ಜೋಗಿ ಸೇರಿದಂತೆ ಐವರಿಗೆ ಪ್ರತಿಷ್ಠಿತ `ಅಮ್ಮ ಪ್ರಶಸ್ತಿ'/ ಕಳೆದ 10 ವರ್ಷದಿಂದ ಪ್ರಶಸ್ತಿ ನೀಡಿಕೆ/ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನ ಕೊಡಮಾಡುವ ರಾಜ್ಯಮಟ್ಟದ ಪ್ರತಿಷ್ಠಿತ ಪ್ರಶಸ್ತಿ
ಕಲಬುರಗಿ[ನ. 10] ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನ ಕೊಡಮಾಡುವ ರಾಜ್ಯಮಟ್ಟದ ಪ್ರತಿಷ್ಠಿತ ಪ್ರಶಸ್ತಿ `ಅಮ್ಮ ಪ್ರಶಸ್ತಿ'ಗೆ ಕಾದಂಬರಿಕಾರ, ಪತ್ರಕರ್ತ, ಕನ್ನಡಪ್ರಭ ಪುರವಣಿ ವಿಭಾಗದ ಸಂಪಾದಕ ಪಾತ್ರರಾಗಿದ್ದಾರೆ. ಜೋಗಿ ಅವರೊದಿಗೆ ಲೇಖಕಿ ಸುಧಾ ಆಡುಕಳ, ವೈಚಾರಿಕ ಲೇಖಕ ಜಿ.ಎನ್.ನಾಗರಾಜ್, ಅನುವಾದಕ ಪ್ರಭಾಕರ ಸಾತಖೇಡ, ಕಥೆಗಾರ ಚನ್ನಪ್ಪ ಕಟ್ಟಿ, ಕವಯತ್ರಿ ಭುವನಾ ಹಿರೇಮಠ ಅವರ ಕೃತಿಗಳಿಗೂ ಅಮ್ಮ ಪ್ರಶಸ್ತಿ ದೊರೆತಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಅಮ್ಮ ಪ್ರಶಸ್ತಿ ಸಂಚಾಲಕಿ ರತ್ನಕಲಾ ಮಹಿಪಾಲರೆಡ್ಡಿ ಮುನ್ನೂರ್, ಜೋಗಿ ಅವರ `ಎಲ್' (ಕಾದಂಬರಿ), ಉಡುಪಿಯ ಸುಧಾ ಆಡುಕಳ ಅವರ `ಬಕುಲದ ಬಾಗಿಲಿನಿಂದ' (ಲಲಿತ ಪ್ರಬಂಧ), ತುಮಕೂರಿನ ಜಿ.ಎನ್.ನಾಗರಾಜ್ ಅವರ ನಿಜ ರಾಮಾಯಣ ಅನ್ವೇಷಣೆ (ವೈಚಾರಿಕ ಬರಹ), ಕಲಬುರಗಿಯ ಪ್ರಭಾಕರ ಸಾತಖೇಡ ಅವರ `ಮಾಸ್ತರರ ನೆರಳಾಗಿ' (ಅನುವಾದ), ವಿಜಯಪುರದ ಚನ್ನಪ್ಪ ಕಟ್ಟಿ ಅವರ ಅವರ `ಏಕತಾರಿ' (ಕಥಾ ಸಂಕಲನ) ಮತ್ತು ಬೆಳಗಾವಿಯ ಭುವನಾ ಹಿರೇಮಠ ಅವರ `ಟ್ರಯಲ್ ರೂಮಿನ ಅಪ್ಸರೆಯರು' (ಕವನ ಸಂಕಲನ) ಕೃತಿಗಳನ್ನು 2019 ನೇ ವರ್ಷದ `ಅಮ್ಮ ಪ್ರಶಸ್ತಿ'ಗೆ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.
ಮೈದುಂಬಿದ ಸೂಳೆಕೆರೆ ಸೊಬಗ ಕಾಣ ಬನ್ನಿ
ಪ್ರಶಸ್ತಿಯು ತಲಾ 5000 ರೂ. ನಗದು ಪುರಸ್ಕಾರ, ನೆನಪಿನ ಕಾಣಿಕೆ, ಪ್ರಮಾಣ ಪತ್ರ ಮತ್ತು ಸತ್ಕಾರ ಒಳಗೊಂಡಿರುತ್ತದೆ. ನವೆಂಬರ್ 26 ರಂದು ಸಂಜೆ 5.30ಕ್ಕೆ ಕಲಬುರಗಿ ಜಿಲ್ಲೆಯ ಸೇಡಮ್ ಪಟ್ಟಣದ ಶ್ರೀ ಪಂಚಲಿಂಗೇಶ್ವರ ದೇವಾಲಯದ ಶಾಂಭವಿ ರಂಗಮಂಟಪದಲ್ಲಿ ಜರುಗುವ ಸಮಾರಂಭದಲ್ಲಿ `ಅಮ್ಮ ಪ್ರಶಸ್ತಿ' ಪ್ರದಾನ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಅಮ್ಮ ಗೌರವ ಪುರಸ್ಕಾರ :
ಕಳೆದ ಹತ್ತು ವರ್ಷಗಳಿಂದ ಆರಂಭಗೊಂಡ `ಅಮ್ಮ ಗೌರವ ಪುರಸ್ಕಾರ'ಕ್ಕೆ ಈ ಬಾರಿಯೂ ನಾಡು-ನುಡಿಗೆ ನೀಡಿದ ಕೊಡುಗೆಯನ್ನು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಮಾಡಿದ ಗಣನೀಯ ಸಾಧನೆಯನ್ನು ಗುರುತಿಸಿ `ಅಮ್ಮ ಗೌರವ' ಪುರಸ್ಕಾರ ನೀಡಿ ಸತ್ಕರಿಸಲಾಗುತ್ತದೆ.
ಈ ಬಾರಿಯ `ಅಮ್ಮ ಗೌರವ ಪುರಸ್ಕಾರ'ಕ್ಕೆ ಹಿರಿಯ ಸಂಶೋಧಕ, ಸಾಹಿತಿ ಪ್ರೊ.ದೇವರಕೊಂಡಾರೆಡ್ಡಿ, ಕಲಬುರಗಿಯ ವಿಲಾಸವತಿ ಖೂಬಾ, ಮಕ್ಕಳ ಸಾಹಿತಿ ಏ.ಕೆ.ರಾಮೇಶ್ವರ, ಹಿರಿಯ ಲೇಖಕ ಲಿಂಗಾರೆಡ್ಡಿ ಶೇರಿ ಸೇಡಂ ಹಾಗೂ ರಂಗತಜ್ಞ ಜೀವನರಾಂ ಸುಳ್ಯ ಮೂಡಬಿದಿರೆ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಸಂಚಾಲಕಿ ರತ್ನಕಲಾ ಮಹಿಪಾಲರೆಡ್ಡಿ ಮುನ್ನೂರ್ ತಿಳಿಸಿದ್ದಾರೆ.