ವೀಡಿಯೋ ಎಲ್ಲಿಯದ್ದೋ ಗೊತ್ತಿಲ್ಲ, ಸಾವಿಗೂ ಅಂಜದೇ ಹೇಗೆ ಯೂ ಟರ್ನ್‌ ತಗೊಂಡ ಚಾಲಕ

By Suvarna NewsFirst Published Jan 24, 2022, 3:34 PM IST
Highlights

ಕಡಿದಾದ ರಸ್ತೆಯೊಂದರಲ್ಲಿ ಚಾಲಕನೊಬ್ಬ ಕಾರನ್ನು ಯೂ ಟರ್ನ್ ತೆಗೆದುಕೊಂಡ ವೀಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ಕಾರು ಚಾಲಕ ಯಾರು, ವೀಡಿಯೋ ಎಲ್ಲಿಯದು ಎಂಬ ಬಗ್ಗೆ ಹೆಚ್ಚಿನ ಮಾಹಿತಿ ಸಿಕ್ಕಿಲ್ಲ. ಆದರೆ, ಯೂ ಟ್ಯೂಬಲ್ಲಿ ಇದರ ಮೂಲ ವೀಡಿಯೋ ಸಿಕ್ಕಿದೆ. ಒಟ್ಟಿನಲ್ಲಿ ಈ ವೀಡಿಯೋ ವೈರಲ್ ಆಗುತ್ತಿದೆ.
 

ವಾಹನ ಚಾಲನೆ ಒಂದು ಕಲೆ... ಸುಗಮವಾದ ರಸ್ತೆಯಲ್ಲಿ ಎಲ್ಲರೂ ತಮಗೆ ಬೇಕಾದಂತೆ ಹೋಗುವುದು ಸಾಮಾನ್ಯ. ಆದರೆ ದುರ್ಗಮ ಹಾಗೂ ಕಡಿದಾದ ರಸ್ತೆಯಲ್ಲಿ ವಾಹನ ಚಾಲನೆ ನಡೆಸಬೇಕೆಂದರೆ ಅನುಭವದ ಜೊತೆ ಚಾಣಾಕ್ಷತನವೂ ಬೇಕು. ಇಲ್ಲೊಬ್ಬ ಚಾಲಕನನ್ನು ನೋಡಿ ಹೇಗೆ ಆತ ಸಾವಿಗೂ ಅಂಜದೇ ತನ್ನ ಕಾರನ್ನು ಯೂ ಟರ್ನ್‌ ಮಾಡಿದ ಎಂದು. ಕಾರು ಚಾಲಕನ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಮೈ ಜುಮ್ಮೆನಿಸುವಂತಿದೆ. ಆದರೆ ಹೀಗೆ ಸಾಹಸ ಮಾಡಿದ ಸಾಹಸಿ ಕಾರು ಚಾಲಕ ಯಾರು ಎಂಬ ಬಗ್ಗೆ ಎಲ್ಲೂ ಉಲ್ಲೇಖವಿಲ್ಲ. 

ಗುಡ್ಡ ಬೆಟ್ಟವಿರುವ ದುರ್ಗಮ ಹಾದಿಯಲ್ಲಿ ಕಾರು ಇದ್ದು, ಕಾರಿನ ಚಾಲಕ ಅದನ್ನು ಚಾಣಾಕ್ಷತನದಿಂದ ಯಾವುದೇ ಅಪಾಯವಾಗದಂತೆ ಯೂ ಟರ್ನ್‌ ಮಾಡುತ್ತಿರುವುದನ್ನು ಕಾಣಬಹುದು. ಆಶ್ಚರ್ಯಕರ ಸಂಗತಿಯೆಂದರೆ, ಈ ಕಾರು ಯು-ಟರ್ನ್ ತೆಗೆದುಕೊಳ್ಳುತ್ತಿರುವ ರಸ್ತೆಯ ಅಗಲವು ಕಾರಿನ ಉದ್ದಕ್ಕಿಂತಲೂ ಕಡಿಮೆಯಾಗಿದೆ. ಅಲ್ಲದೇ ಒಂದು ಕಡೆ ಬೆಟ್ಟವಿದ್ದರೆ ಮತ್ತೊಂದು ಕಡೆ ಪ್ರಪಾತವಿದೆ. ಅದೇನೇ ಇದ್ದರೂ, ಕಾರಿನ ಚಾಲಕ ಅದ್ಭುತವಾಗಿ ಕಾರನ್ನು ಇನ್ನೊಂದು ಬದಿಗೆ ತಿರುಗಿಸುವುದು ನೋಡಿದರೆ ಈತನಿಗೆ ಏಳು ಗುಂಡಿಗೆ ಇರಬೇಕು ಎಂದು ಅನಿಸದೇ ಇರದು. 

