ಕರ್ನಾಟಕದ ಪಶ್ಚಿಮ ಘಟ್ಟದ ಪ್ರಸಿದ್ಧ ಪುಣ್ಯ ಕ್ಷೇತ್ರಗಳಲ್ಲಿ ಕೊಲ್ಲೂರು ಒಂದು. ಕೊಡಚಾದ್ರಿಯ ಬುಡದಲ್ಲಿ, ಸೌಪರ್ಣಿಕಾ ನದಿ ತೀರದಲ್ಲಿ ಈ ಪುಣ್ಯ ಕ್ಷೇತ್ರವಿದೆ.
- ಪಾರ್ವತಿ, ಸರಸ್ವತಿ ಹಾಗೂ ಲಕ್ಷ್ಮಿ ಸ್ವರೂಪಿಯಾದ ಮೂಕಾಂಬಿಕೆಗೆ ತಮಿಳರು, ತುಳುvವರು ಕನ್ನಡಿಗರೂ ನಡೆದುಕೊಳ್ಳುತ್ತಾರೆ. ಮಲಯಾಳಿ ಭಕ್ತರು ಹೆಚ್ಚು ಆಗಮಿಸುತ್ತಾರೆ.
- ದುಷ್ಟ ಮೂಕಾಸುರನ ಹತ್ಯೆಗಾಗಿ ಆದಿಶಕ್ತಿ ಅವತಾರ ತಾಳಿದಳು ಮೂಕಾಂಬಿಕೆ. ಈ ಅವತಾರವನ್ನು ಕಂಡ ತ್ರಿಮೂರ್ತಿಗಳು ಬೆರಗಾದರಂತೆ. ಈಕೆಯ ಎಡಭಾಗದಲ್ಲಿ ಮಹಾಕಾಳಿ, ಮಹಾಲಕ್ಷ್ಮಿ ಹಾಗೂ ಸರಸ್ವತಿ ಇರುತ್ತಾರೆ. ಬಲ ಭಾಗದಲ್ಲಿ ಬ್ರಹ್ಮ, ವಿಷ್ಣು ಹಾಗೂ ಶಿವನನ್ನು ಸ್ಥಾಪಿಸಿಕೊಂಡಿದ್ದಾಳೆ.
- ಆದಿ ಶಂಕರಾಚಾರ್ಯರು ತಪಸ್ಸು ಮಾಡುತ್ತಿರುವಾಗ ದೇವಿಯು ಅವರಿಗೆ ದಿವ್ಯ ದೃಷ್ಟಿಯಲ್ಲಿ ಕಾಣಿಸಿಕೊಂಡಿದ್ದು, ಅದಕ್ಕೆ ಅವರು ಶ್ರೀ ಚಕ್ರದ ಮೇಲೆ ವಿಗ್ರಹವನ್ನು ಸ್ಥಾಪಿಸಿದರು.
- ದೇವಾಲಯದ ಮುಂದಿರುವ ಕಬ್ಬಿಣದ ಕಂಬಕ್ಕೆ 2300 ವರ್ಷಗಳ ಇತಿಹಾಸವಿದೆ. ಇದೂವರೆಗೂ ಇದು ತುಕ್ಕು ಹಿಡಿದಿಲ್ಲ ಎನ್ನುವುದೇ ವಿಶೇಷ. ಈ ಬಗ್ಗೆ ಸಂಶೋಧನೆಯೂ ನಡೆಯುತ್ತಿದೆ.
- ಕೊಲ್ಲೂರು ಎಂಬ ಹೆಸರು ಬಂದಿದ್ದು ಕೋಲ ಮಹರ್ಷಿಯ ಕಾರಣದಿಂದ.
- ಏಳು ಮುಕ್ತಿ ಸ್ಥಳಗಳಲ್ಲಿ ಒಂದಾದ ಕೊಲ್ಲೂರಿನಲ್ಲಿ ಮಾತ್ರ ಪರಶುರಾಮ ಪಾರ್ವತಿ ವಿಗ್ರಹ ಸ್ಥಾಪಿಸಿದ್ದನಂತೆ.
- ಈ ದೇವಾಲಯದಲ್ಲಿಯೇ ಕುಳಿತುಕೊಂಡು ಆದಿ ಶಂಕರರು ಸೌಂದರ್ಯ ಲಹರಿ ಬರೆದಿದ್ದು.
- ದೇವಾಲಯದಲ್ಲಿರುವ ಮಂಟಪದಲ್ಲಿ ರಾಜಾ ರವಿವರ್ಮ ಬರೆದಿರುವ ಚಿತ್ರವಿದೆ.
- ಈ ದೇವಿಗೆ ಚಿನ್ನದ ಮುಖವಾಡ ಮಾಡಿಸಿಕೊಟ್ಟವರು ವಿಜಯನಗರದ ಅರಸರು.
- ಹಲವೆಡೆಯಿಂದ ಬಂದ ಜನರು ಮಕ್ಕಳಿಗೆ ಇಲ್ಲಿ ಅಕ್ಷರಾಭ್ಯಾಸ ಮಾಡಿಸುತ್ತಾರೆ.
- ಖ್ಯಾತ ಹಾಡುಗಾರ ಯೇಸುದಾಸ್ ತಮ್ಮ ಹುಟ್ಟುಹಬ್ಬದಂದು ಈ ಕ್ಷೇತ್ರಕ್ಕೆ ಭೇಟಿ ನೀಡಿ, ಸಂಗೀತ ಸೇವೆ ಸಲ್ಲಿಸಿ ಹೋಗುತ್ತಾರೆ.
ಪವಾಡಗಳ ಆಗರ ಶ್ರೀ ಸಿಗಂದೂರು ಚೌಡೇಶ್ವರಿ
ಶಿರಡಿ ಸಾಯಿ ಬಾಬಾರ ಶಾಕಿಂಗ್ ಫ್ಯಾಕ್ಸ್ಟ್!