ಹೊಚ್ಚ ಹೊಸ Skoda ರ‍್ಯಾಪಿಡ್ TSI ಅಟೊಮ್ಯಾಟಿಕ್ ಕಾರು ಬಿಡುಗಡೆ

By Suvarna News  |  First Published Sep 17, 2020, 5:43 PM IST
  • ಟರ್ಬೋಚಾರ್ಜ್ಡ್  ಸ್ಟ್ರಾಟಿಫೈಡ್ ಇಂಜೆಕ್ಷನ್ ವ್ಯವಸ್ಥೆಯ ಜೊತೆಗೆ ಅಟೊಮ್ಯಾಟಿಕ್ ಟ್ರಾನ್ಸ್‍ಮಿಶನ್
  • ಹೊಸ ರ‍್ಯಾಪಿಡ್ TSI ಅಟೊಮ್ಯಾಟಿಕ್ ಟ್ರಾನ್ಸ್‍ಮಿಶನ್ ಎಕ್ಸ್ ಶೋರೂಮ್ ₹ 9.49 ಲಕ್ಷಗಳಿಂದ ಆರಂಭ 
  • ಈ ಶ್ರೇಣಿಯಲ್ಲಿ ಅತ್ಯಂತ ಕೈಗೆಟಕುವ ಅಟೊಮ್ಯಾಟಿಕ್ ಆಪ್ಷನ್ ಆಗಿರುವ ಹೊಸ ಸ್ಕೋಡಾ ರ‍್ಯಾಪಿಡ್ TSI ಅಟೊಮ್ಯಾಟಿಕ್ ಟ್ರಾನ್ಸ್‍ಮಿಶನ್ ಕಾರು

ಬೆಂಗಳೂರು(ಸೆ.17) : ಸ್ಕೋಡಾ ಅಟೋ ಇಂಡಿಯಾ ಹೊಸ ರ‍್ಯಾಪಿಡ್ TSI ಅಟೊಮ್ಯಾಟಿಕ್ ಟ್ರಾನ್ಸ್‍ಮಿಶನ್ ಅನ್ನು ಬಿಡುಗಡೆಯಾಗಿದೆ. 'ಒಂದು ದೇಶ. ಒಂದು ಬೆಲೆ' ಸಿದ್ಧಾಂತವನ್ನು ಮೂಲಕ  ದೇಶಾದ್ಯಂತ ಒಂದೇ ಬೆಲೆ ನಿಗದಿ ಪಡಿಸಲಾಗಿದೆ.  ನೂತನ ಸ್ಕೋಡಾ ರ‍್ಯಾಪಿಡ್ TSI ಆಟೋಮ್ಯಾಟಿಕ್ ಕಾರಿನ   ಆರಂಬಿಕ ಬೆಲೆ  9.49 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). 

Tap to resize

Latest Videos

undefined

ಕುತೂಹಲ ಕೆರಳಿಸಿದೆ ಸ್ಕೋಡಾ Enyaq iV ಎಲೆಕ್ಟ್ರಿಕ್ ಕಾರು !.