The perfect 80 point turn! pic.twitter.com/bLzb1J1puU

— Dr. Ajayita (@DoctorAjayita)

ಈ ವೀಡಿಯೊ ನೋಡುಗರನ್ನೇ ತುದಿಗಾಲಲ್ಲಿ ನಿಲ್ಲುವಂತೆ ಮಾಡುತ್ತಿದೆ. ಅಲ್ಲದೇ ಸಾಮಾಜಿಕ ಮಾಧ್ಯಮದಲ್ಲಿ ವೇಗವಾಗಿ ವೈರಲ್ ಆಗುತ್ತಿದೆ. ಜೊತೆಗೆ ಈ, ವೀಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅನೇಕರು ಶೇರ್ ಮಾಡುತ್ತಿದ್ದಾರೆ. ಆದರೆ ಈ ವೀಡಿಯೋ ಎಲ್ಲಿಂದ ಬಂದಿದೆ ಮತ್ತು ಚಾಲಕ ಯಾರು ಎಂಬುದು ಇನ್ನೂ ಪತ್ತೆಯಾಗಿಲ್ಲ. ಆದರೆ, ನೀಲಿ ಬಣ್ಣದ ಕಾರು ಅತ್ಯಂತ ಕಿರಿದಾದ ಬೆಟ್ಟದ ಹಾದಿಯಲ್ಲಿ ಕಾಣಿಸಿಕೊಂಡು ಅಲ್ಲಿ ಯು-ಟರ್ನ್ ತೆಗೆದುಕೊಳ್ಳುವುದನ್ನು ವೀಡಿಯೊ ಸ್ಪಷ್ಟವಾಗಿ ತೋರಿಸುತ್ತದೆ. ಏತನ್ಮಧ್ಯೆ, ಕಾರಿನ ಒಂದು ಬದಿಯಲ್ಲಿ ಆಳವಾದ ಕಂದಕ ಗೋಚರಿಸಿದರೆ, ಇನ್ನೊಂದು ಬದಿಯಲ್ಲಿ ಕಲ್ಲು ಇದೆ. ಕಾರಿನ ಮೇಲೆ ಚಾಲಕನ ನಿಯಂತ್ರಣ ಹೇಗೆ ಸಾಧಿಸಿದ್ದಾನೆ ಎಂದರೆ ಆತನ ಮನದ ಇಚ್ಛೆಯಂತೆ ಕಾರು ವರ್ತಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.

