ಹೆಲ್ಮೆಟ್‌ ಧರಿಸದ 43,600 ಬೈಕ್ ಸವಾರರು ಸಾವು!

By Web DeskFirst Published Sep 18, 2019, 8:47 AM IST
Highlights

ಹೆಲ್ಮೆಟ್‌ ಧರಿಸದ 43,600 ದ್ವಿಚಕ್ರ ವಾಹನ ಸವಾರರು ಸಾವು|  15,360 ಹಿಂಬದಿ ಸವಾರರು ಕೂಡಾ ಸಾವು| ಸೀಟ್‌ ಬೆಲ್ಟ್‌ ಧರಿಸದ್ದಕ್ಕೆ 24,400 ಮಂದಿ ಬಲಿ!

ನವದೆಹಲಿ[ಸೆ.18]: ನೂತನ ಮೋಟಾರ್‌ ವಾಹನ ಕಾಯ್ದೆ ಜಾರಿ ಬಳಿಕ ಕೆಲ ರಾಜ್ಯಗಳು ದಂಡದ ಪ್ರಮಾಣವನ್ನು ಇಳಿಸುವ ನಿರ್ಧಾರ ಕೈಗೊಂಡಿವೆ. ಗುಜರಾತ್‌ ಹಾಗೂ ಜಾರ್ಖಂಡ್‌ ಸರ್ಕಾರಗಳು ಹೆಲ್ಮೆಟ್‌ ಧರಿಸದ ಹಿಂಬದಿಯ ಸವಾರರಿಗೆ ದಂಡದಿಂದ ವಿನಾಯಿತಿ ನೀಡಿವೆ. ಆದರೆ, ಹೆಲ್ಮೆಟ್‌ ಧರಿಸದೇ ವಾಹನ ಚಾಲನೆ ಎಷ್ಟುಅಪಾಯಕಾರಿ ಎಂಬುದನ್ನು ರಾಜ್ಯ ಸರ್ಕಾರಗಳು ಬಿಡುಗಡೆ ಮಾಡಿರುವ ಅಂಕೆ ಸಂಖ್ಯೆಗಳೇ ಸಾರಿ ಹೇಳುತ್ತಿವೆ.

2018ರಲ್ಲಿ ದೇಶದೆಲ್ಲೆಡೆ ಹೆಲ್ಮೆಟ್‌ ಧರಿಸದ ಸುಮಾರು 43,600 ದ್ವಿಚಕ್ರ ವಾಹನ ಸವಾರರು ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪಿದ್ದಾರೆ. ಈ ಪ್ರಮಾಣ 2017ರಲ್ಲಿ ಆದ 35,975 ಸಾವಿಗೆ ಹೋಲಿಸಿದರೆ ಶೇ.21ರಷ್ಟುಅಧಿಕ. ಅಲ್ಲದೇ 2018ರಲ್ಲಿ ಹೆಲ್ಮೆಟ್‌ ಧರಿಸದ 15,360 ಹಿಂಬದಿ ಸವಾರರು ಕೂಡ ಸಾವಿಗೀಡಾಗಿದ್ದಾರೆ.

ಹೆಲ್ಮೆಟ್‌ ರಹಿತ ವಾಹನ ವಾಹನ ಸವಾರರ ಸಾವಿನ ಸಂಖ್ಯೆಯಲ್ಲಿ ಉತ್ತರ ಪ್ರದೇಶ ಮೊದಲ ಸ್ಥಾನದಲ್ಲಿದ್ದು, 2018ರಲ್ಲಿ 6,020 ಮಂದಿ ಸಾವಿಗೀಡಾಗಿದ್ದಾರೆ. ಮಹಾರಾಷ್ಟ್ರದಲ್ಲಿ 5,232 ಮಂದಿ, ತಮಿಳುನಾಡಿನಲ್ಲಿ 5,048 ಮಂದಿ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್‌ ಧರಿಸದೇ ಇರುವ ಕಾರಣಕ್ಕೆ ಪ್ರಾಣ ಕಳೆದುಕೊಂಡಿದ್ದಾರೆ.

ಇನ್ನು ದಂಡದ ಪ್ರಮಾಣವನ್ನು ಇಳಿಕೆ ಮಾಡಿರುವ ಗುಜರಾತಿನಲ್ಲಿ ಕಳೆದ ವರ್ಷ ಹೆಲ್ಮೆಟ್‌ ಧರಿಸದೇ ಇದ್ದಿದ್ದಕ್ಕೆ 958 ದ್ವಿಚಕ್ರ ವಾಹನ ಸವರರು ಹಾಗೂ ಹಿಂಬದಿಯಲ್ಲಿ ಕುಳಿತ 560 ಮಂದಿ ಸಾವನ್ನಪ್ಪಿದ್ದಾರೆ.

ಕಾರು ಚಲಾಯಿಸುವಾಗ ಸೀಟ್‌ ಬೆಲ್ಟ್‌ ಧರಿಸದೇ ಇದ್ದ ಕಾರಣಕ್ಕೆ ಕಳೆದ ವರ್ಷ ದೇಶದೆಲ್ಲೆಡೆ 24,400ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ವರದಿಗಳು ತಿಳಿಸಿವೆ.

click me!