ಹೊಸ ಸ್ಕೋಡಾ ರ‍್ಯಾಪಿಡ್ TSI ಅಟೊಮ್ಯಾಟಿಕ್ ಟ್ರಾನ್ಸ್‍ಮಿಶನ್ ಅತ್ಯಂತ ಹೊಸ TSI ಮಿಲ್ ಮೇಟೆಡ್‌ನಿಂದ ಆರು ಸ್ಪೀಡ್ ಟಾರ್ಕ್ ಕನ್ವರ್ಟರ್ ಆಗಿದೆ. 999 cm3 ಬದಲಿಗೆ, ಮೂರು ಸಿಲಿಂಡರ್‌ನ 1.0 TSI ಪೆಟ್ರೋಲ್ ಇಂಜಿನ್‌ನಲ್ಲಿ 5,000 ಇಂದ 5,500 RPM 110 ಪಿಎಸ್ (81 ಕಿ.ವ್ಯಾ) ಪವರ್ ಒದಗಿಸಲಿದೆ.  1,750 ರಿಂದ 4,000 RPMನಲ್ಲಿ 175 NM ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.  ಹೊಸ ರ‍್ಯಾಪಿಡ್ TSI ಅಟೊಮ್ಯಾಟಿಕ್ ಟ್ರಾನ್ಸ್‍ಮಿಶನ್ ರಿಫೈನ್ಮೆಂಟ್ ಮತ್ತು ದಕ್ಷತೆಗೆ ಸೂಕ್ತವಾಗಿ ಬದಲಾವಣೆಗೆ ಒಳಪಟ್ಟಿದೆ. ಅಲ್ಲದೆ, ಕಾರ್ಯಕ್ಷಮತೆಯೂ ಉತ್ತಮವಾಗಿದೆ. ಸ್ಕೋಡಾ ಅಟೋ ಗ್ರಾಹಕರ ನಗರ ಜೀವನ ಶೈಲಿಗೆ ಇದು ಸೂಕ್ತವಾಗಿ ಹೊಂದುತ್ತದೆ.

ಸ್ಕೋಡಾ ಕಾರೋಖ್ ಕ್ರಾಸ್ ಓವರ್ SUV ಕಾರು ಬಿಡುಗಡೆ; ಹತ್ತು ಹಲವು ವಿಶೇಷತೆ!

ಇಂಧನ ದಕ್ಷತೆಯೂ ತುಂಬಾ ಉತ್ತಮವಾಗಿದೆ. ಹೊಸ ಸ್ಕೋಡಾ ರ‍್ಯಾಪಿಡ್ TSI ಅಟೊಮೇಶನ್ ಟ್ರಾನ್ಸ್‍ಮಿಶನ್ ಆರು ಸ್ಪೀಡ್ ಟಾರ್ಕ್ ಕನ್ವರ್ಟರ್ ಹೊಂದಿದೆ. ಪ್ರಮಾಣಿತ ಟೆಸ್ಟ್ ಕಂಡೀಷನ್ಗಳಲ್ಲಿ 16.24 ಕಿ.ಮೀ ಪ್ರತಿ ಲೀ. ಅನ್ನು ಒದಗಿಸುತ್ತದೆ. ಈ ಹಿಂದೆ ಇದ್ದ 1.6 MPI ಇಂಜಿನ್‌ಗೆ ಹೋಲಿಸಿದರೆ, ಹೊಸ ಸ್ಕೋಡಾ ರ‍್ಯಾಪಿಡ್ TSI ಶೇ. 5 ರಷ್ಟು ಹೆಚ್ಚು ಪವರ್ ಮತ್ತು ಶೇ. 14 ರಷ್ಟು ಹೆಚ್ಚು ಟಾರ್ಕ್ ಒದಗಿಸುತ್ತದೆ. ಇದೇ ಸಮಯದಲ್ಲಿ, ಹೊಸ ಸ್ಕೂಡಾ ರ‍್ಯಾಪಿಡ್ TSI  ಅಟೊಮ್ಯಾಟಿಕ್ ಟ್ರಾನ್ಸ್‌ಮಿಶನ್, ಹಿಂದಿನ ಮೋಟಾರಿಗೆ ಹೋಲಿಸಿದರೆ ಇಂಧನ ದಕ್ಷತೆಯಲ್ಲಿ ಶೇ. 9 ರಷ್ಟು ಹೆಚ್ಚಳವನ್ನು ಒದಗಿಸುತ್ತದೆ.