ಮೈ ಕೊರೆಯುವ ಹಿಮದಲ್ಲಿ 40 ಸೆಕೆಂಡ್‌ನಲ್ಲಿ 47 ಫುಶ್‌ಅಪ್ ಹೊಡೆದ ಯೋಧ

ಚಾಲಕನ್ನು ಸ್ಟೇರಿಂಗ್ ಚಕ್ರದೊಂದಿಗೆ ವೇಗವರ್ಧಕವನ್ನು ತುಂಬಾ ಚಾಣಾಕ್ಷತನದಿಂದ ನಿಭಾಯಿಸುತ್ತಾನೆ. , ಕ್ಲಚ್ ಮತ್ತು ಬ್ರೇಕ್‌ಗಳನ್ನು ಚೆನ್ನಾಗಿ ನಿಯಂತ್ರಿಸುತ್ತಾನೆ. ನಂತರ ಅವನು ಮೊದಲು ಕಾರನ್ನು ಕೆಲವು ಇಂಚುಗಳಷ್ಟು ಹಿಂದಕ್ಕೆ ತೆಗೆದುಕೊಂಡು ನಂತರ ಅದನ್ನು ಮುಂದಕ್ಕೆ ತೆಗೆದುಕೊಂಡು ಅದನ್ನು ಮತ್ತೆ ಮುಂದಕ್ಕೆ ತಿರುಗಿಸುತ್ತಾನೆ ಮತ್ತು ತಕ್ಷಣವೇ ಕಾರು ಪೂರ್ಣ ತಿರುವು ತೆಗೆದುಕೊಂಡು  ಯು-ಟರ್ನ್ ತೆಗೆದುಕೊಳ್ಳುತ್ತದೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಚಾಲಕನ ಕುರಿತು ಚರ್ಚೆ ನಡೆಯುತ್ತಿದ್ದು, ವಿಡಿಯೋ ನೋಡಿದ ಜನರು ಅಚ್ಚರಿಗೊಂಡಿದ್ದಾರೆ. ವೀಡಿಯೊವನ್ನು ಹಂಚಿಕೊಂಡ ನೆಟ್ಟಿಗರು 'ಇದು 80 ಪಾಯಿಂಟ್ ಟರ್ನ್‌ನ ಪರಿಪೂರ್ಣ ಮಾದರಿಯಾಗಿದೆ ಎಂದು ಹೇಳಿದ್ದಾರೆ.

Electric Vehicle ಎಲೆಕ್ಟ್ರಿಕ್ ವಾಹನ ಪ್ರಯೋಗ ಆರಂಭಿಸಿದ ದೇಶದ ಅತೀದೊಡ್ಡ ಎಕ್ಸ್‌ಪ್ರೆಸ್ ಸಾರಿಗೆ!

FedEx Express ವಿಶ್ವದ ಅತಿದೊಡ್ಡ ಎಕ್ಸ್ಪ್ರೆಸ್ ಸಾರಿಗೆ ಕಂಪನಿ ಎಲೆಕ್ಟ್ರಿಕ್ ವಾಹನ ಪ್ರಯೋಗ ಆರಂಭಿಸಿದೆ. ಭಾರತದಲ್ಲಿ 2040ರ ಹೊತ್ತಿಗೆ ಇಂಗಾಲದ ತಟಸ್ಥ ಕಾರ್ಯಾಚರಣೆಗಳ ಜಾಗತಿಕ ಗುರಿಯನ್ನು ಸಾಧಿಸುವ ಭಾಗವಾಗಿ ಎಲೆಕ್ಟ್ರಿಕ್ ವಾಹನ (Electric Vehicle) ಪ್ರಯೋಗಗಳನ್ನು ಪ್ರಾರಂಭಿಸಿದೆ. ಈ ಮೂಲಕ ಇ ಕಾಮರ್ಸ್‌ನಲ್ಲಿ ಅತೀ ದೊಡ್ಡ ಬದಲಾವಣೆ ಹಾಗೂ ಪರಿಸರ ಪೂರಕ ಸಾರಿಗೆ ವ್ಯವಸ್ಥೆ ಬಳಸಿಕೊಳ್ಳಲು ಮುಂದಾಗಿದೆ.  

ಇದು ಯೂ ಟ್ಯೂಬಲ್ಲಿ ಶೇರ್ ಆದ ಮೂಲ ವೀಡಿಯೋ. ಡ್ರೈವಿಂಗ್ ಸ್ಕಿಲ್ ಅನ್ನುವ ಯೂ ಟ್ಯೂಬ್ ಚಾನೆಲ್ ಇಂಥ ಹಲವು ವೀಡಿಯೋಗಳನ್ನು ಶೇರ್ ಮಾಡಿಕೊಂಡಿದ್ದು, ಮಿಲಿಯನ್ ಗಟ್ಟಲೆ ವ್ಯೂಸ್ ಪಡೆದುಕೊಂಡಿವೆ. 

 

click me!