ಸಿಂಘಂ ಸಿನಿಮಾ ಸೀನ್ ಮರುಸೃಷ್ಟಿ ಮಾಡಿದ ಪೊಲೀಸ್‌ ಇನ್ಸ್‌ಪೆಕ್ಟರ್‌ಗೆ ಬಿತ್ತು ಬರೆ!

Suvarna News   | Asianet News
Published : May 12, 2020, 06:25 PM IST
ಸಿಂಘಂ ಸಿನಿಮಾ ಸೀನ್ ಮರುಸೃಷ್ಟಿ ಮಾಡಿದ ಪೊಲೀಸ್‌ ಇನ್ಸ್‌ಪೆಕ್ಟರ್‌ಗೆ ಬಿತ್ತು ಬರೆ!

ಸಾರಾಂಶ

ಸಿನಿಮಾಗಳಲ್ಲಿ ಬರವು ಸೀನ್‌ಗಳನ್ನು ಮರುಸೃಷ್ಟಿ ವಿಡಿಯೋ, ಟಿಕ್‌ಟಾಕ್ ವಿಡಿಯೋ ಸೇರಿದಂತೆ ಹಲವು ರೀತಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವನ್ನು ನೋಡಿದ್ದೇವೆ. ಇಷ್ಟೇ ಅಲ್ಲ ಅನಾಹುತಗಳಾಗಿದ್ದು ಗಮನಿಸಿದ್ದೇವೆ. ಇದೀಗ ಪೊಲೀಸ್ ಇನ್ಸ್‌ಪೆಕ್ಟರ್ ಸಿಂಘಂ ಚಿತ್ರದ ಸೀನ್ ಮರುಸೃಷ್ಟಿ ಮಾಡಿ ಪೇಚಿಗೆ ಸಿಲುಕಿದ್ದಾರೆ.

ಮಧ್ಯ ಪ್ರದೇಶ(ಮೇ.12): ಬಾಲಿವುಡ್ ನಿರ್ದೇಶಕ ರೋಹಿತ್ ಶೆಟ್ಟಿ ನಿರ್ದೇಶನದ ಸಿಂಘಂ ಚಿತ್ರದಲ್ಲಿನ  ಕಾರು, ಬೈಕ್ ಮೂಲಕ ಸ್ಟಂಟ್, ಡೈಲಾಗ್ ಜನಪ್ರಿಯವಾಗಿತ್ತು. ಖಡಕ್ ಪೊಲೀಸ್ ಅಧಿಕಾರಿಯ ಈ ಚಿತ್ರ ದೇಶದಲ್ಲೇ ಸಂಚಲನ ಮೂಡಿಸಿತ್ತು. ಬಳಿಕ ಖಡಕ್ ಪೊಲೀಸ್ ಅಧಿಕಾರಿಗಳಿಗೆ ಸಿಂಘಂ ಅಂತಾನೆ ಕರೆಯಲಾಗುತ್ತಿದೆ. ಇದೀಗ ಸಬ್ ಇನ್ಸ್‌ಪೆಕ್ಟರ್ ಇದೇ ಸಿಂಘಂ ಚಿತ್ರದ ಕಾರ್ ಸ್ಟಂಪ್ ಮರುಸೃಷ್ಟಿ ಮಾಡಿ, ಉಗಿಸಿಕೊಂಡಿದ್ದಾರೆ.

ಬಾಸ್ ಫೆರಾರಿ ಕಾರಿನ ಮೇಲೆ ಟ್ರಕ್ ಹತ್ತಿಸಿ ಸೇಡು ತೀರಿಸಿಕೊಂಡ ಉದ್ಯೋಗಿ!

