
ಇಳಕಲ್ಲ(ಅ.17): ಪಟ್ಟಣದಲ್ಲಿ ಬುಧವಾರ ನಡೆದ ಆರೆಸ್ಸೆಸ್ ಪಥ ಸಂಚಲನ ಎಲ್ಲರ ಗಮನ ಸೆಳೆಯಿತು.
ಪೊಲೀಸ್ ಮೈದಾನದ ಹತ್ತಿರ ಇರುವ ಚಂದ್ರಶೇಖರ ಅಝಾದ ವೃತ್ತದಿಂದ ಪ್ರಾರಂಭವಾದ ಪಥ ಸಂಚಲನ 10ನೇ ನಂಬರ್ ಶಾಲೆಯ ಮುಂದಿನಿಂದ ಮಹಾಂತೇಶ ಚಿತ್ರಮಂದಿರ ರಸ್ತೆಯಿಂದ ಹೊರಟು ತುಳಸಿ ಆಸ್ಪತ್ರೆ ಮುಖಾಂತರ ಸಾಲಪೇಟ ತಲುಪಿ ಅಲ್ಲಿಂದ ಕಂಠಿ ವೃತ್ತದಿಂದ ಗಣೇಶ ಭವನ, ದ್ವಾರಕಾ ಲಾಡ್ಜ್ ಮುಖಾಂತರ ವಿಶೇಷ ತಹಸೀಲ್ದಾರ್ ಕಚೇರಿ ಮುಂದೆ ಹಾಯ್ದು ಗಾಂಧಿ ಚೌಕ್ ಮುಖಾಂತರ ಮುಖ್ಯ ಬಜಾರದಲ್ಲಿ ಬಂದು ಬಸವಣ್ಣ ದೇವರ ಗುಡಿ, ಶ್ರೀರಾಮ ಮಂದಿರ, ಕೊಪ್ಪರದ ಪೇಟೆ ಮುಖಾಂತರ ನೀಲಕಂಠೇಶ್ವರ ದೇವಸ್ಥಾನ, ಹಳೆ ಸರ್ಕಾರಿ ಆಸ್ಪತ್ರೆ ಮೂಲಕ ವಿಜಯ ಮಹಾಂತೇಶ್ವರ ಕರ್ತು ಗದ್ದುಗೆಯ ಹತ್ತಿರ ಇರುವ ಬಸವಾ ಪಬ್ಲಿಕ್ ಶಾಲೆಯ ಮೈದಾನಕ್ಕೆ 5 ಗಂಟೆಗೆ ಆಗಮಿಸಿತು.
ದಾರಿಯಲ್ಲಿ ನಗರದ ಜನತೆ ರಸ್ತೆಯುದ್ದಕ್ಕೂ ರಂಗೋಲಿ ಬಿಡಿಸಿ ಇಡೀ ರಸ್ತೆಯನ್ನೇ ತಳಿರು ತೋರಣದಿಂದ ಸಿಂಗರಿಸಲಾಗಿತ್ತು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ನಡುದಾರಿಯಲ್ಲಿ ಮಕ್ಕಳಿಗೆ ದೇಶ ಭಕ್ತರ ವೇಷ ಧರಿಸಿದ್ದ ಮಕ್ಕಳು ಗಮನ ಸೆಳೆದರು. ಈ ಶಿಸ್ತಿನ ಆರ್.ಎಸ್.ಎಸ್‌ನ ಪಥ ಸಂಚಲನದಲ್ಲಿ ಶಾಸಕ ದೊಡ್ಡನಗೌಡ ಪಾಟೀಲ ಇವರ ಪುತ್ರ ರಾಜುಗೌಡ ಪಾಟೀಲ, ಪುರಶೋತ್ತಮ ದರಕ, ಶರಣಪ್ಪ ರೋಡ್ಡಾ ಇತರೆ ಪ್ರಮುಖರು ಭಾಗವಹಿಸಿದ್ದರು.