ಧಾರವಾಡ: ಗಂಗಾವತಿ ತಾಲೂಕಿನ ಆನೆಗುಂದಿ ನವವೃಂದಾವನ ಪೂಜಾ ವಿವಾದಕ್ಕೆ ಸಂಬಂಧಿಸಿದಂತೆ ಮಂತ್ರಾಲಯದ ರಾಯರ ಮಠದ ರಿಟ್ ಅರ್ಜಿಯನ್ನು ಇಲ್ಲಿನ ಹೈಕೋರ್ಟ್ ಪೀಠ ವಜಾಗೊಳಿಸಿದೆ.
ಕನ್ನಡಪ್ರಭ ವಾರ್ತೆ ಧಾರವಾಡ
ಧಾರವಾಡ: ಗಂಗಾವತಿ ತಾಲೂಕಿನ ಆನೆಗುಂದಿ ನವವೃಂದಾವನ ಪೂಜಾ ವಿವಾದಕ್ಕೆ ಸಂಬಂಧಿಸಿದಂತೆ ಮಂತ್ರಾಲಯದ ರಾಯರ ಮಠದ ರಿಟ್ ಅರ್ಜಿಯನ್ನು ಇಲ್ಲಿನ ಹೈಕೋರ್ಟ್ ಪೀಠ ವಜಾಗೊಳಿಸಿದೆ.
ರಘುವರ್ಯತೀರ್ಥರ ಆರಾಧನೆ ಹಾಗೂ ಜಯತೀರ್ಥರ ಆರಾಧನೆಯ ಪೂಜಾ ವಿಚಾರವಾಗಿ ಉತ್ತರಾದಿ ಮಠ ಮತ್ತು ರಾಯರ ಮಠದ ನಡುವೆ ವಿವಾದವಿದೆ. ಹೀಗಾಗಿ ಗಂಗಾವತಿ ತಾಲೂಕಾಡಳಿತ ಜು.13ರಿಂದ 21ರ ವರೆಗೂ ನವವೃಂದಾವನ ಪ್ರದೇಶ ಸೇರಿದಂತೆ ಸುತ್ತಲಿನ ಪ್ರದೇಶದಲ್ಲಿ 144 ಸೆಕ್ಷನ್ ಜಾರಿ ಮಾಡಿದ್ದು ತಪ್ಪು ಹಾಗೂ ತಮಗೂ ಪೂಜೆಗೆ ಅವಕಾಶ ಕಲ್ಪಿಸಬೇಕು ಎಂದು ಮಂತ್ರಾಲಯದ ರಾಯರ ಮಠದವರು ಅರ್ಜಿ ಸಲ್ಲಿಸಿದ್ದರು. ವಿಚಾರಣೆ ಮಾಡಿದ ಹೈಕೋಟ್‌ನ ಏಕಸದಸ್ಯ ಪೀಠ, ವಾದ- ಪ್ರತಿವಾದವನ್ನು ಆಲಿಸಿತು. ಬಳಿಕ ಜಿಲ್ಲಾಧಿಕಾರಿ ಹೊರಡಿಸಿದ್ದ ನಿಷೇಧಾಜ್ಞೆ ಆದೇಶವನ್ನು ಎತ್ತಿ ಹಿಡಿದು ರಿಟ್ ಅರ್ಜಿಯನ್ನು ವಜಾಗೊಳಿಸಿದೆ.
ಶಿಕಾರಿಪುರ ತಾಲೂಕಿನಲ್ಲಿ ಮೃತಿಕಾ ರೂಪದಲ್ಲಿ ನೆಲೆಸಿದ ಗುರು ರಾಯರ ಮಠ ಲೋಕಾರ್ಪಣೆ
ಕಳೆದ ವರ್ಷವೂ ತಾಲೂಕಿನ ಆನೆಗೊಂದಿಯಲ್ಲಿರುವ ನವ ವೃಂದಾವನಗಡ್ಡೆಯಲ್ಲಿ ಜಯತೀರ್ಥರ ಉತ್ತರಾರಾಧನೆ ಸಂದರ್ಭದಲ್ಲಿ ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿಗಳ ಮಠ ಮತ್ತು ಉತ್ತರಾದಿ ಮಠದ ಅರ್ಚಕರ ಮಧ್ಯೆ ವಾಗ್ವಾದ ನಡೆದಿತ್ತು. ಕಳೆದ ವರ್ಷ ಜು.29ರಂದು ಜಯತೀರ್ಥರ ಉತ್ತರಾರಾಧನೆ ಇತ್ತು. ರಾಘವೇಂದ್ರ ಸ್ವಾಮಿಗಳ ಮಠದ ಅರ್ಚಕರು ಜಯತೀರ್ಥರ ವೃಂದಾವನಕ್ಕೆ ಪೂಜೆ ಸಲ್ಲಿಸಲು ಹೋಗಿದ್ದ ಸಂದರ್ಭದಲ್ಲಿ ಉತ್ತರಾದಿ ಮಠದ ಅರ್ಚಕರು ಅಡ್ಡಿಪಡಿಸಿ ಆಕ್ಷೇಪ ಎತ್ತಿದರು. ಇದರಿಂದ ಎರಡೂ ಕಡೆಯವರು ಪರಸ್ಪರ ವಾಗ್ವಾದ ನಡೆಸಿದರು. ಆದರೂ ರಾಘವೇಂದ್ರ ಸ್ವಾಮಿಗಳ ಮಠದವರು ಜಯತೀರ್ಥರ ವೃಂದಾವನಕ್ಕೆ ಪೂಜಾ ಕಾರ್ಯಕ್ರಮ ನಡೆಸಿದರು.
ರಾಯರಮಠದಲ್ಲಿ ಜಗ್ಗೇಶ್; ಪ್ರಮಾಣ ವಚನಕ್ಕೂ ಮುನ್ನ ದೇವರ ಆಶೀರ್ವಾದ ಪಡೆದ ನಟ
ನವ ವೃಂದಾವನಗಡ್ಡೆಯಲ್ಲಿರುವ 9 ಯತಿವರೇಣ್ಯರ ವೃಂದಾವನಗಳಲ್ಲಿ ಜಯತೀರ್ಥರ ವೃಂದಾವನವೂ ಇದೆ ಎಂಬುದು ರಾಘವೇಂದ್ರ ಸ್ವಾಮಿಗಳ ಮಠದ ವಾದ. ಆದರೆ ನವವೃಂದಾವನದಲ್ಲಿರೋದು ರಘುವರ್ಯರ ವೃಂದಾವನ. ಜಯತೀರ್ಥರ ಮೂಲ ವೃಂದಾವನ ಮಳಖೇಡದಲ್ಲಿದೆ ಎಂಬುದು ಉತ್ತರಾದಿ ಮಠದ ಅರ್ಚಕ ಆನಂದತೀರ್ಥಚಾರ್ ಅವರ ವಾದ. ಇದನ್ನು ರಾಘವೇಂದ್ರ ಸ್ವಾಮಿಗಳ ಮಠದವರು ವಿರೋಧಿಸಿದ್ದಾರೆ.