟಿಸಲು ರೈತ ಸಂಘಟನೆಗಳು ಮುಂದಾಗಿದೆ. ರೈತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಡೆಯಲಿರುವ ಪ್ರತಿಭಟನೆಗೆ ಪಾಲ್ಗೊಳ್ಳುವಂತೆ ರೈತ ಮುಖಂಡರನ್ನು ಭೇಟಿ ಮಾಡುವ ವೇಳೆ ಈ ಅಪಘಾತ ಸಂಭವಿಸಿದೆ.