ಮೈಸೂರಿನ ಅವಧೂತ ದತ್ತ ಪೀಠಾಧಿಪತಿಗಳಿಂದ ದಾಖಲೆ: ಗಿನ್ನಿಸ್‌ ರೆಕಾರ್ಡ್‌ ಸೇರಿದ ಅತೀ ದೊಡ್ಡ ಹಿಂದೂ ಪಠ್ಯವಾಚನ

ಮೈಸೂರಿನ ಅವಧೂತ ದತ್ತ ಪೀಠಾಧಿಪತಿಗಳಾದ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರ ಮಾರ್ಗದರ್ಶನಲ್ಲಿ ಭಗವದ್ಗೀತಾ ಪಾರಾಯಣ ಮಾಡಲಾಯಿತು. 

First Published Aug 16, 2022, 10:35 AM IST | Last Updated Aug 16, 2022, 10:34 AM IST

ಮೈಸೂರು(ಆ.16):  ಮೈಸೂರಿನ ಅವಧೂತ ದತ್ತ ಪೀಠಾಧಿಪತಿಗಳಾದ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರ ಮಾರ್ಗದರ್ಶನಲ್ಲಿ ಭಗವದ್ಗೀತಾ ಪಾರಾಯಣ ಮಾಡಲಾಯಿತು. ಅಮೆರಿಕದ ಡಲಾಸ್‌ ನಗರದಲ್ಲಿ ಎರಡೂ ಸಾವಿರಕ್ಕೂ ಹೆಚ್ಚು ಮಂದಿ ಸಂಪೂರ್ಣ ಭಗವದ್ಗೀತೆ ಪಾರಾಯಣ ಮಾಡಿ ವಿಶ್ವದಾಖಲೆ ಸೃಷ್ಟಿಸಿದ್ದಾರೆ. ಅಲ್ಲದೆ ಅತೀ ದೊಡ್ಡ ಏಕಕಾಲಿಕ ಹಿಂದೂ ಪಠ್ಯ ವಾಚನ ಎಂಬ ಗಿನ್ನೀಸ್‌ ದಾಖಲೆಯನ್ನ ಪಡೆದಿರೋದು ಮತ್ತೊಂದು ವಿಶೇಷ. ಭಗವದ್ಗೀತೆ ಪಾರಾಯಣ ಕಾರ್ಯಕ್ರಮಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪೂಜ್ಯ ಸ್ವಾಮೀಜಿಯವರು ವಿದೇಶದಲ್ಲಿ ಭಾರತದ ಸಂಸ್ಕೃತಿಯನ್ನು ಪಸರಿಸುತ್ತಿರುವುದು ಶ್ಲಾಘನೀಯ ಅಂತ ಪತ್ರದ ಮೂಲಕ ಪ್ರಧಾನಿ ಅಭಿನಂದಿಸಿದ್ದಾರೆ.   

ಮೀನ ರಾಶಿಯವರ ಧನಯೋಗ: ನಿಮ್ಮ ಜಾತಕದಲ್ಲಿದೆಯಾ ಇಂಥ ಲಕ್ಷಣ?

Video Top Stories