ಪದವಿ ಪರೀಕ್ಷೆಯನ್ನು ಮುಂದೂಡುವಂತೆ ಆಗ್ರಹಿಸಿದ ವಿದ್ಯಾರ್ಥಿನಿಯರು ಜಿಲ್ಲೆಯ ಜಮಖಂಡಿ ಪ್ರತಿಭಟನೆ ನಡೆಸಿದ್ದಾರೆ| ತಾಲೂಕಿನಲ್ಲಿ ನೆರೆ ಬಂದಾಗ ಬಸ್ ಸೌಕರ್ಯವಿಲ್ಲದೆ ಕಾಲೇಜಿಗೆ ಗ್ರಾಮೀಣ ಭಾಗದ ವಿದ್ಯಾರ್ಥಿನಿಯರು ಹಾಜರಾಗಿಲ್ಲ| ಪರೀಕ್ಷಾ ಶುಲ್ಕ ಕಟ್ಟುವಾಗಲೂ ತರಗತಿ ನಡೆದಿಲ್ಲ| ಅತಿಥಿ ಉಪನ್ಯಾಸಕರ ನೇಮಕಾತಿ ವಿಳಂಬದಿಂದ ಕಲಿಕೆಗೆ ಹಿನ್ನಡೆಯಾಗಿದೆ| ಐದಾರು ದಿನದಲ್ಲಿ ಪರೀಕ್ಷೆ ನಡೆಸಿದ್ರೆ, ಫಲಿತಾಂಶದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತೆ | ಪರೀಕ್ಷೆಯನ್ನು ಮುಂದೂಡುವಂತೆ ಆಗ್ರಹ|
ಬಾಗಲಕೋಟೆ(ಅ.19): ಪದವಿ ಪರೀಕ್ಷೆಯನ್ನು ಮುಂದೂಡುವಂತೆ ಆಗ್ರಹಿಸಿದ ವಿದ್ಯಾರ್ಥಿನಿಯರು ಜಿಲ್ಲೆಯ ಜಮಖಂಡಿ ಪಟ್ಟಣದಲ್ಲಿ ಶನಿವಾರ ಪ್ರತಿಭಟನೆ ನಡೆಸಿದ್ದಾರೆ.
ಜಮಖಂಡಿ ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಎದುರು ಪ್ರತಿಭಟನೆ ನಡೆಸಿದ ವಿದ್ಯಾರ್ಥಿನಿಯರು ತಾಲೂಕಿನಲ್ಲಿ ನೆರೆ ಬಂದಾಗ ಬಸ್ ಸೌಕರ್ಯವಿಲ್ಲದೆ ಕಾಲೇಜಿಗೆ ಗ್ರಾಮೀಣ ಭಾಗದ ವಿದ್ಯಾರ್ಥಿನಿಯರು ಹಾಜರಾಗಿಲ್ಲ. ಪರೀಕ್ಷಾ ಶುಲ್ಕ ಕಟ್ಟುವಾಗಲೂ ತರಗತಿ ನಡೆದಿಲ್ಲ ಹಾಗೂ ಅತಿಥಿ ಉಪನ್ಯಾಸಕರ ನೇಮಕಾತಿ ವಿಳಂಬದಿಂದ ಕಲಿಕೆಗೆ ಹಿನ್ನಡೆಯಾಗಿದೆ. ಐದಾರು ದಿನದಲ್ಲಿ ಪರೀಕ್ಷೆ ನಡೆಸಿದ್ರೆ, ಫಲಿತಾಂಶದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತೆ ಹೀಗಾಗಿ ಪರೀಕ್ಷೆಯನ್ನು ಮುಂದೂಡುವಂತೆ ಆಗ್ರಹಿಸಿದ್ದಾರೆ.
ವಿಜಯಪುರ ಅಕ್ಕಮಹಾದೇವಿ ಮಹಿಳಾ ವಿವಿಯಿಂದ ಪರೀಕ್ಷಾ ವೇಳಾ ಪಟ್ಟಿ ಪ್ರಕಟವಾಗಿದೆ. ಅಕ್ಟೋಬರ್ 25 ರಿಂದ ಪರೀಕ್ಷೆಗಳು ಆರಂಭವಾಗಲಿವೆ. ಈ ಸಂಬಂಧ ಪರೀಕ್ಷೆ ಮುಂದೂಡುವಂತೆ ಕುಲಸಚಿವರಿಗೂ ಮನವಿ ಕೊಟ್ಟಿದ್ದರೂ, ಪರೀಕ್ಷಾ ದಿನಾಂಕ ಪ್ರಕಟಿಸಿದ್ದಾರೆ. ಕನಿಷ್ಠ 15 ದಿನ ಪರೀಕ್ಷೆ ಮುಂದೂಡಿ, ಓದಲು ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ.