Asianet Suvarna News Asianet Suvarna News

'ಪಾಕ್‌ ಅಪಾಯಕಾರಿ ದೇಶ' ತನ್ನ ನಾಗರಿಕರಿಗೆ ಎಚ್ಚರಿಕೆ ನೀಡಿದ ಬ್ರಿಟನ್

ಬ್ರಿಟನ್‌ ಸರ್ಕಾರದ ವಿದೇಶಿ, ಕಾಮನ್‌ವೆಲ್ತ್ ಮತ್ತು ಅಭಿವೃದ್ಧಿ ಕಚೇರಿ (ಎಫ್‌ಸಿಡಿಒ) ಪಾಕಿಸ್ತಾನವನ್ನು ‘ಪ್ರಯಾಣಿಸಲು ತುಂಬಾ ಅಪಾಯಕಾರಿ ದೇಶ’ ಎಂಬ ಪಟ್ಟಿಗೆ ಸೇರಿಸಿದೆ. ತನ್ನ ನಾಗರಿಕರಿಗೆ ಈ ಸಂಬಂಧ ಅದು ಸೂಚನೆ ನೀಡಿದೆ.

UK Foreign office adds pakistan to tts list of countries too Dangerous toravel rav
Author
First Published Apr 14, 2024, 9:16 AM IST

ಇಸ್ಲಾಮಾಬಾದ್: ಬ್ರಿಟನ್‌ ಸರ್ಕಾರದ ವಿದೇಶಿ, ಕಾಮನ್‌ವೆಲ್ತ್ ಮತ್ತು ಅಭಿವೃದ್ಧಿ ಕಚೇರಿ (ಎಫ್‌ಸಿಡಿಒ) ಪಾಕಿಸ್ತಾನವನ್ನು ‘ಪ್ರಯಾಣಿಸಲು ತುಂಬಾ ಅಪಾಯಕಾರಿ ದೇಶ’ ಎಂಬ ಪಟ್ಟಿಗೆ ಸೇರಿಸಿದೆ. ತನ್ನ ನಾಗರಿಕರಿಗೆ ಈ ಸಂಬಂಧ ಅದು ಸೂಚನೆ ನೀಡಿದೆ.

ತಮ್ಮ ಇತ್ತೀಚಿನ ವರದಿಯಲ್ಲಿ ಬ್ರಿಟನ್‌ ಸರ್ಕಾರವು ಅಪಾಯಕಾರಿ ದೇಶಗಳ ಪಟ್ಟಿ ಇನ್ನೂ 8 ದೇಶಗಳನ್ನು ಸೇರಿಸಿದೆ. ಇದರೊಂದಿಗೆ ದೇಶಗಳ ಸಂಖ್ಯೆ 24ಕ್ಕೇರಿದೆ ಎಂದು ಜಿಯೋ ನ್ಯೂಸ್ ವರದಿ ಮಾಡಿದೆ.

ಅಪರಾಧ, ಯುದ್ಧ, ಭಯೋತ್ಪಾದನೆ, ರೋಗ, ಹವಾಮಾನ ಪರಿಸ್ಥಿತಿಗಳು ಮತ್ತು ನೈಸರ್ಗಿಕ ವಿಕೋಪಗಳನ್ನು ಗಮನದಲ್ಲಿ ಇರಿಸಿಕೊಂಡು ಪಟ್ಟಿ ಸಿದ್ಧಪಡಿಸಲಾಗಿದೆ. ಈ ಕಾರಣಗಳಿಂದ ಅಂಥ ದೇಶಗಳಿಗೆ ಹೋಗುವುದು ತರವಲ್ಲ ಎಂದು ತನ್ನ ನಾಗರಿಕರಿಗೆ ಬ್ರಿಟನ್ ಸೂಚನೆ ನೀಡಿದೆ

ಪತ್ನಿ ಹಂತಕ ಭಾರತೀಯನ ಸುಳಿವು ನೀಡಿದವರಿಗೆ ₹2 ಕೋಟಿ ಇನಾಮು ಘೋಷಿಸಿದ ಎಫ್‌ಬಿಐ!

ಹೊಸದಾಗಿ ಸೇರ್ಪಡೆಯಾದ ದೇಶಗಳೆಂದರೆ ರಷ್ಯಾ, ಉಕ್ರೇನ್ (ಸಂಘರ್ಷಪೀಡಿತ ಗಾಜಾ ಸೇರಿ), ಇಸ್ರೇಲ್, ಇರಾನ್, ಸುಡಾನ್, ಲೆಬನಾನ್, ಬೆಲಾರಸ್ ಮತ್ತು ಪಾಕಿಸ್ತಾನ.

2023ರಲ್ಲಿ, ಪಾಕಿಸ್ತಾನವು 1,524 ಹಿಂಸಾಚಾರ-ಸಂಬಂಧಿತ ಸಾವುನೋವುಗಳಿಗೆ ಸಾಕ್ಷಿಯಾಗಿದೆ ಮತ್ತು 789 ಭಯೋತ್ಪಾದಕ ದಾಳಿಗಳನ್ನು ಕಂಡಿದೆ,

Follow Us:
Download App:
  • android
  • ios