ಗರಿಷ್ಠ ಸೂಪರ್ ಕಾರು ಹೊಂದಿದ ನಗರ ಯಾವುದು?

Published : Nov 12, 2018, 05:40 PM IST
ಗರಿಷ್ಠ ಸೂಪರ್ ಕಾರು ಹೊಂದಿದ ನಗರ ಯಾವುದು?

ಸಾರಾಂಶ

ಫೆರಾರಿ, ಲ್ಯಾಂಬೋರ್ಗಿನಿ, ಬುಗಾಟಿ ಸೇರಿದಂತೆ ಹಲವು ದುಬಾರಿ ಬೆಲೆಯ ಸೂಪರ್ ಕಾರುಗಳು ಮಾರುಕಟ್ಟೆಯಲ್ಲಿದೆ. ಹಾಗಾದರೆ ಯಾವ ನಗರದಲ್ಲಿ ಗರಿಷ್ಠ ಸೂಪರ್ ಕಾರು ಇದೆ. ಇಲ್ಲಿದೆ ಹೆಚ್ಚಿನ ಮಾಹಿತಿ.

ಲಂಡನ್(ನ.12): ದುಬೈ ಹಾಗೂ ನ್ಯೂಯಾರ್ಕ್ ಸಿಟಿಗಳಲ್ಲಿ ಸೂಪರ್ ಕಾರುಗಳು ಹೆಚ್ಚಾಗಿ ಕಾಣಸಿಗುತ್ತವೆ. ಆದರೆ ಗರಿಷ್ಠ ಸೂಪರ್ ಕಾರು ಹೊಂದಿದ ವಿಶ್ವದ ಮೊದಲ ನಗರ ಅನ್ನೋ ಹೆಗ್ಗಳಿಕೆ ಲಂಡನ್ ಪಾಲಾಗಿದೆ. ಇನ್‌ಸ್ಟಾಗ್ರಾಂ ಇಮೇಜ್ ಪೋಸ್ಟ್ ಮೂಲಕ ನಡೆಸಿದ ಸಮೀಕ್ಷೆಯಲ್ಲಿ ಗರಿಷ್ಠ ಸೂಪರ್ ಕಾರು ಅಂಕಿ ಅಂಶ ಬಯಲಾಗಿದೆ.

 

 

ಇನ್‌ಸ್ಟಾಗ್ರಾಂ ಫೋಟೋ ಅಧ್ಯಯನದ ವರದಿ ಪ್ರಕಾರ ಲಂಡನ್‌ನಲ್ಲಿ 6.1 ಮಿಲಿಯನ್ ಸೂಪರ್ ಕಾರು ಇಮೇಜ್‌ಗಳು ಅಪ್‌ಲೋಡ್ ಆಗಿವೆ. ಇನ್ನು ಎರಡನೇ ಸ್ಥಾನದಲ್ಲಿರುವ ಮಾಸ್ಕೋ ನಗರದಲ್ಲಿ 5.9 ಮಿಲಿಯನ್ ಹಾಗೂ 3ನೇ ಸ್ಥಾನದಲ್ಲಿರುವ ಲಾಸ್ ಎಂಜಲ್ಸ್ನಲಲ್ಲಿ 4 ಮಿಲಿಯನ್ ಸೂಪರ್ ಕಾರು ಇಮೇಜ್‌ಗಳು ಅಪ್‌ಲೋಡ್ ಆಗಿವೆ.

ನ್ಯೂಯಾರ್ಕ್ ನಗರದಲ್ಲಿ 3.7 ಹಾಗೂ ದುಬೈನಲ್ಲಿ 3.6 ಮಿಲಿಯನ್ ಸೂಪರ್ ಕಾರುಗಳ ಪೋಸ್ಟ್‌ಗಳು ಅಪ್‌ಲೋಡ್ ಆಗಿವೆ. ವಿಶ್ವದಲ್ಲಿ ಒಟ್ಟು ಸೂಪರ್ ಕಾರು ಕುರಿತು 148.1 ಸೂಪರ್ ಕಾರ್ ಪೋಸ್ಟ್‌ಗಳು ಇನ್‌ಸ್ಟಾಗ್ರಾಂನಲ್ಲಿದೆ. ಇನ್‌ಸ್ಟಾಗ್ರಾಂ ಪೋಸ್ಟ್ ಪ್ರಕಾರ ಲಂಡನ್ ಗರಿಷ್ಠ ಸೂಪರ್ ಕಾರು ಹೊಂದಿದ ನಗರ ಅನ್ನೋ ಖ್ಯಾತಿಗೆ ಪಾತ್ರವಾಗಿದೆ. 

PREV
click me!

Recommended Stories

ನಿಯಮಗಳ ಪಾಲಿಸದ ಸ್ಲೀಪರ್ ಬಸ್‌ ಸ್ಥಗಿತ: ಎನ್‌ಎಚ್‌ಆರ್‌ಸಿ
Tata Sierra vs Maruti Grand Vitara : ಯಾವ SUV ಉತ್ತಮ ಎಂಜಿನ್ ಹೊಂದಿದೆ? ಬೆಲೆ, ವೈಶಿಷ್ಟ್ಯ ತಿಳಿಯಿರಿ