ಮದ್ಯ ಪ್ರದೇಶದ ಸಬ್ ಇನ್ಸ್‌ಪೆಕ್ಟರ್ ಎರಡು ಹೊಂಡಾ ಅಮೇಝ್ ಸೆಡಾನ್ ಕಾರಿನ ಮೇಲೇರಿ ನಿಂತುಕೊಂಡಿದ್ದಾರೆ. ಕಾರು ಮೆಲ್ಲನೆ ಚಲಿಸುತ್ತಿರುವಾಗ ಹೀರೋ ರೀತಿ ಫೋಸ್ ನೀಡಿದ್ದಾರೆ. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಸಬ್ ಇನ್ಸ್‌ಪೆಕ್ಟರ್ ಪೊಲೀಸ್ ಸಮವಸ್ತ್ರದಲ್ಲಿ ಈ ಸ್ಟಂಟ್ ಮಾಡಿದ್ದಾರೆ.

ಸಿಎಂ ಹೆಸರು ಹೇಳಿ ಬೆಂಗಾವಲು ವಾಹನ ಜೊತೆ ಕೇದಾರನಾಥ್ ಪ್ರವಾಸ; ಪೊಲೀಸರ ಅತಿಥಿಯಾದ ಶಾಸಕ!

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗುತ್ತಿದ್ದಂತೆ ಹಿರಿಯ ಪೊಲೀಸ್ ಅಧಿಕಾರಿಗೆ ಅಚ್ಚರಿಯಾಗಿದೆ. ತಮ್ಮ ಇಲಾಖೆಯ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಈ ರೀತಿ ಮಾಡಿರುವುದು ಹಿರಿಯ ಅಧಿಕಾರಿಗಳ ಕಣ್ಣು ಕಂಪಾಗಿಸಿದೆ. ತಕ್ಷಣವೇ ಸಬ್ ಇನ್ಸ್‌ಪೆಕ್ಟರ್ ವಿಡಿಯೋ ಕುರಿತು ತನಿಖೆ ನೆಡಸುವಂತೆ ಸೂಚಿಸಿದ್ದಾರೆ.

ತನಿಖೆ ವೇಳೆ ಸಬ್ ಇನ್ಸ್‌ಪೆಕ್ಟರ್ , ಸ್ಟಂಟ್ ಮಾಡಿ ವಿಡಿಯೋ ಮಾಡಿರುವುದು ಬಯಲಾಗಿದೆ. ಬಳಿಕ ಟ್ರಾಫಿಕ್ ನಿಯಮ ಉಲ್ಲಂಘಿಸಿದ ಸಬ್ ಇನ್ಸ್‌ಪೆಕ್ಟರ್‌ಗೆ 5,000 ರೂಪಾಯಿ ದಂಡ ಹಾಕಿದ್ದಾರೆ. ಇದೀಗ ಈ ರೀತಿ ಸ್ಟಂಟ್ ಮಾಡಿದ ಪೊಲೀಸ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲ ಆಗ್ರಹ ಕೇಳಿ ಬರುತ್ತಿದೆ. ಪೊಲೀಸರೇ ಈ ರೀತಿ ಮಾಡಿದರೆ ವೀಲಿಂಗ್ ಮಾಡುವುದು ತಪ್ಪು ಹೇಗೆ? ಹೀಗಾಗಿ ಶಿಸ್ತು ಕ್ರಮ ಕೈಗೊಳ್ಳುವಂತೆ ಒತ್ತಾಯ ಕೇಳಿ ಬರುತ್ತಿದೆ.

 

PREV
click me!

Recommended Stories

ನಿಯಮಗಳ ಪಾಲಿಸದ ಸ್ಲೀಪರ್ ಬಸ್‌ ಸ್ಥಗಿತ: ಎನ್‌ಎಚ್‌ಆರ್‌ಸಿ
Tata Sierra vs Maruti Grand Vitara : ಯಾವ SUV ಉತ್ತಮ ಎಂಜಿನ್ ಹೊಂದಿದೆ? ಬೆಲೆ, ವೈಶಿಷ್ಟ್ಯ ತಿಳಿಯಿರಿ