ಲೋಕಾಪುರ: ಭಕ್ತರ ಹರ್ಷೋದ್ಗಾರದ ಮಧ್ಯೆ ವೆಂಕಟೇಶ್ವರ ರಥೋತ್ಸವ

By Web Desk  |  First Published Oct 9, 2019, 10:41 AM IST

ಸ್ಥಳೀಯ ವೆಂಕಟೇಶ್ವರ ದೇವಸ್ಥಾನದಲ್ಲಿ ಸಾವಿರಾರು ಭಕ್ತ ಸಮ್ಮುಖದಲ್ಲಿ ಅರ್ಚಕರು ಪಠಿಸಿದ ಮಂತ್ರಘೋಷಗಳ ಮಧ್ಯೆ ವೆಂಕಟೇಶ್ವರ ರಥೋತ್ಸವ ಸಂಭ್ರಮದಿಂದ ಜರುಗಿತು| ನವರಾತ್ರಿ ಉತ್ಸವ ಅಂಗವಾಗಿ ನಡೆದ ರಥೋತ್ಸವದಲ್ಲಿ ವೆಂಕಟೇಶ್ವರ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದ ಬಳಿಕ ರಥೋತ್ಸವಕ್ಕೆ ಚಾಲನೆ ನೀಡಲಾಯಿತು|


ಲೋಕಾಪುರ(ಅ.9): ಸ್ಥಳೀಯ ವೆಂಕಟೇಶ್ವರ ದೇವಸ್ಥಾನದಲ್ಲಿ ಸಾವಿರಾರು ಭಕ್ತ ಸಮ್ಮುಖದಲ್ಲಿ ಅರ್ಚಕರು ಪಠಿಸಿದ ಮಂತ್ರಘೋಷಗಳ ಮಧ್ಯೆ ವೆಂಕಟೇಶ್ವರ ರಥೋತ್ಸವ ಸಂಭ್ರಮದಿಂದ ಜರುಗಿತು. ನವರಾತ್ರಿ ಉತ್ಸವ ಅಂಗವಾಗಿ ನಡೆದ ರಥೋತ್ಸವದಲ್ಲಿ ವೆಂಕಟೇಶ್ವರ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದ ಬಳಿಕ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.

ಮಾವಿನ ತೋರಣ, ತುಳಸಿಮಾಲೆ, ಹೂಮಾಲೆ, ಕಬ್ಬು, ಬಾಳೆ ಗಿಡ, ಕೆಸರಿ ಬಣ್ಣದ ಧ್ವಜಗಳಿಂದ ರಥ ಅಲಂಕಾರ ಮಾಡಲಾಗಿತ್ತು. ಘಂಟನಾದ ಶಹನಾಯ್‌, ಜಾಗಟೆ ಸದ್ದು, ಹಲಗಿ ಮೇಳ, ವಾದ್ಯಮೇಳ, ಡೊಳ್ಳು, ಹಾಗೂ ವೇದಘೋಷಗಳೊಂದಿಗೆ ಜರುಗಿದ ಸಂಭ್ರಮದ ರಥೋತ್ಸವಕ್ಕೆ ನೆರೆದವರು ಸಾಕ್ಷಿಯಾದರು. 

