ನೆಲಕ್ಕೆ ಬಿದ್ದ ರಾಯಲ್ ಎನ್‌ಫೀಲ್ಡ್ ಬೈಕ್ ಸುಲಭವಾಗಿ ಎತ್ತಲು ಇಲ್ಲಿದೆ ಟಿಪ್ಸ್!

Published : Feb 13, 2019, 10:30 AM ISTUpdated : Feb 13, 2019, 11:06 AM IST
ನೆಲಕ್ಕೆ ಬಿದ್ದ ರಾಯಲ್ ಎನ್‌ಫೀಲ್ಡ್ ಬೈಕ್ ಸುಲಭವಾಗಿ ಎತ್ತಲು ಇಲ್ಲಿದೆ ಟಿಪ್ಸ್!

ಸಾರಾಂಶ

ನೆಲಕ್ಕೆ ಬಿದ್ದ ರಾಯಲ್ ಎನ್‌ಫೀಲ್ಡ್ ಅಥವಾ ಯಾವುದೇ ಭಾರದ ಬೈಕ್ ಎತ್ತುವುದು ಅತೀ ದೊಡ್ಡ ಸಾಹಸ. ಈ ಸಂದರ್ಭದಲ್ಲಿ ಬೆನ್ನು ನೋವು ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು.  ನೂತನ ವಿಧಾನದ ಮೂಲಕ, ಯಾರ ಸಹಾಯವೂ ಇಲ್ಲದೆ ಬೈಕ್ ಎತ್ತಬಹುದು.

ಬೆಂಗಳೂರು(ಫೆ.13): ರಾಯಲ್ ಎನ್‌ಫೀಲ್ಡ್, ಹಾರ್ಲೆ ಡೇವಿಡ್ಸನ್ ಸೇರಿದಂತೆ ಹೆಚ್ಚಿನ ಸಿಸಿ ಎಂಜಿನ್ ಹೊಂದಿರುವ ಬೈಕ್‌ಗಳನ್ನು ಎಲ್ಲರೂ ಇಷ್ಟಪಡುತ್ತಾರೆ. ಆದರೆ ಈ ಬೈಕ್ ನಿಲ್ಲಿಸುವ ವೇಳೆ ಅಥವಾ ಇನ್ಯಾವುದೋ ಕಾರಣದಿಂದ ನೆಲಕ್ಕೆ ಬಿದ್ದಲ್ಲಿ, ಭಾರ ಇರೋ ಈ ಬೈಕ್‌ಗಳನ್ನ ಮೇಲಕ್ಕೆತ್ತುವುದೇ ಅತೀ ದೊಡ್ಡ ಸಮಸ್ಯೆ. ಹೆಚ್ಚಿನ ಸಂದರ್ಭಗಳಲ್ಲಿ ಸಹಾಯಕ್ಕೆ ಯಾರು ಇರುವುದಿಲ್ಲ. ಆದರೆ ನೆಲಕ್ಕೆ ಬಿದ್ದಿರುವ ಬೈಕ್ ಸುಲಭವಾಗಿ ಎತ್ತಲು ಹಲವು ವಿಧಾನಗಳಿದೆ.

ಇದನ್ನೂ ಓದಿ: ಕಾರು ಡ್ರೈವಿಂಗ್ ವೇಳೆ ಗಮನದಲ್ಲಿರಲಿ 5 ಅಂಶ - ನಿರ್ಲಕ್ಷ್ಯಿಸಿದರೆ ಅಪಾಯ!

ಸಾಮಾನ್ಯವಾಗಿ ಬೈಕ್ ನೆಲಕ್ಕೆ ಉರಳಿದರೆ 2 ವಿಧಾನಗಳಲ್ಲಿ ಪ್ರಯತ್ನ ಮಾಡುತ್ತೇವೆ. ಆದರೆ ಈ ರೀತಿ ಬೈಕ್ ಎತ್ತುವುದರಿಂದ ಬೆನ್ನು ನೋವು ಕಾಣಿಸಿಕೊಳ್ಳಬಹುದು. ಬೈಕ್ ಮೇಲಕ್ಕೆ ಎತ್ತುವ ಸಂದರ್ಭದಲ್ಲಿ ಭಾರವಾಗಿ ಮತ್ತೆ ಕಾಲಿಗೆ ಅಥವಾ ಇನ್ಯಾವುದೇ ಭಾಗಕ್ಕೆ ಬಿದ್ದು ಗಾಯಗಳಾಗೋ ಸಾಧ್ಯತೆ ಇದೆ. ಆದರೆ ಸುಲಭವಾಗಿ ಎತ್ತುವ ವಿಧಾನ ಈ ಕೆಳಗಿನ ವಿಡಿಯೋದಲ್ಲಿ ವಿವರಿಸಲಾಗಿದೆ.

ಇದನ್ನೂ ಓದಿ: ಹೊತ್ತಿ ಉರಿಯಿತು ಚಲಿಸುತ್ತಿದ್ದ ಬೈಕ್ - ತನಿಖೆಗೆ ಮುಂದಾದ ಕಂಪೆನಿ!

ಯಾವುದೇ ಬೈಕ್ ಆಗಿರಲಿ, ಈ ರೀತಿ ಹಿಮ್ಮುಖವಾಗಿ ಮೇಲಕ್ಕೆತ್ತುವುದು ಸುಲಭ. ಇದರಿಂದ ಬೈಕ್ ಎತ್ತುವ ವ್ಯಕ್ತಿಗೆ ಆಗಲಿ ಆಥವಾ ಬೈಕ್‌ಗೆ ಆಗಲಿ ಯಾವುದೇ ಸಮಸ್ಯೆ ಇರುವುದಿಲ್ಲ. ಈ ಮೂಲಕ ಯಾರ ಸಹಾಯವೂ ಇಲ್ಲದೆ ನೆಲಕ್ಕೆ ಬಿದ್ದ ಬೈಕ್ ಸುಲಭವಾಗಿ ಮೇಲಕ್ಕೆತ್ತಬಹುದು.

PREV
click me!

Recommended Stories

ಕಾಂತಾರ ನಟನಿಗೆ ದೈವದ ಅಭಯ, 1.5 ಕೋಟಿ ರೂ ವೆಲ್‌ಫೈರ್ ಕಾರಿನಲ್ಲಿ ಕಾಣಿಸಿಕೊಂಡ ರಿಷಬ್ ಶೆಟ್ಟಿ
ನಿಯಮಗಳ ಪಾಲಿಸದ ಸ್ಲೀಪರ್ ಬಸ್‌ ಸ್ಥಗಿತ: ಎನ್‌ಎಚ್‌ಆರ್‌ಸಿ