 ಸ್ಕೋಡಾ ಅಟೋ ಇಂಡಿಯಾದ ಬ್ರಾಂಡ್ ನಿರ್ದೇಶಕ ಝಾಕ್ ಹೋಲಿಸ್ ಹೇಳುವಂತೆ, ರಿಫ್ರೆಶ್ ಮಾಡಿದ ಸ್ಕೋಡಾ ರ‍್ಯಾಪಿಡ್ TSI ಶ್ರೇಣಿಯಲ್ಲಿ ಆರು ಸ್ಪೀಡ್‌ನ ಅಟೊಮ್ಯಾಟಿಕ್ ಟ್ರಾನ್ಸ್‍ಮಿಶನ್ ಅನ್ನು ಪರಿಚಯಿಸಿರುವುದರಿಂದ, ಈ ಸೆಗ್ಮೆಂಟ್ನಲ್ಲಿ ಮಾನದಂಡವನ್ನು ಝೆಕ್ ಬ್ರಾಂಡ್ ಏರಿಕೆ ಮಾಡಿದೆ. ಇದು ವಿಶ್ವಾಸಾರ್ಹ ತಂತ್ರಜ್ಞಾನವಾಗಿದ್ದು, ಡೈನಾಮಿಕ್ ಡ್ರೈವ್ ಅನುಭವವನ್ನು ಒದಗಿಸುತ್ತದೆ ಮತ್ತು ಈ ಶ್ರೇಣಿಯಲ್ಲಿ ಉತ್ತಮ ಮಾರಾಟ ಕಾಣುತ್ತಿದೆ."

ಟರ್ಬೋಚಾರ್ಜ್ಡ್  ಸ್ಟ್ರಾಟಿಫೈಡ್ ಇಂಜೆಕ್ಷನ್ ವ್ಯವಸ್ಥೆಯ ಜೊತೆಗೆ ಅಟೊಮ್ಯಾಟಿಕ್ ಟ್ರಾನ್ಸ್‍ಮಿಶನ್
ಹೊಸ ರ‍್ಯಾಪಿಡ್ TSI ಅಟೊಮ್ಯಾಟಿಕ್ ಟ್ರಾನ್ಸ್‍ಮಿಶನ್ ಎಕ್ಸ್ ಶೋರೂಮ್ ₹ 9.49 ಲಕ್ಷಗಳಿಂದ ಆರಂಭ 
ಈ ಶ್ರೇಣಿಯಲ್ಲಿ ಅತ್ಯಂತ ಕೈಗೆಟಕುವ ಅಟೊಮ್ಯಾಟಿಕ್ ಆಪ್ಷನ್ ಆಗಿರುವ ಹೊಸ ಸ್ಕೋಡಾ ರ‍್ಯಾಪಿಡ್ TSI ಅಟೊಮ್ಯಾಟಿಕ್ ಟ್ರಾನ್ಸ್‍ಮಿಶನ್ ಕಾರು
ಉತ್ತಮ ಟಾರ್ಕ್ ಹೊಂದಿರುವುದರಿಂದ ಡ್ರೈವ್ ಮಾಡಲು ಖುಷಿಯ ಅನುಭವ
ಹೊಸ ರ‍್ಯಾಪಿಡ್ TSIನಲ್ಲಿ ಪರಿಚಯಿಸಲಾಗಿರುವ 1.0 ಟಿಎಸ್‍ಐ ಇಂಜಿನ್, ಸ್ಕೋಡಾದ ಬಿಎಸ್ 4 ಪವಟ್ರ್ರೇನ್ ಮತ್ತು ಫ್ಯೂಯೆಲ್ ಸ್ಟ್ರಾಟಜಿಗೆ ಪ್ರಮುಖವಾಗಿದೆ
ಆರು ಸ್ಪೀಡ್ನ ಟಾರ್ಕ್ ಕನ್ವರ್ಟನಿರ್ಂದ, ಇದು ಅದ್ಭುತ ಪವರ್ [110 ಪಿಎಸ್] ಮತ್ತು ಫ್ಯೂಯೆಲ್ ಎಕಾನಮಿ ಪ್ರ. ಕಿ.ಮೀಗೆ [16.24 ಒದಗಿಸುತ್ತದೆ]

click me!