ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು
ಚಿಕ್ಕಮಗಳೂರು (ನ.11): ಸನಾತನ ಹಿಂದೂ ಸಮಾಜ ಪರಿಷತ್ ವತಿಯಿಂದ ಸಮಾನ ಸಂಸ್ಕಾರ ಬೃಹತ್ ಸಮಾವೇಶಕ್ಕೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಹರಿಹರಪುರ ಮಠ ಇಂದು ಸಾಕ್ಷಿ ಆಯಿತು. ಸಂಸ್ಕಾರ ಹಬ್ಬದಲ್ಲಿ ಸಾವಿರಾರು ಜನರು ಹಾಗೂ ಭಕ್ತರ ಸಮ್ಮುಖದಲ್ಲಿ ಅರ್ಥಪೂರ್ಣವಾಗಿ ನಡೆಯಿತು.
ಅಮೆರಿಕದಲ್ಲಿ ಸಾಮೂಹಿಕ ಭಗವದ್ಗೀತೆ ಪಾರಾಯಣ; ಗಿನ್ನೆಸ್ ದಾಖಲೆ
ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಹರಿಹರಪುರ ಮಠದಲ್ಲಿ ನಡೆದ ಈ ಸಂಸ್ಕಾರ ಹಬ್ಬ. ಕೊಪ್ಪ ತಾಲೂಕು ವ್ಯಾಪ್ತಿಯ 23 ಸಾವಿರಕ್ಕೂ ಹೆಚ್ಚು ಹಿಂದೂಗಳ ಮನೆಗಳಿಗೆ ತೆರಳಿ ಐದು ಉತ್ತಮ ಸಮಾನ ಸಂಸ್ಕಾರಗಳ ಬಗ್ಗೆ ಮಾಹಿತಿ ನೀಡಿ, ಮೌಲ್ಯಯುತವಾದ ಸಮಾಜ ನಿರ್ಮಾಣ ಮಾಡುವ ಜೊತೆಗೆ ಶಾಲಾ, ಕಾಲೇಜು ಮಕ್ಕಳಿಗೆ ಪ್ರಬಂಧ ಸ್ಪರ್ಧೆ, ಭಗವದ್ಗೀತೆಯ ಕಂಠಪಾಠ ಮಾಡಿಸಿ, ಜಾತಿ-ಭೇದ ಮರೆತು ಎಲ್ಲಾ ಸಮುದಾಯಗಳನ್ನು ಒಗ್ಗೂಡಿಸಿ ಸನಾತನ ಹಿಂದೂ ಧರ್ಮದ ಜೊತೆಗೆ ಸಂಸ್ಕಾರ ಮೂಡಿಸುವುದು ಕಾರ್ಯಕ್ರಮದ ಉದ್ದೇಶವಾಗಿತ್ತು.
ಕಾರ್ಯಕ್ರಮದಲ್ಲಿ ಭಾಗಿಯಾದ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ
ಕಾರ್ಯಕ್ರಮವನ್ನ ಉದ್ಘಾಟಿಸಿ ಮಾತನಾಡಿದ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು, ಇಂತಹ ಸಂಸ್ಕಾರ ಹಬ್ಬದ ಸಮಾವೇಶ ಮಾಡುವ ಪರಿಸ್ಥಿತಿ ಎದುರಾಗಿದೆ. ಕೂಡಲೇ ಇಂತಹ ಸಂಸ್ಕಾರ ನಮ್ಮ ಸಮಾಜದಲ್ಲಿ ಮನೆ-ಮನೆ ತಲುಪುವ ಅಗತ್ಯವಿದೆ. ದೇಶ ಹಾಗೂ ನಮ್ಮ ಸಂಸ್ಕೃತಿ ಸಾರುವುದು ಪ್ರತಿಯೊಬ್ಬರ ಕರ್ತವ್ಯ ಎಂದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಹರಿಹರಪುರ ಶ್ರೀಮಠದ ಸ್ವಯಂ ಪ್ರಕಾಶ ಸಚ್ಚಿದಾನಂದ ಸರಸ್ವತೀ ಸ್ವಾಮೀಜಿ, ಯಾರ ಭಾವನೆಗೂ ಧಕ್ಕೆ ಬಾರದಂತೆ ಎಲ್ಲರನ್ನೂ ಒಂದು ಚೌಕಟ್ಟಿನಲ್ಲಿ ತರುವ ನಿಟ್ಟಿನಲ್ಲಿ ಈ ಕಾರ್ಯ ನಡೆಯುತ್ತಿದೆ. ಸನಾತನ ಹಿಂದೂ ಧರ್ಮದಲ್ಲೇ ಇಂತಹಾ ಸಮಾವೇಶ ಇದೇ ಮೊದಲು ಎಂದರು. 23 ಸಮುದಾಯ ಗುರುತಿಸಿ, ಪರಿಶಿಷ್ಠ, ಜಾತಿ, ಪಂಗಡದಿಂದ ಪುರೋಹಿತ ವರ್ಗದವರನ್ನು ಸೇರಿಸಿಕೊಂಡು ಈ ಸಮಾವೇಶ ಮಾಡುತ್ತಿದ್ದೇವೆ ಎಂದರು.
ಮೈಸೂರಿನ ಅವಧೂತ ದತ್ತ ಪೀಠಾಧಿಪತಿಗಳಿಂದ ದಾಖಲೆ: ಗಿನ್ನಿಸ್ ರೆಕಾರ್ಡ್ ಸೇರಿದ ಅತೀ ದೊಡ್ಡ ಹಿಂದೂ ಪಠ್ಯವಾಚನ
ಸಮಾನ ಸಂಸ್ಕಾರ ಸಮಾವೇಶದಲ್ಲಿ ಪರಮಪೂಜ್ಯ ಜಗದ್ಗುರು ಶ್ರೀ.ಶ್ರೀ.ಶಿವಾನುಭವ ಚರಮೂರ್ತಿ, ಶಿವರುದ್ರ ಮಹಾಸ್ವಾಮಿಗಳು, ಬೇಲಿಮಠ ಮಹಾಸಂಸ್ಥಾನ ಬೆಂಗಳೂರು, ಪರಮಪೂಜ್ಯ ಶ್ರೀಗಳಾದ ಶಂಕರಾಚಾರ್ಯ ಸ್ವಯಂ ಪ್ರಕಾಶ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮಿಗಳವರು ಸಾನಿಧ್ಯ ವಹಿಸಿದರು. ಸಿಎಂ ರಾಜಕೀಯ ಕಾರ್ಯದರ್ಶಿ ಡಿ ಎನ್ ಜೀವರಾಜ್ ,ಶಾಸಕ ಟಿ ಡಿ ರಾಜೇಗೌಡ ಜೆಡಿಎಸ್ ಪಕ್ಷದ ರಾಜ್ಯ ಉಪ್ಯಾಧ್ಯಕ್ಷ ಸುಧಾಕರ್ ಶೆಟ್ಟಿ ಉಪಸ್ಥಿತಿದರು.