Tap to resize

Latest Videos

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ರಥದ ಮೇಲೆ ಕಳಸ ಇಡಲಾಗಿತ್ತು. ವೆಂಕಟರಮಣ ಗೋವಿಂದ ಗೋವಿಂದ ಎಂಬ ಜಯಘೋಷ ಮುಗಿಲು ಮುಟ್ಟಿತ್ತು. ಜೋಡು ಹಗ್ಗದಿಂದ ರಥವನ್ನು ಭಕ್ತರು ಎಳೆದರು. ಹಗಲು ದೀವಟಿಗೆ ಮತ್ತು ಚಾಮರ, ಜ್ಞಾನೇಶ್ವರ ಮಠದ ಶ್ರೀಗಳ ಕುದುರೆ ಸವಾರಿ ರಥೋತ್ಸವಕ್ಕೆ ಮೆರೆಗು ನೀಡಿದ್ದವು. ರಥ ಮುಂದೆ ಸಾಗುತ್ತಿದ್ದಂತೆಯೇ ಬಾಳೆಹಣ್ಣು, ಕಲ್ಲು ಸಕ್ಕರೆ, ಮುದ್ದಿ ಸಕ್ಕರೆ, ಖಾರೀಕ, ಕೊಬ್ಬರಿ ಚೂರು, ಬೆಂಡು ಬೆತ್ತಾಸುಗಳನ್ನು ಎಸೆದು ಭಕ್ತಿಸೇವೆ ಸಲ್ಲಿಸಿದರು.ಭಕ್ತರು ತೆಂಗಿನಕಾಯಿ ಒಡೆದು, ಕರ್ಪೂರ ಹಚ್ಚಿ, ಊದುಬತ್ತಿ ಬೆಳಗಿ ರಥಕ್ಕೆ ನಮಿಸಿದರು. ನಂತರ ವೆಂಕಟೇಶ್ವರನ ದರ್ಶನ ಪಡೆದರು. ವಿಜಯದಶಮಿ ಸಾಯಂಕಾಲ ಮದ್ದು ಸುಡುವ ಕಾರ್ಯಕ್ರಮ ಜರುಗಿತು.

ಜ್ಞಾನೇಶ್ವರ ಮಠದ ಪೀಠಾಧಿಕಾರಿ ಬ್ರಹ್ಮಾನಂದ ಶ್ರೀಗಳು, ದೇವಸ್ಥಾನದ ಅರ್ಚಕ ಬಿ.ಎಲ್‌. ಬಬಲಾದಿ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಪಂ.ಸುಶೀಲೇಂದ್ರಚಾರ್ಯ ಗೋಠೆ, ಸಿದ್ರಾಮಪ್ಪ ದೇಸಾಯಿ, ಕಿರಣ ದೇಸಾಯಿ, ಆನಂದಚಾರ್ಯ ಜಂಬಗಿ, ತಿಮ್ಮಣ್ಣ ದೇಶಪಾಂಡೆ, ಆರ್‌.ಎಸ್‌.ಜೋಶಿ, ಬಿ.ಜೆ.ಜೋಶಿ, ಸಿ.ಎ.ಪಾಟೀಲ, ಲೋಕಣ್ಣ ಕೊಪ್ಪದ, ಸುಭಾಸ ತುಳಸಿಗೇರಿ, ವåಹಾಂತೇಶ ಉದಪುಡಿ, ಎಂ.ಎಂ.ವಿರಕ್ತಮಠ, ಕೆ.ಆರ್‌.ಬೋಳಿಶೆಟ್ಟಿ, ರಾಘವೇಂದ್ರಚಾರ್ಯ ಬಬಲಾದಿ, ವಿಠ್ಠಲ ಹೂಗಾರ, ಹಣಮಂತ ಹುಕುಮನವರ, ಮಲ್ಲಪ್ಪ ಅಂಗಡಿ, ಜಾಕೀರ ಅತ್ತಾರ, ಗಿರಿಶ ಹುಕುಮನವರ, ವಿಠ್ಠಲ ಹೂಗಾರ, ಮಹಾಂತೇಶ ಬೋಳಿಶೆಟ್ಟಿ, ವೆಂಕಣ್ಣ ಹುಕುಮನವರ, ಶಿವು ಸುರಪುರ, ವೆಂಕಟಾಪುರ, ನಾಗಣಾಪುರ, ಲಕ್ಷಾನಟ್ಟಿ, ಅರಳಿಕಟ್ಟಿ, ಜಾಲಿಕಟ್ಟಿ, ಸುತ್ತಮುತ್ತಲಿನ ಭಕ್ತರು ಇದ್ದರು. ಪಿ.ಎಸ್‌.ಐ ಶಿವಾಜಿ ಪವಾರ ಇವರ ನೇತೃತ್ವದಲ್ಲಿ ಬೀಗಿ ಪೋಲಿಸ್‌ ಬಂದೋಬಸ್ತ್ ಮಾಡಲಾಗಿತ್ತು. ನಂತರ ಭಕ್ತರಿಗೆ ಅನ್ನಸಂತರ್ಪಣೆ, ಸಾಯಂಕಾಲ ಮದ್ದು ಸುಡುವ ಕಾರ್ಯಕ್ರಮ ಜರುಗಿತು.
 

click me!