ಡುಕಾಟಿ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ-75 ಕಿ.ಮೀ ಮೈಲೇಜ್!

Published : May 18, 2019, 06:31 PM IST
ಡುಕಾಟಿ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ-75 ಕಿ.ಮೀ ಮೈಲೇಜ್!

ಸಾರಾಂಶ

ದುಬಾರಿ ಬೈಕ್‌ಗೆ ಹೆಸರುವಾಸಿಯಾಗಿರುವ ಡುಕಾಟಿ ಇದೀಗ ಸ್ಕೂಟರ್ ಬಿಡುಗಡೆ ಮಾಡಿದೆ.  ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿರುವ ಡುಕಾಟಿ ಹಲವು ವಿಶೇಷತೆಗಳನ್ನೂ ನೀಡಿದೆ. ಇಲ್ಲಿದೆ ಇದರ ಬೆಲೆ ಹಾಗೂ ಇತರ ಮಾಹಿತಿ.  

ಇಟೆಲಿ(ಮೇ.18): ದುಬಾರಿ ಬೈಕ್‌ಗಳಲ್ಲಿ ಡುಕಾಟಿ ಮುಂಚೂಣಿಯಲ್ಲಿದೆ. ಇದೀಗ ಡುಕಾಟಿ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದೆ. ಒಂದು ಬಾರಿ ಚಾರ್ಜ್ ಮಾಡಿದರೆ 75 ಕಿ.ಮೀ ಮೈಲೇಜ್ ರೇಂಜ್ ನೀಡಲಿದೆ. ಈ ಮೂಲಕ ಇಟಲಿ ಮೂಲದ ಡುಕಾಟಿ ಇದೀಗ ಎಲೆಕ್ಟ್ರಿಕ್ ಸ್ಕೂಟರ್ ಕ್ಷೇತ್ರಕ್ಕೆ ಕಾಲಿಟ್ಟಿದೆ.  

ನೂತನ ಡುಕಾಟಿ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ 2,299 ಪೌಂಡ್. ಅಂದರೆ ಇಂದಿನ ಭಾರತೀಯ ಬೆಲೆಗೆ ಪರಿವರ್ತಿಸಿದರೆ 2.05 ಲಕ್ಷ ರೂಪಾಯಿ. ನೂತನ ಸ್ಕೂಟರ್ ಗರಿಷ್ಠ ಸ್ಪೀಡ್ 45 ಕಿ.ಮೀ ಪ್ರತಿ ಗಂಟೆಗೆ. ಆಧುನಿಕ ತಂತ್ರಜ್ಞಾನ ಬಳಸಲಾಗಿದೆ. 

ಫ್ರಂಟ್ ಹಾಗೂ ರೇರ್ 180mm ಡಿಸ್ಕ್ ಬ್ರೇಕ್ ಹೊಂದಿದೆ. 1,300 W  ಎಲೆಕ್ಟ್ರಿಕ್ ಮೋಟಾರ್ ಹಾಗೂ 30 Ah (60V) ಲಿ-ಐಯಾನ್ ಬ್ಯಾಟರಿ ಹೊಂದಿದೆ. ಬ್ಯಾಟರಿ ಸಂಪೂರ್ಣ ಚಾರ್ಜ್‌ಗೆ 7 ರಿಂದ 8 ಗಂಟೆ ಸಮಯ ತೆಗೆದುಕೊಳ್ಳುತ್ತೆ. 
 

PREV
click me!

Recommended Stories

ನಿಯಮಗಳ ಪಾಲಿಸದ ಸ್ಲೀಪರ್ ಬಸ್‌ ಸ್ಥಗಿತ: ಎನ್‌ಎಚ್‌ಆರ್‌ಸಿ
Tata Sierra vs Maruti Grand Vitara : ಯಾವ SUV ಉತ್ತಮ ಎಂಜಿನ್ ಹೊಂದಿದೆ? ಬೆಲೆ, ವೈಶಿಷ್ಟ್ಯ ತಿಳಿಯಿರಿ