ನವದೆಹಲಿ (ಸೆ.17): ಬಹುನಿರೀಕ್ಷಿತ ಓಲಾ ಎಲೆಕ್ಟ್ರಿಕ್ ಸ್ಕೂಟರ್‌ನ ಮಾರಾಟ ಪ್ರಕ್ರಿಯೆ ಆರಂಭವಾದ ಬುಧವಾರ ಒಂದೇ ದಿನ ಸುಮಾರು 600 ಕೋಟಿ ರು. ಮೌಲ್ಯದ 80000ಕ್ಕೂ ಹೆಚ್ಚು ಸ್ಕೂಟರ್‌ಗಳು ಮಾರಾಟವಾಗಿವೆ.
ಕಂಪನಿ ತನ್ನ ಎಸ್-1 ಮಾದರಿಯ ಸ್ಕೂಟರ್ ಅನ್ನು ಸೆ.15 ಮತ್ತು 16ರಂದು ಆನ್‌ಲೈನ್ ಮೂಲಕ ಖರೀದಿಗೆ ಅವಕಾಶ ಕಲ್ಪಿಸಿತ್ತು. ಈ ಮೊದಲು 499 ರು. ಕೊಟ್ಟು ಬುಕ್ ಮಾಡಿದವರು, 20000 ರು. ಪಾವತಿಸಿ ಸ್ಕೂಟರ್ ಖರೀದಿಗೆ ಅವಕಾಶ ಕಲ್ಪಿಸಲಾಗಿತ್ತು.
undefined
ಅದರಂತೆ ಮೊದಲ ದಿನ ಗ್ರಾಹಕರಿಂದ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸೆಕೆಂಡ್‌ಗೆ 4 ಸ್ಕೂಟರ್‌ಗಳು ಮಾರಾಟವಾಗಿದೆ ಎಂದು ಓಲಾ ಇಲೆಕ್ಟ್ರಿಕ್ ಸಂಸ್ಥೆಯ ಸಿಇಒ ಭವೀಶ್ ಅಗರವಾಲ್ ಹೇಳಿದ್ದಾರೆ.
ಚೆನ್ನೈ, ಹೈದ್ರಾಬಾದ್‌ನಲ್ಲೂ ಬಜಾಜ್ ಚೇತಕ್ ಇ ಸ್ಕೂಟರ್
‘ ಪ್ರಪಂಚದ ಇತಿಹಾಸದಲ್ಲೇ ದ್ವಿಚಕ್ರ ವಾಹನವೊಂದು ಒಂದೇ ದಿನದಲ್ಲಿ ಅತಿ ಹೆಚ್ಚು ವಾಹನಗಳನ್ನು ಮಾರಾಟ ಮಾಡಿ ದಾಖಲೆ ನಿರ್ಮಿಸಿದೆ. ಭಾರತವು ಇಲೆಕ್ಟ್ರಿಕ್ ವಾಹನಗಳನ್ನು ಒಪ್ಪಿಕೊಂಡು ಪೆಟ್ರೋಲ್ ವಾಹನವನ್ನು ತಿರಸ್ಕರಿಸಿದೆ ಎನ್ನುವುದಕ್ಕೆ ಇದು ಉತ್ತಮ ಉದಾಹರಣೆ. ಗುರುವಾರ ಪೀಕ್ ಸಮಯದಲ್ಲಿ ಸೆಕೆಂಡ್‌ಗೆ 4 ಸ್ಕೂಟರ್‌ನಂತೆ ಮಾರಾಟ ಮಾಡಲಾಗಿದೆ ಎಂದು ಅಗರ್‌ವಾಲ್ ಟ್ವೀಟ್ ಮಾಡಿದ್ದಾರೆ. ಓಲಾ ಇಲೆಕ್ಟ್ರಿಕ್ ಎರಡು ಮಾದರಿಯಲ್ಲಿ ಸ್ಕೂಟರ್‌ಗಳನ್ನು ಬಿಡುಗಡೆ ಮಾಡಿದ್ದು ಎಸ್-1 ಬೆಲೆ 99,999 ಆಗಿದ್ದು, ಎಸ್-1 ಪ್ರೋ ಬೆಲೆ 1.29 ಲಕ್ಷ ಬೆಲೆ ಹೊಂದಿದೆ.