ವಾಹನ ಸವಾರರಿಗೆ ಮತ್ತೊಂದು ಶಾಕ್: ಹೀಗೆ ಮಾಡಿದ್ರೆ ಕಂಬಿ ಎಣಿಸೋದು ಗ್ಯಾರಂಟಿ

By Web Desk  |  First Published Jan 11, 2019, 11:09 AM IST

ಸುಪ್ರೀಂ ಕೋರ್ಟ್‌ನಿಂದ ವಾಹನ ಸವಾರರಿಗೆ ಬಿಸಿ| ವಾಹನಗಳ ಬಣ್ಣ, ಸ್ವರೂಪ ಬದಲಾವಣೆ ಶಿಕ್ಷಾರ್ಹ ಅಪರಾಧ: 'ಸುಪ್ರೀಂ' ಆದೇಶ| ಬದಲಿಸಬಹುದು ಎಂಬ ಕೇರಳ ಹೈಕೋರ್ಟ್‌ ಆದೇಶ ರದ್ದು


ನವದೆಹಲಿ[ಜ.11]: ಉತ್ಪಾದಕರು ತಯಾರಿಸಿದ ರೂಪದಲ್ಲೇ ಮೋಟಾರು ವಾಹನಗಳು ಇರಬೇಕು. ವಾಹನಗಳ ಮೂಲಸ್ವರೂಪವನ್ನು ಬದಲಿಸುವಂತಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯ ಬುಧವಾರ ಆದೇಶ ನೀಡಿದೆ.

‘ನೋಂದಣಿಯಾದ ಸಂದರ್ಭದಲ್ಲಿ ಉತ್ಪಾದಕರು ವಾಹನಗಳ ಮೂಲಸ್ವರೂಪದ ಬಗ್ಗೆ ಮಾಹಿತಿ ನೀಡಿರುತ್ತಾರೆ. ಅದೇ ಮೂಲಸ್ವರೂಪದಲ್ಲೇ ವಾಹನಗಳು ಮುಂದೆ ಕೂಡ ಇರಬೇಕು. ವಾಹನದ ವಿನ್ಯಾಸ, ಸ್ವರೂಪ ಬದಲಾವಣೆಗೆ ಅವಕಾಶವಿಲ್ಲ’ ಎಂದು ನ್ಯಾ| ಅರುಣ್‌ ಮಿಶ್ರಾ ಹಾಗೂ ನ್ಯಾ| ವಿನೀತ್‌ ಸರಣ್‌ ಅವರ ಪೀಠ ಹೇಳಿದೆ. 

Tap to resize

Latest Videos

undefined

ಈ ಹಿಂದೆ ಕೇರಳದಲ್ಲಿ ಇದ್ದ ಮೋಟಾರು ವಾಹನ ಕಾಯ್ದೆಯಡಿ, ವಾಹನದ ಮೂಲಸ್ವರೂಪ ಬದಲಾಯಿಸಲು ಅವಕಾಶವಿದೆ ಎಂದು ಕೇರಳ ಹೈಕೋರ್ಟ್‌ ತೀರ್ಪು ನೀಡಿತ್ತು. ಈ ತೀರ್ಪನ್ನು ಸುಪ್ರೀಂ ಕೋರ್ಟು ಬುಧವಾರ ರದ್ದುಗೊಳಿಸಿ, ಈ ಮಹತ್ವದ ಆದೇಶ ಪ್ರಕಟಿಸಿತು.

ಕೇಂದ್ರ ಸರ್ಕಾರ ಜಾರಿಗೆ ತಂದ ಮೋಟಾರು ವಾಹನ ಕಾಯ್ದೆಯಲ್ಲಿ ಮಾಡಲಾದ ತಿದ್ದುಪಡಿಯನ್ನು ಉಲ್ಲೇಖಿಸಿದ ನ್ಯಾಯಪೀಠ, ‘ವಾಹನದ ಮೂಲಸ್ವರೂಪವನ್ನು ಬದಲಿಸಲು ತಿದ್ದಿಪಡಿ ಕಾಯ್ದೆಯಡಿ ನಿರ್ಬಂಧವಿದೆ. ರಸ್ತೆ ಸುರಕ್ಷತೆ, ಪರಿಸರ.. ಮುಂತಾದ ವಿಷಯಗಳನ್ನು ಗಮದಲ್ಲಿ ಇರಿಸಿಕೊಂಡು ನಿಯಮ ಜಾರಿಗೆ ತರಲಾಗಿದೆ’ ಎಂದಿತು.

click me!